ಬೆಂಗಳೂರು: ಬಿಗ್ ಬಾಸ್ ಮನೆಯಿಂದ ಸಾನ್ಯಾ ಅಯ್ಯರ್ ಅವರು ಎಲಿಮಿನೇಟ್ ಆಗಿದ್ದಾರೆ. ಆರೇ ವಾರಕ್ಕೆ ಸಾನ್ಯಾ ಅವರು ತಮ್ಮ ಬಿಗ್ ಬಾಸ್ ಪ್ರಯಾಣವನ್ನು ಮುಗಿಸಿದ್ದಾರೆ.
ಈ ಆವೃತ್ತಿಯಲ್ಲಿ ‘ಪ್ರವೀಣರು‘ ವಿಭಾಗದಲ್ಲಿ ಬಿಗ್‌ಬಾಸ್ ಮನೆಗೆ ಪ್ರವೇಶ ಮಾಡಿದ್ದ ಸಾನ್ಯಾ ಅಯ್ಯರ್ ಭಾರೀ ನಿರೀಕ್ಷೆ ಹುಟ್ಟಿಸಿದ್ದರು. ಆದರೆ ಅವರ ಅಭಿಯಾನ ಆರು ವಾರಕ್ಕೆ ಅಂತ್ಯವಾಗಿದೆ. ಆ ಮೂಲಕ ಸಾನ್ಯಾ ಅಯ್ಯರ್ ಪ್ರವೀಣರು ವಿಭಾಗದಲ್ಲಿ ಎಲಿಮಿನೇಷನ್ ಆದ ಮೊದಲ ಸ್ಪರ್ಧಿ ಎನಿಸಿಕೊಂಡರು.
ಐದನೇ ವಾರದಲ್ಲಿ ಮನೆಯಿಂದ ಹೊರಗೆ ಬಂದಿದ್ದ ನೇಹಾ ಗೌಡ ಅವರಿಂದ ನಾಮಿನೇಟ್ ಆಗಿದ್ದ ಪ್ರಶಾಂತ್ ಸಂಬರ್ಗಿ ಹಾಗೂ ಸಾನ್ಯಾ ಅಯ್ಯರ್, ದಿವ್ಯಾ ಉರುಡುಗ, ರೂಪೇಶ್ ರಾಜಣ್ಣ, ಆರ್ಯವರ್ಧನ್ ಗುರೂಜಿ ಹಾಗೂ ರೂಪೇಶ್ ಶೆಟ್ಟಿ ಸೇರಿ ಒಟ್ಟು ಆರು ಮಂದಿ ಕಳೆದ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ಇದೀಗ ವೀಕ್ಷಕರಿಂದ ಅತೀ ಕಡಿಮೆ ಮತ ಪಡೆದು ಸಾನ್ಯಾ ಅಯ್ಯರ್ ಮನೆಯಿಂದ ನಿರ್ಗಮಿಸಿದ್ದಾರೆ.
ಕಣ್ಣೀರಿಟ್ಟ ರೂಪೇಶ್ ಶೆಟ್ಟಿ
ಬಿಗ್ ಬಾಸ್ ಮನೆಯಿಂದ ಸಾನ್ಯಾ ಅಯ್ಯರ್ ಹೊರ ಹೋಗುತ್ತಿರುವುದು ಘೋಷಣೆಯಾಗುತ್ತಿದ್ದಂತೆಯೇ, ರೂಪೇಶ್ ಶೆಟ್ಟಿ ಕಣ್ಣೀರಿಟ್ಟಿದ್ದಾರೆ. ಸಾನ್ಯಾ ಅಯ್ಯರ್ ಅವರ ಮಡಿಲಿನಲ್ಲಿ ತಲೆ ಇಟ್ಟು ದುಃಖಿತರಾಗಿದ್ದಾರೆ. ನಿನ್ನನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಬೇಸರಿಸಿದ್ದಾರೆ.
ಬಿಗ್‌ಬಾಸ್ ಒಟಿಟಿಯಲ್ಲಿ ಸ್ಪರ್ಧಿಗಳಾಗಿದ್ದ ಸಾನ್ಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಅಲ್ಲಿಂದ ಆಪ್ತರಾಗಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.