ಗುರುವಾರ , ಜೂನ್ 24, 2021
21 °C

Bigg Boss 8: ಎಂಟನೇ ವಾರ ಶಾಕಿಂಗ್ ಎಲಿಮಿನೇಶನ್, ಪ್ರಬಲ ಸ್ಪರ್ಧಿ ಹೊರಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ 8ನೇ ವಾರದ ಎಲಿಮಿನೇಶನ್‌ನಲ್ಲಿ ಶಾಕಿಂಗ್ ಫಲಿತಾಂಶ ಬಂದಿದೆ. ಮನೆಯ ಟಾಪ್ ಕಂಟೆಸ್ಟೆಂಟ್‌ಗಳಲ್ಲಿ ಒಬ್ಬರಾದ ರಾಜೀವ್ ಮನೆಯಿಂದ ಹೊರಬಿದ್ದಿದ್ದಾರೆ.

ಎಲಿಮೇಶನ್‌ನ ಕೊನೆಯ ಹಂತಕ್ಕೆ ಬಂದಿದ್ದ ಪ್ರಶಾಂತ್ ಸಂಬರಗಿ ಮತ್ತು ರಾಜೀವ್ ಅವರ ಪೈಕಿ ರಾಜೀವ್ ಅವರ ವಿಟಿ ಟಿವಿಯಲ್ಲಿ ಪ್ಲೇ ಆಗುವ ಮೂಲಕ ಮನೆಯ ಸದಸ್ಯರೇ ಅಚ್ಚರಿಗೊಂಡರು.

ಓದಿ: 

ಗೋಲ್ಡನ್ ಪಾಸ್ ಇದ್ದರೂ ವ್ಯರ್ಥ: ರಾಜೀವ್ ಬಳಿ ನಾಮಿನೇಶನ್‌ನಿಂದ ಪಾರಾಗುವ ಗೋಲ್ಡನ್ ಪಾಸ್ ಇತ್ತು. ಆದರೆ, ವೀಕ್ಷಕರ ಮತಗಳ ಮೇಲೆ ವಿಶ್ವಾಸ ಇಟ್ಟಿದ್ದ ರಾಜೀವ್ ಮನೆಯಿಂದ ಹೊರಬಿದ್ದಿದ್ದಾರೆ. 

ಶುಭಾ ಪೂಂಜಾಗೆ ಗೋಲ್ಡನ್ ಪಾಸ್: ಎಲಿಮಿನೇಟ್ ಆದ ರಾಜೀವ್ ಅವರಿಗೆ ತಮ್ಮ ಬಳಿ ಇದ್ದ ಗೋಲ್ಡನ್ ಪಾಸ್ ಅನ್ನು ಮನೆಯ ಸದಸ್ಯರೊಬ್ಬರಿಗೆ ವರ್ಗಾಯಿಸುವ ಅಧಿಕಾರ ನೀಡಿದ್ದರು ಬಿಗ್ ಬಾಸ್. ಈ ವೇಳೆ, ತಮಗೆ ವೇಳೆ ಟಾಸ್ಕ್ ಸಹಾಯ‌ ಮಾಡಿದ್ದ ಶುಭಾ ಪೂಂಜಾ ಅವರಿಗೆ ರಾಜೀವ್ ಪಾಸ್ ನೀಡಿದರು. ಇದಕ್ಕೂ ಮುನ್ನ ರಾಜೀವ್ ವಿಟಿ ಪ್ಲೇ ಆಗುತ್ತಿದ್ದಂತೆ ಎದ್ದು ಹೋದ ಶುಭಾ ಕಣ್ಣೀರು ಹಾಕಿದ್ದರು.

ರಾಜೀವ್ ವರ್ತನೆ‌ ಮುಳುವಾಯ್ತೆ?: ಗೋಲ್ಡನ್ ಪಾಸ್ ಟಾಸ್ಕ್ ವೇಳೆ ರಾಜೀವ್ ಅವರು ಶಮಂತ್ ಅವರಿಗೆ ಮತ್ತೊಂದು ಅವಕಾಶ ನೀಡಲು‌ ನಿರಾಕರಿಸಿ ವಿತ್ತಂಡ ವಾದ ಮಾಡಿದ್ದರು. ಇಲ್ಲಿ ಶುಭಾ ಪೂಂಜಾ, ವಿಶ್ವನಾಥ್ ಮತ್ತು ರಾಜೀವ್ ಪ್ಲಾನ್ ಮಾಡಿಕೊಂಡು ಶಮಂತ್ ಅವರನ್ನು ಹೊರಹೋಗುವಂತೆ ಮಾಡಿದ್ದು ಸ್ಪಷ್ಟವಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು