ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBK 10 | ಬಿಗ್‌ ಬಾಸ್-ಸುಂದರ ನೆನಪುಗಳ ಮರೆಯಲಾಗದ ಪಯಣ: ತುಕಾಲಿ ಸಂತೋಷ್

Published 30 ಜನವರಿ 2024, 13:01 IST
Last Updated 30 ಜನವರಿ 2024, 13:01 IST
ಅಕ್ಷರ ಗಾತ್ರ
ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಎಲ್ಲ ಸ್ಪರ್ಧಿಗಳ ನಗುವಿನ ಮೊತ್ತ ತೆಗೆದರೆ ಅದರ ಬಹುಪಾಲು ತುಕಾಲಿ ಸಂತೋಷ್ ಅವರಿಗೆ ಹೋಗುತ್ತದೆ. ಅಷ್ಟೇ ಅಲ್ಲ, ಮನೆಯೊಳಗಿನ ಭಿನ್ನಾಭಿಪ್ರಾಯಗಳ ಮೂಲಗಳನ್ನು ಹುಡುಕಿದರೆ ಅದರಲ್ಲಿಯೂ ತುಕಾಲಿ ಅವರ ಕೊಡುಗೆ ಸಣ್ಣದಲ್ಲ. ಹೀಗೆ ನಗುನಗಿಸುತ್ತಲೇ ಚಾಣಾಕ್ಷ ತಂತ್ರವನ್ನೂ ಹೆಣೆಯುವ ವ್ಯಕ್ತಿತ್ವ ತುಕಾಲಿ ಸಂತೋಷ್ ಅವರದ್ದು. ಬಿಗ್‌ ಬಾಸ್‌ನ 5ನೇ ರನ್ನರ್ ಅಪ್ ಆಗಿ ಹೊಮ್ಮಿರುವ ತುಕಾಲಿ ಸಂತೋಷ್ ಜಿಯೊ ಸಿನೆಮಾ ನಡೆಸಿದ ಸಂದರ್ಶನದಲ್ಲಿ ತಮ್ಮ ಪಯಣದ ಅನುಭವವನ್ನು ಹಂಚಿಕೊಂಡಿದ್ದಾರೆ.

ಬಿಗ್‌ ಬಾಸ್ ಜರ್ನಿ ಹೇಗಿತ್ತು?

ಈ ಸೀಸನ್‌ನಲ್ಲಿ ಟಾಪ್‌ 6 ಫಿನಾಲೆ ಕಂಟೆಸ್ಟೆಂಟ್ಸ್‌ಗಳಲ್ಲಿ ನಾನೂ ಒಬ್ಬ. 5ನೇ ರನ್ನರ್ ಅಪ್ ಆಗಿದ್ದೇನೆ. ನಿಮ್ಮೆಲ್ಲರ ಪ್ರೀತಿಯಿಂದ ನಾನು ಈ ಜಾಗದಲ್ಲಿದ್ದೀನಿ. ಸಿಕ್ಕಾಪಟ್ಟೆ ಕುತೂಹಲ ಇತ್ತು. ನಾನು ಮನೆಗೆ ಹೋಗುವಾಗಲೇ ಅಂದುಕೊಂಡಿದ್ದೆ. ಶೋ ಮುಗಿಯುವ ದಿನವೇ ಮನೆಯಿಂದ ಹೊರಗೆ ಬರಬೇಕು ಅಂತ. ಹಾಗೇ ಆಗಿದೆ. ಗ್ರ್ಯಾಂಡ್ ಫಿನಾಲೆ ದಿನ ವೇದಿಕೆಯ ಮೇಲಿಂದ ಬೀಳ್ಕೊಟ್ಟು ಅಲ್ಲಿಂದ ಹೋಗಿದ್ದೇನೆ. ತುಂಬಾ ಖುಷಿಯಾಗುತ್ತಿದೆ.

ಫಿನಾಲೆಗೆ ಬಂದ ಕ್ಷಣ ಹೇಗಿತ್ತು?

ಬಿಗ್‌ ಬಾಸ್ ಮನೆಯಲ್ಲಿ ಪ್ರತಿಯೊಂದೂ ವಿಷಯವೂ ಸವಾಲೇ. ಆ ಎಲ್ಲ ಸವಾಲುಗಳನ್ನು ಎದುರಿಸಿ ಫಿನಾಲೆಯವರೆಗೆ ಬಂದು ಕಾಮಿಡಿಯಲ್ಲಿ ನನ್ನದೇ ಆದ ಛಾಪು ಮೂಡಿಸಿದ್ದೀನಿ.

ಬಿಗ್‌ ಬಾಸ್‌ ಮನೆಯಿಂದ ಏನನ್ನು ಮಿಸ್‌ ಮಾಡ್ಕೋಳ್ತಿರಾ?

ಬಿಗ್‌ ಬಾಸ್‌ ಮನೆಯಲ್ಲಿ ತುಂಬಾ ಇಷ್ಟವಾದ ಕ್ಷಣವೆಂದರೆ ಮಾತ್ರೆ ತಂದು ಕೊಡುತ್ತಿದ್ದದ್ದು. ಇನ್ಮೇಲಿಂದ ‘ಮಾತ್ರೆ ತಂದ್ಕೊಡೋರು ಯಾರೋ ಅಣ್ಣಾ… ಚಪಾತಿ ಒತ್ಕೊಡೋರು ಯಾರೋ ಅಣ್ಣಾ… ಯಾರೋ ಅಣ್ಣಾ…’ ಎಂದು ಹಾಡುವಂತಾಗಿದೆ. ತಿಂದ್ಯಾ, ಮಲಗಿದ್ಯಾ, ಏನು ಮಾಡ್ದೆ? ಅಂತೆಲ್ಲ ಕೇಳೋರು ಯಾರೂ ಇಲ್ಲ.

ಬಿಗ್‌ಬಾಸ್‌ ಮನೆಯಲ್ಲಿ ಅಲಾರಾಂ ರೀತಿಯಲ್ಲಿ ಒಂದು ಹಾಡು ಬರುತ್ತಿತ್ತು. ನಿದ್ದೆಗಣ್ಣಲ್ಲಿದ್ರೂ ಆ ಹಾಡು ಕೇಳಿದ ತಕ್ಷಣ ರಪ್ ಅಂತ ಎಚ್ಚರ ಆಗಿ ಬಿಡುತ್ತದೆ. ಅದನ್ನು ತುಂಬ ಮಿಸ್ ಮಾಡ್ಕೋತೀನಿ. ಹಾಗೆ ಎಲ್ಲ ಸ್ಪರ್ಧಿಗಳನ್ನೂ ಮಿಸ್ ಮಾಡ್ಕೋತೀನಿ. ಈ 111 ದಿನಗಳಲ್ಲಿ ಮಿಸ್ ಮಾಡ್ಕೊಳ್ಳೋದು ತುಂಬಾ ಇದೆ. ಎಲ್ಲವನ್ನೂ ಮಿಸ್ ಮಾಡ್ಕೋತೀನಿ. ಆ ನೆನಪುಗಳನ್ನು ಬರೆಯಬೇಕು ಎಂದರೆ ‌111 ಪಿಚ್ಚರ್ ಸ್ಟೋರಿ ಹೇಳಬೇಕಾಗುತ್ತದೆ.

ಸ್ಪರ್ಧಿಗಳ ಬಗ್ಗೆ ನಿಮ್ಮ ಅಭಿಪ್ರಾಯ?

ಈ ಸಲದ ಸೀಸನ್‌ನಲ್ಲಿ ಕಾರ್ತಿಕ್‌ ಹೀರೊ. ಪ್ರತಾಪ್‌ ಪೋಷಕ ನಟ. ಸಂಗೀತಾ ಶೃಂಗೇರಿ ಆ ಸಿನಿಮಾದ ಹೀರೊಯಿನ್ ಇದ್ದ ಹಾಗೆ. ಹೀರೊ, ಹೀರೊಯಿನ್ ಇದ್ದ ಮೇಲೆ ವಿನಯ್ ವಿಲನ್ ಆಗಿರಲೇಬೇಕಲ್ಲಾ?. ವರ್ತೂರು ಸಂತೋಷಣ್ಣ ನ್ಯಾಯ ಕೊಡುವ ದೇವರ ತರ. ಕರ್ಣನ ತರ. ಅವರ ಬಗ್ಗೆ ಹೇಳೋಕೆ ಒಂದಾ ಎರಡಾ ಇರೋದು. ತುಂಬ ಹೇಳಬಹುದು.

ಈ ಸೀಸನ್‌ ಬಗ್ಗೆ ಏನು ಹೇಳುತ್ತೀರಿ?

ಈ 111 ದಿನಗಳ ಪಯಣವನ್ನು ಒಂದೇ ಸಾಲಿನಲ್ಲಿ ಹೇಳಬೇಕು ಅಂದ್ರೆ, ‘ನೆನಪುಗಳ ಮಾತು ಮಧುರ…’.

ಬಿಗ್‌ ಬಾಸ್ ಐ ಮಿಸ್ ಯೂ… ಐ ಲವ್ ಯೂ… ನಿಮ್ಮ ಧ್ವನಿ ನನ್ನನ್ನು ತುಂಬಾ ಎಚ್ಚರಗೊಳಿಸಿತ್ತು. ಒಂದು ಅಶರೀರವಾಣಿ ನಮ್ಮನ್ನೆಲ್ಲ ಕಂಟ್ರೋಲ್‌ ಮಾಡಿತ್ತು ಅಂದ್ರೆ ನೀವು ಎಷ್ಟು ಸ್ಟ್ರಾಂಗ್ ಇರಬೇಕು. ನಿಮ್ಮ ಮನಸ್ಸು ಎಂಥದ್ದಿರಬೇಕು. ನನಗೆ ಸ್ಪಷ್ಟವಾಗಿ ಇದ್ದ ಆಸೆಗಳನ್ನು ಪೂರೈಸಿದ್ದಾರೆ. ನಾನು ಅಂದುಕೊಂಡಿದ್ದೆಲ್ಲ ಕೊಟ್ಟಿದೀರಾ. ಅದಕ್ಕಿಂತ ಹೆಚ್ಚು ಕೊಟ್ಟಿದೀರಾ. ನಾನು ನಕ್ಕಾಗ ನೀವೂ ನಕ್ಕಿದೀರಾ. ನೋವಲ್ಲಿ ನೋವು ಸಹಿಸಿಕೊಂಡಿದ್ದೀರಾ. ನನ್ನ ಜೀವನದಲ್ಲಿ ಬಿಗ್‌ ಬಾಸ್ ಎಂಬುವುದು ಒಂದು ಇತಿಹಾಸ. ಇದಕ್ಕಾಗಿ ನಾನು ಧನ್ಯವಾದ ಹೇಳುತ್ತೇನೆ.

ಮಿಸ್‌ ಯೂ ಬಿಗ್‌ ಬಾಸ್‌.. ಲವ್‌ ಯೂ ಬಿಗ್‌ ಬಾಸ್‌...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT