ಮಂಗಳವಾರ, ಮೇ 18, 2021
24 °C

Bigg Boss 8: ಯಾರೂ ಊಹಿಸದ ಅಚ್ಚರಿಗೆ ಕಾರಣವಾದ ಎಲಿಮಿನೇಶನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ 9ನೇ ವಾರದ ಎಲಿಮಿನೇಶನ್ನಿನಲ್ಲಿ ಸ್ಪರ್ಧಿಗಳ ಲೆಕ್ಕಾಚಾರವೇ ತಲೆಕೆಳಗಾಯಿತು. ನಾಮಿನೇಟ್ ಆಗಿದ್ದ 6 ಜನರಲ್ಲಿ ಯಾರೊ ಒಬ್ಬರು ಹೊರ ಹೋಗುತ್ತೇವೆ ಎಂದುಕೊಂಡಿದ್ದ ಸದಸ್ಯರಿಗೆ ಬಿಗ್ ಬಾಸ್ ಅಚ್ಚರಿ ಮೂಡಿಸಿದ್ದಾರೆ.

ಹೌದು, 9ನೇ ವಾರ ಯಾವುದೇ ಎಲಿಮಿನೇಶನ್ ನಡೆಸದೆ ಸ್ಪರ್ಧಿಗಳಿಗೆ ಬಿಗ್ ಬಾಸ್ ರಿಲೀಫ್ ಕೊಟ್ಟರು. ಸುದೀಪ್ ಅವರ ಅನುಪಸ್ಥಿತಿಯಲ್ಲೂ ಕಳೆದ ಎರಡು ವಾರ ಎಲಿಮಿನೇಶನ್ ಆಗಿತ್ತು. ಆದರೆ, ಈ ಬಾರಿ ನಾಮಿನೇಶನ್ ಕೊನೆಯ ದಿನದಲ್ಲಿ ಆಗಿದ್ದರಿಂದಲೋ ಏನೋ ಎಲಿಮಿನೇಸನ್ ಮಾಡಲಿಲ್ಲ. ಆದರೆ, ಮುಂದಿನ ವಾರಕ್ಕೆ ಇದೇ ಸ್ಪರ್ಧಿಗಳು ನಾಮಿನೇಟ್ ಆಗಿ ಮುಂದುವರಿಯುತ್ತಾರೆ ಎಂದು ಘೋಷಿಸಿದರು. ಹೀಗಾಗಿ, ಮಂಜು ಪಾವಗಡ, ಅರವಿಂದ್, ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್, ಪ್ರಿಯಾಂಕಾ ತಿಮ್ಮೇಶ್ ಅವರು 10ನೇ ವಾರ ಎಲಿಮಿನೇಶನ್ ಅಗ್ನಿಪರೀಕ್ಷೆ ಜಯಿಸಬೇಕಿದೆ. 

ಚಂದ್ರಚೂಡ್‌ಗೆ ನೆಮ್ಮದಿ: ಇನ್ನೂ, ನಾಯಕನಾಗಿ ಆಯ್ಕೆಯಾಗಿದ್ದರಿಂದ ಚಕ್ರವರ್ತಿ ಚಂದ್ರಚೂಡ್ ಅವರು ಎಲಿಮಿನೆಶನ್ ತೂಗುಗತ್ತಿಯಿಂದ ಪಾರಾಗಿದ್ದಾರೆ. ಹೌದು, ನಾಯಕನಾಗುವ ಮೂಲಕ ಇಮ್ಯುನಿಟಿ ಪಡೆದಿರುವ ಚಕ್ರವರ್ತಿ ಅವರು ನಾಮಿನೇಶನ್‌ನಿಂದ ಹೊರಗೆ ಉಳಿಯುತ್ತಾರೆ ಎಂದು ಬಿಗ್ ಬಾಸ್ ಘೋಷಿಸಿದ್ದಾರೆ. ಕ್ಯಾಪ್ಟೆನ್ಸಿ ಟಾಸ್ಕ್ ವೇಳೆ ಈ ವಾರವೇ ಹೊರಹೋಗುವೆನೇನೊ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಚಂದ್ರಚೂಡ್ ಅವರಿಗೆ ಭರ್ಜರಿ ಗಿಫ್ಟ್ ಸಿಕ್ಕಂತಾಗಿದೆ.

ಜೈಲು ಸೇರಿದ ಪ್ರಿಯಾಂಕಾ, ಬೆಸ್ಟ್ ಆದ ಶಮಂತ್: ಹೌದು, ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ಭಾರೀ ಗದ್ದಲ ಮಾಡಿದ್ದ ಪ್ರಿಯಾಂಕಾ ತಿಮ್ಮೇಶ್ ಅವರು ಈ ವಾರ ಕಳಪೆ ಪಟ್ಟ ಹೊತ್ತು ಮನೆಯ ಜೈಲು ಸೇರಿದ್ದಾರೆ.  ಈ ಮಧ್ಯೆ, ಮೊದ ಮೊದಲು ಮನೆಯ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದ ಶಮಂತ್ ಮೇಲಿನ ಇಮೇಜ್ ಬದಲಾಗಿದ್ದು, ಅತ್ಯುತ್ತಮ ಸ್ಪರ್ಧಿ ಎಂದು ಆಯ್ಕೆ ಮಾಡಿದ್ದಾರೆ. ಈ ವಾರ ಹಾಡುಗಳನ್ನು ಬರೆದು ಹಾಡಿದ್ದಲ್ಲದೆ, ಟಾಸ್ಕ್‌ಗಳಲ್ಲೂ ಉತ್ತಮ ಪರ್ಫಾಮೆನ್ಸ್ ನೀಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು