ಬಿಗ್ಬಾಸ್ ಮನೆಯಲ್ಲಿ ಕಳೆದ ಎರಡು ವಾರಗಳಿಂದ ತಾನು, ತನ್ನ ಕೆಲಸ ಎಂದು ಸುಮ್ಮನಿದ್ದ ಅಶ್ವಿನಿ ಗೌಡ ಈಗ ರೆಬೆಲ್ ಆಗಿದ್ದಾರೆ. ಏಕಾಏಕಿ ಅಶ್ವಿನಿ ಗೌಡ ಅವರು ರಜತ್ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಕಲರ್ಸ್ ಕನ್ನಡ ಬಿಡುಗಡೆ ಮಾಡಿದ ಪ್ರೊಮೋದಲ್ಲಿ ಈಜುಕೊಳಕ್ಕೆ ಬಿದ್ದ ಅಶ್ವಿನಿ ಅಲ್ಲೇ ಕೆಂಡಾಮಂಡಲರಾಗಿದ್ದಾರೆ.

ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ ಪ್ರೊಮೋದಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಈ ವೇಳೆ ರಜತ್ ಕಿಶನ್ ಅವರು ಅಶ್ವಿನಿ ಗೌಡ ಅವರನ್ನು ನಾಮಿನೇಟ್ ಮಾಡಿದ್ದಾರೆ. ತಕ್ಷಣವೇ ಅಶ್ವಿನಿ ಗೌಡ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
.BBK12: ಬಿಗ್ಬಾಸ್ ಮನೆಗೆ ಬರುತ್ತಿದ್ದಂತೆ ಬದಲಾಯ್ತು ಚೈತ್ರಾ ಕುಂದಾಪುರ ಅದೃಷ್ಟ.ಬಿಗ್ಬಾಸ್ ಮಾಜಿ ಸ್ಪರ್ಧಿಗಳ ವಿದೇಶ ಪ್ರಯಾಣ: ಅರವಿಂದ್, ಕಾರ್ತಿಕ್ ಚಿತ್ರಗಳು.
ಕಳೆದ ಸಂಚಿಕೆಯಲ್ಲಿ ಅಶ್ವಿನಿ ಗೌಡ ಅವರ ನಾಮಿನೇಟ್ ಮಾಡುವ ಅಧಿಕಾರವನ್ನು ಚೈತ್ರಾ ಕುಂದಾಪುರ ಕಸಿದುಕೊಂಡಿದ್ದರು. ಈಗ ಆ ಕೋಪವನ್ನು ರಜತ್ ಮೇಲೆ ತೀರಿಸಿಕೊಂಡಿದ್ದಾರೆ. ಮಾತನಾಡುವ ಬರದಲ್ಲಿ ‘ನೀವು ಗಂಡಸಲ್ವಾ’ ಎಂದು ರಜತ್ ವಿರುದ್ಧ ಕಿಡಿಕಾರಿದ್ದಾರೆ.

ಅಶ್ವಿನಿ ಗೌಡರನ್ನ ನಾಮಿನೇಟ್ ಮಾಡಿದ ರಜತ್, ‘ಧ್ರುವಂತ್ ಬಂದು ಟಿ ಗಾಂಚಲಿ ಅಂದಾಗ ಸೈಲೆಂಟ್ ಆಗಿದ್ದ ಅಶ್ವಿನಿ ಅವರು, ರಘು ಸರ್ ಏನೋ ಒಂದು ಮಾತು ಹೇಳಿದ ತಕ್ಷಣ ಹಾಗೆ ಹೇಳಬಾರದು, ಹೀಗೆ ಹೇಳಬಾರದು ಅಂತ ನಿಂತುಕೊಂಡರು. ಇವರ ಜೊತೆ ಫೈಟು ನಾವು ಆಡೋಕಾಗಲ್ಲ. ಹಾಗಾಗಿ, ಇವರು ಮನೆಗೆ ಹೋಗೋದು ಉತ್ತಮ’ ಎಂದಿದ್ದಾರೆ. ಇದಕ್ಕೆ, ‘ನಿಮ್ಮಂತಹ ಭಾಷೆಯನ್ನ ಇಲ್ಲಿರೋರು ಯಾರೂ ಬಳಸೋದಿಲ್ಲ. ನೀವು ಹೇಳಿದ್ರಿ, ನಾವು ಗಂಡಸರ ಜೊತೆಗೆ ಗುದ್ದಾಡ್ತೀವಿ ಅಂತ. ಏಕೆ ನೀವು ಗಂಡಸಲ್ವಾ? ಅಂತ ಅಶ್ವಿನಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.