ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ನ 12ನೇ ಆವೃತ್ತಿಯ ಫಿನಾಲೆಗೆ ಬೆರಳೆಣಿಕೆಯಷ್ಟು ದಿನಗಳು ಬಾಕಿಯಿವೆ. ಈ ನಡುವೆ 108ನೇ ದಿನ ನಡೆದ ಮಿಡ್ ವೀಕ್ ಎಲಿಮಿನೇಷನ್ನಲ್ಲಿ ಧ್ರುವಂತ್ ಹೊರಬಂದಿದ್ದಾರೆ.

ಮಿಡ್ ವೀಕ್ ಎಲಿಮಿನೇಷನ್ನಲ್ಲಿ ಕೊನೆಯಲ್ಲಿ ಧ್ರುವಂತ್ ಮತ್ತು ಕಾವ್ಯ ಇದ್ದರು. ಧ್ರುವಂತ್ ಹೊರ ಬಂದಿದ್ದು ಕಾವ್ಯ ಸೇಫ್ ಆಗಿದ್ದಾರೆ. ಧ್ರುವಂತ್ ಎಲಿಮಿನೇಟ್ ಆಗಿರುವುದಕ್ಕೆ ಅಶ್ವಿನಿ ಗೌಡ ಭಾವುಕರಾಗಿದ್ದರು.

ಕಳೆದ ವಾರವಷ್ಟೇ ಧ್ರುವಂತ್ಗೆ ಗೆ ಕಿಚ್ಚ ಸುದೀಪ್ ಅವರು ‘ಈ ಸೀಸನ್ನ ಚಪ್ಪಾಳೆ’ ನೀಡಿದ್ದರು. ಈ ಬಗ್ಗೆ ಕಲರ್ಸ್ ಕನ್ನಡ ಪೋಸ್ಟರ್ ಹಂಚಿಕೊಂಡಿತ್ತು. ಆದರೆ ವೀಕ್ಷಕರಿಂದ ಆಕ್ಷೇಪ ವ್ಯಕ್ತವಾದ ಕಾರಣ ಸೀಸನ್ ಚಪ್ಪಾಳೆ ಪೋಸ್ಟರ್ ಡಿಲೀಟ್ ಮಾಡಿ ‘ವಾರದ ಕಿಚ್ಚನ ಚಪ್ಪಾಳೆ’ ಎಂದು ಬರೆದು ಪೋಸ್ಟರ್ ಹಂಚಿಕೊಂಡಿತ್ತು.

ಬಿಗ್ಬಾಸ್ ಮನೆಗೆ ಬಂದಾಗಿನಿಂದಲೂ ಧ್ರುವಂತ್ ಅವರು ಒಂಟಿಯಾಗಿಯೇ ಗುರುತಿಸಿಕೊಂಡಿದ್ದರು. ಸಾಧ್ಯವಾದಷ್ಟು ಗುಂಪುಗಾರಿಕೆಯಿಂದ ದೂರವಿದ್ದರು. ಅವರು ರಕ್ಷಿತಾ ಜೊತೆ ಸಿಕ್ರೇಟ್ ರೂಮ್ನಲ್ಲಿ ಒಂದು ವಾರ ಕಳೆದಿದ್ದರು, ಅಲ್ಲಿಂದ ಹೊರ ಬಂದ ನಂತರ ಹೊಸ ಹುರುಪಿನಲ್ಲಿ ತಮ್ಮ ಆಟವನ್ನು ಆರಂಭಿಸಿದ್ದರು.

ಆರಂಭದಲ್ಲಿ ಮನೆಯ ಹಿರಿಯ ಸದಸ್ಯೆ ಎಂದೇ ಹೆಸರಾಗಿದ್ದ ಮಲ್ಲಮ್ಮ ಅವರ ಜೊತೆ ಆತ್ಮೀಯವಾಗಿದ್ದರು. ಬಳಿಕ ಅಶ್ವಿನಿ ಅವರೊಂದಿಗೆ ಆತ್ಮೀಯವಾಗಿದ್ದರು. ಮನೆಯ ಎಲ್ಲ ಸದಸ್ಯರೊಂದಿಗೆ ಒಂದಲ್ಲ ಒಂದು ಕಾರಣಕ್ಕೆ ಜಗಳ ಮಾಡಿಕೊಂಡಿದ್ದರು. ಧ್ರುವಂತ್ ಹೇಳುತ್ತಿದ್ದ ‘ಜೈ ಮಹಾಕಾಲ್’ ಎನ್ನುವ ಸಾಲು ಹೆಚ್ಚು ಜನಪ್ರಿಯತೆ ಪಡೆದುಕೊಂಡಿತ್ತು. ಫಿನಾಲೆ ತಲುಪಬೇಕು ಎಂದಿದ್ದ ಧ್ರುವಂತ್ ಸದ್ಯ ತಮ್ಮ ಬಿಗ್ಬಾಸ್ ಮನೆಯ ಪಯಣ ಮುಗಿಸಿ ಮರಳಿದ್ದಾರೆ.

ಈಗ ಧನುಷ್, ಗಿಲ್ಲಿನಟ, ರಘು, ಅಶ್ವಿನಿ, ರಕ್ಷಿತಾ, ಕಾವ್ಯಾ ಅವರು ಫಿನಾಲೆಗೆ ಕಾಲಿರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.