ಭಾನುವಾರ, ಸೆಪ್ಟೆಂಬರ್ 26, 2021
21 °C

ಕೆಣಕಿದ್ರೆ ಗುರ್ರ್... ಇದು ವೈಷ್ಣವಿ ವರಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಣಕಿದ್ರೆ ಸಾಕು ಗುರ್ ಅಂತಾರೆ ವೈಷ್ಣವಿ ಗೌಡ. ಬಿಗ್‌ ಬಾಸ್‌ ಮನೆಯಲ್ಲಿ ವೈಷ್ಣವಿ ಹಾಡುತ್ತಿದ್ದಾಗ ಶಮಂತ್‌ ಕಾಲೆಳೆದದ್ದು ವೈಷ್ಣವಿಯ ಕೋಪಕ್ಕೆ ಕಾರಣ.

ಎಷ್ಟು ಚಂದ ಇವಳು.. ಯಾವ ರಾಣಿ ಮಗಳು... ಎಂದು ವೈಷ್ಣವಿ ರಾಗವಾಗಿ ಹಾಡುತ್ತಿದ್ದರು. ಆಗ ಶಮಂತ್‌... ಡವ್‌ ರಾಣಿ ಮಗಳು ಎಂದು ಕಾಲೆಳೆದರು. ಆ ಮಾತಿಗೆ ಇನ್ನೇನೋ ಅರ್ಥ ಕಲ್ಪಿಸಿಕೊಂಡು ಶಮಂತ್‌ ಜತೆ ವಾದಕ್ಕಿಳಿದರು. ಇದು ಜಗಳದವರೆಗೆ ಹೋಯಿತು.

‘ನೀವು ನನಗೆ ಏನು ಬೇಕಿದ್ದರೂ ಹೇಳಿ. ನನ್ನ ಕುಟುಂಬದ ಬಗ್ಗೆ ಮಾತ್ರ ಮಾತನಾಡಬೇಡಿ’ ಎಂದು ಎಚ್ಚರಿಸಿದರು. ಆಗ ಶಮಂತ್, ನಾನು ನಿಮ್ಮ ಕುಟುಂಬದ ಬಗ್ಗೆ ಮಾತನಾಡಿಲ್ಲವಲ್ಲ! ಪ್ರಾಸ ಕೂಡುತ್ತದೆ ಎನ್ನುವ ಕಾರಣಕ್ಕೆ ಆ ರೀತಿ ಹೇಳಿದೆ. ಅದನ್ನು ನಾನು ಹೇಳಿದ್ದು ರಘು ಅವರಿಗೆ’ ಎಂದರು. ಆದರೆ ವೈಷ್ಣವಿಯ ಕೋಪ ಏರುತ್ತಲೇ ಇತ್ತು.

ಅಲ್ಲಿಯೇ ಇದ್ದ ರಘು ಅವರು, ವೈಷ್ಣವಿ ಅವರನ್ನು ಸಮಾಧಾನಿಸಲು ಬಂದರು. ಆದರೆ, ವೈಷ್ಣವಿ ಪ್ರತಿಕ್ರಿಯಿಸಿ, ‘ದಯವಿಟ್ಟು ಇರಿಟೇಟ್ ಮಾಡಬೇಡಿ. ನನ್ನನ್ನು ನನ್ನಷ್ಟಕ್ಕೆ ಬಿಟ್ಟುಬಿಡಿ’ ಎಂದರು.

ಸ್ವಲ್ಪ ಹೊತ್ತಿನ ಬಳಿಕ ವೈಷ್ಣವಿ ಬಳಿ ತೆರಳಿದ ಶಮಂತ್ ಸಮಾಧಾನಿಸಲು ಮುಂದಾದರು. ಆಗಲೂ ವೈಷ್ಣವಿ ‘ನನ್ನ ಬಗ್ಗೆ ಮಾತನಾಡಿ, ಕುಟುಂಬದ ಬಗ್ಗೆ ಮಾತ್ರ ಮಾತನಾಡಬೇಡಿ’ ಎಂದರು. ‘ನನ್ನ ಮಾತಿನ ಅರ್ಥ ಆ ರೀತಿ ಆಗಿರಲಿಲ್ಲ’ ಎಂದು ಶಮಂತ್‌ ಪರಿಪರಿಯಾಗಿ ಹೇಳಿದರಾದರೂ ವೈಷ್ಣವಿ ಅವರಿಗೆ ಸಮಾಧಾನ ಆಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು