ಬಿಗ್ ಬಾಸ್ ಸೀಸನ್ 12ರ ಫಿನಾಲೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಸೀಸನ್ ಆರಂಭದಿಂದಲೂ ಗಿಲ್ಲಿ ಹಾಗೂ ಅಶ್ವಿನಿ ಗೌಡ ಜಗಳವಾಡಿಕೊಂಡೆ ಬಂದವರು. ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯುತ್ತ ಆಟವಾಡಿದವರು. ಈಗ ಇಬ್ಬರೂ ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ನಡುವೆ ಗಿಲ್ಲಿನಟ ಅಶ್ವಿನಿ ಗೌಡ ಅವರಿಗೆ ಕ್ಷಮೆ ಕೇಳಿದ್ದಾರೆ.

ಕ್ಷಮೆ ಕೇಳಿದ ಗಿಲ್ಲಿ

ಪ್ರೋಮೊದಲ್ಲಿ ಮನೆಯ ಗಾರ್ಡನ್ ಏರಿಯಾದಲ್ಲಿ ಫೈರ್ ಕ್ಯಾಂಪ್ ಹಾಕಲಾಗಿದೆ. ಅಲ್ಲಿ ಮಾತನಾಡಿರುವ ಗಿಲ್ಲಿ ‘ನಾನು ಜಗಳವಾಡುವ ಬರದಲ್ಲಿ ಅಶ್ವಿನಿ ಅವರಿಗೆ ಹೊಗೆ, ಬಾರೆ ಎಂದು ಏಕವಚನದಲ್ಲಿ ಮಾತನಾಡಿದ್ದೇನೆ. ಅವರು ನನಗಿಂತ ವಯಸ್ಸಿನಲ್ಲಿ ದೊಡ್ಡವರು. ನಾನು ನನ್ನ ವಯಸ್ಸಿಗೆ ಮೀರಿ ಮಾತನಾಡಿದೆ. ನಾನು ನಿಮ್ಮ ಮನಸ್ಸಿಗೆ ತುಂಬಾ ನೋವು ಮಾಡಿದ್ದೇನೆ, ಅದಕ್ಕೆ ಸ್ವಾರಿ’ ಎಂದು ಅಶ್ವಿನಿಯವರಿಗೆ ಕ್ಷಮೆ ಕೇಳಿದ್ದಾರೆ.

ಗಿಲ್ಲಿಗೆ ಥ್ಯಾಂಕ್ಸ್ ಹೇಳಿದ ಆಶ್ವಿನಿ ಗೌಡ

ಆಶ್ವಿನಿ ಗಿಲ್ಲಿಯ ಬಗ್ಗೆ ಮಾತನಾಡಿ ‘ನಾನು ಗಿಲ್ಲಿಗೆ ಧನ್ಯವಾದ ಹೇಳುತ್ತೇನೆ. ಜೀವನವನ್ನು ನಿನ್ನ ಥರ ಲಘುವಾಗಿ ತೆಗೆದುಕೊಂಡು ತುಂಬಾ ಆನಂದಿಸಬಹುದು. ಎಲ್ಲವನ್ನೂ ಗಂಭೀರವಾಗಿಯೇ ತೆಗೆದುಕೊಳ್ಳಬೇಕೆಂದೆನೂ ಇಲ್ಲ. ನಿನ್ನಿಂದ ನಾನು ಪಾಠ ಕಲಿತ್ತಿದ್ದೇನೆ’ ಎಂದು ಹೇಳಿದ್ದಾರೆ. ನಂತರ ಪರಸ್ಪರ ಇಬ್ಬರು ಅಪ್ಪಿಕೊಂಡಿದ್ದಾರೆ.

ಜಗಳದಿಂದ ಕ್ಷಮೆಯತ್ತ, ಕೊನೆಯಲಿ ಉಳಿಯುವುದೊಂದೇ ಸುಂದರ ಸ್ನೇಹ ಮಾತ್ರ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.