ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bigg Boss 8: ಅನ್ಯಾಯದ ವಿರುದ್ಧ ಸಿಡಿದ ನಟಿ ಪ್ರಿಯಾಂಕಾ ತಿಮ್ಮೇಶ್

Last Updated 30 ಏಪ್ರಿಲ್ 2021, 18:14 IST
ಅಕ್ಷರ ಗಾತ್ರ

ಬೆಂಗಳೂರು: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿರುವ ಪ್ರಿಯಾಂಕಾ ತಿಮ್ಮೇಶ್ ಮೊದಲೆರಡು ವಾರ ಬಹಳ ಶಾಂತವಾಗಿದ್ದರು. ಆದರೆ, ಈ ವಾರ ಟಾಸ್ಕ್ ವೇಳೆ ನಡೆದ ಒಂದು ಘಟನೆಯಿಂದ ಅಸಮಾಧಾನಗೊಂಡ ಅವರು ಇಡೀ ಮನೆಯ ಸದಸ್ಯರನ್ನು ಕಂಗೆಡಿಸಿದರು. ಹಸಿವಿದ್ದರೂ ಊಟ ಮಾಡದೆ ಎಲ್ಲರೂ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಆಗಿದ್ದಿಷ್ಟು: 60ನೇ ದಿನ ಬಿಗ್ ಬಾಸ್ ಕ್ಯಾಪ್ಟನ್ ಕಂಟೆಸ್ಟೆಂಟ್ ಟಾಸ್ಕ್ ನೀಡಿದ್ದರು. ಈ ಟಾಸ್ಕ್‌ನಲ್ಲಿ ಕೈಕಾಲು ಕಟ್ಟಿಕೊಂಡು ಬಾಲನ್ನು ತಲೆಯ ಮೂಲಕವೇ ಗುರಿ ತಲುಪಿಸುವ ಸವಾಲಿತ್ತು. ಆಟದಲ್ಲಿ ಭಾಗವಹಿಸಿದ್ದ ಅರವಿಂದ್, ಪ್ರಿಯಾಕಾ ತಿಮ್ಮೇಶ್ ಮತ್ತು ಪ್ರಶಾಂತ್ ಸಂಬರಗಿ ಅವರನ್ನು ಪ್ರತ್ಯೇಕ ಟ್ರ್ಯಾಕ್‌ಗಳಲ್ಲಿ ನಿಲ್ಲಿಸಲಾಗಿತ್ತು. ಆದರೆ, ಅರವಿಂದ್ ಅವರು ಬೇರೆ ಟ್ರ್ಯಾಕ್‌ಗೆ ತೆರಳಿದ್ದ ತಮ್ಮ ಬಾಲನ್ನು ಹಿಂಬಾಲಿಸುವ ಯತ್ನದಲ್ಲಿ ಪ್ರಿಯಾಂಕಾ ಅವರ ಬಾಲನ್ನು ಟ್ರ್ಯಾಕ್‌ನಿಂದ ಹೊರ ದಬ್ಬಿದರು. ಇದರಿಂದ ವಿಚಲಿತರಾದ ಪ್ರಿಯಾಂಕಾ ಆಟ ನಿಲ್ಲಿಸಿದರು. ಬಳಿಕ, ತೀರ್ಪುಗಾರರಾಗಿದ್ದ ಮಂಜು, ವೈಷ್ಣವಿ ಮತ್ತು ಚಕ್ರವರ್ತಿ ಚಂದ್ರಚೂಡ್ ಅವರು ಅರವಿಂದ್‌ಗೆ ಮೊದಲ ಸ್ಥಾನ ಪ್ರಶಾಂತ್‌ಗೆ ಎರಡನೇಸ್ಥಾನ ಕೊಟ್ಟು ಮನೆಯಲ್ಲಿ ನಿಲ್ಲಿಸಿದ್ದ ರೈಲಿನ ಬೋಗಿಗೆ ಹತ್ತಿಸಿದರು.

ಅಬ್ಬರಿಸಿದ ಪ್ರಿಯಾಂಕಾ: ತೀರ್ಪುಗಾರರ ನಿರ್ಧಾರದ ವಿರುದ್ಧ ಸಿಡಿದ ಪ್ರಿಯಾಂಕ ತಿಮ್ಮೇಶ್ ಅವರು ನಿಮ್ಮ ತೀರ್ಪಿಗೆ ನಾನು ಏನೂ ಹೇಳದೆ ತಲೆಬಾಗಬೇಕೆ? ಇದು ಸರಿ ಇಲ್ಲ. ಅರವಿಂದ್ ಅವರು ಬಾಲನ್ನು ತಳ್ಳಿದ್ದರಿಂದ ನನಗೆ ಆಡಲು ಅವಕಾಶವೇ ಸಿಗಲಿಲ್ಲ, ನೀವು ಹೇಗೆ ನನ್ನನ್ನು ಮೂರನೇ ಸ್ಥಾನಕ್ಕೆ ಕೂರಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು. ಈ ಸಂದರ್ಭ ಮಂಜು ಪಾವಗಡ ಅವರ ಜೊತೆ ತೀವ್ರ ಮಾತಿನ ಚಕಮಕಿ ನಡೆಸಿದರು. ಬಳಿಕ, ಕ್ಯಾಮೆರಾ ಬಳಿ ತೆರಳಿ ನನಗೆ ಅನ್ಯಾಯವಾಗಿದೆ. ನ್ಯಾಯ ಕೊಡಿಸಿ ಎಂದು ಬಿಗ್ ಬಾಸ್‌ಗೆ ಮನವಿ ಮಾಡಿದರು. ಈ ತೀರ್ಪನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಕುಳಿತೇ ಬಿಟ್ಟರು.

ನಿಯಮದ ಪ್ರಕಾರ, ಆಟ ಮುಗಿಯುವವರೆಗು ಯಾರೂಊಟ ಮಾಡುವಂತಿರಲಿಲ್ಲ. ಹಾಗಾಗಿ, ಹಸಿದು ಕುಳಿತಿದ್ದ ಮನೆಯ ಸದಸ್ಯರು ಮುನಿದ ಪ್ರಿಯಾಂಕಾ ಅವರನ್ನು ಸಮಾಧಾನಪಡಿಸಲು ಹರಸಾಹಸ ನಡೆಸಿದರು. ಬಿಗ್ ಬಾಸ್ ಅವರಿಂದ ಯಾವುದೇ ಉತ್ತರ ಬರದಿದ್ದರಿಂದ ತಮಗೆ ತಾವೇ ಸಮಾಧಾನ ಮಾಡಿಕೊಂಡ ಪ್ರಿಯಾಂಕಾ ಮೂರನೇ ಸ್ಥಾನ ಒಪ್ಪಿದರು. ಅರವಿಂದ್‌ಗೆ ಸ್ವಲ್ಪವಾದರೂ ಕ್ರೀಡಾ ಸ್ಫೂರ್ತಿಇದ್ದಿದ್ದರೆ ಹೀಗೆ ಮಾಡುತ್ತಿರಲಿಲ್ಲ. ಮತ್ತೆ ಆಟವಾಡಲು ಅವಕಾಶ ನೀಡುತ್ತಿದ್ದರು ಎಂದು ತಮ್ಮ ಅಸಮಾಧಾನ ಹೊರಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT