ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BiggBossKannada OTT: ಗೆಲ್ಲುವುದು ಇವರೇ ಎಂದ ಆರ್ಯವರ್ಧನ್ ಗುರೂಜಿ

Last Updated 8 ಆಗಸ್ಟ್ 2022, 14:08 IST
ಅಕ್ಷರ ಗಾತ್ರ

ಬೆಂಗಳೂರು: ಬಿಗ್ ಬಾಸ್ ಕನ್ನಡ ಒಟಿಟಿ ಆವೃತ್ತಿಗೆ ಯಾವುದೇ ಟಿ.ವಿ ಆವೃತ್ತಿಗೂ ಕಡಿಮೆ ಇಲ್ಲದಂತೆ ಚಾಲನೆ ಸಿಕ್ಕಿದೆ. ವಿವಿಧ ಕ್ಷೇತ್ರಗಳ 16 ಸ್ಪರ್ಧಿಗಳು ಮನೆಯನ್ನು ಸೇರಿಕೊಂಡಿದ್ದಾರೆ. ಈ ಮಧ್ಯೆ, ಮೊದಲಿಗರಾಗಿ ಎಂಟ್ರಿ ಪಡೆದ ಆರ್ಯವರ್ಧನ್ ಗುರೂಜಿ ಗೆಲ್ಲುವವರು ಯಾರು ಎಂಬುದನ್ನು ತಮ್ಮ ಸಂಖ್ಯಾಶಾಸ್ತ್ರದ ಮೂಲಕ ಲೆಕ್ಕ ಹಾಕಿದ್ದಾರೆ.

ಹೌದು, ಮನೆ ಪ್ರವೇಶಕ್ಕೂ ಮುನ್ನ ಸುದೀಪ್ ಜೊತೆಗಿನ ಮಾತುಕತೆ ವೇಳೆ ಅವರು, ಬಿಗ್ ಬಾಸ್ ಒಟಿಟಿ ಆವೃತ್ತಿಯಲ್ಲಿ ಗೆಲ್ಲುವ ನಂಬರ್ ಯಾವುದು ಎಂಬುದನ್ನು ತಮ್ಮ ಸಂಖ್ಯಾಶಾಸ್ತ್ರದ ಜ್ಞಾನದ ಮೂಲಕ ಭವಿಷ್ಯ ನುಡಿದಿದ್ದಾರೆ.

ನೀವು ಮೊದಲಿಗರಾಗಿ ಮನೆಗೆ ಹೋಗುತ್ತಿದ್ದೀರಿ. ನಂಬರ್ ಒನ್ ಸಂಖ್ಯೆ ನಿಮಗೆ ಸರಿಹೊಂದುತ್ತದೆಯೇ ಎಂದು ಸುದೀಪ್ ಕೇಳಿದಾಗ, ಆಗಿಬರುತ್ತದೆ ಎಂದರು. ಹಾಗಾದರೆ, ಮುಂದಿನ ಹಂತಕ್ಕೆ ಹೋಗುತ್ತೀರಾ ಎಂದು ಮರು ಪ್ರಶ್ನೆ ಹಾಕಿದಾಗ, ಹೋಗಬಹುದು. ಆದರೆ, ನನಗಿಂತಲೂ 3,5,6 ಸಂಖ್ಯೆಯ ಸ್ಪರ್ಧಿಗಳ ಲಕ್ ಚೆನ್ನಾಗಿದೆ. ಅವರು ಹೋಗಬಹುದು ಎಂದು ಉತ್ತರಿಸಿದರು.

ಈ ವರೆಗೆ ಅತಿ ಹೆಚ್ಚು ಗಳಿಕೆ ಕಂಡಿರುವ ತುಳು ಚಿತ್ರ ‘ಗಿರಗಿಟ್’ನಿರ್ದೇಶಕ, ನಟ ರೂಪೇಶ್ ಶೆಟ್ಟಿ ಮೂರನೇ ಅಭ್ಯರ್ಥಿಯಾಗಿ ಮನೆಗೆ ಪ್ರವೇಶ ಪಡೆದಿದ್ದಾರೆ. ಪುಟ್ಟ ಗೌರಿ ಧಾರಾವಾಹಿ ಮೂಲಕ ಗಮನ ಸೆಳೆದಿದ್ದ ಸಾನ್ಯಾ ಅಯ್ಯರ್ ಐದನೇಯವರಾಗಿ ಮತ್ತು 6ನೇಯವರಾಗಿ ಹಾಸ್ಯ ಕಲಾವಿದ ಲೋಕೇಶ್ ಮನೆಗೆ ಪ್ರವೇಶಿಸಿದ್ದಾರೆ. ಈ ಮೂರು ಸಂಖ್ಯೆಗಳಲ್ಲಿ ಮನೆ ಪ್ರವೇಶಿಸುವ ಅಭ್ಯರ್ಥಿಗಳೇ ಮುಂದಿನ ಹಂತಕ್ಕೆ ಹೋಗುತ್ತಾರೆ ಎಂದು ಆರ್ಯವರ್ಧನ್ ಭವಿಷ್ಯ ನುಡಿದಿದ್ದು, ಸುದೀಪ್ ಸೇರಿದಂತೆ ಪ್ರೇಕ್ಷಕರಲ್ಲಿ ಕುತೂಹಲ ಮನೆ ಮಾಡಿದೆ.

ಬಿಗ್ ಬಾಸ್ ಒಟಿಟಿ ವಿಶೇಷತೆ ಏನು?

ಟಿ.ವಿಯಲ್ಲಿ ಪ್ರಸಾರವಾಗುತ್ತಿದ್ದ ಆವೃತ್ತಿಗಳಿಗೆ ಹೋಲಿಸಿದರೆ ಇದರ ಅವಧಿ ಕಡಿಮೆ. ಟಿ.ವಿ ಆವೃತ್ತಿ 100 ದಿನ ನಡೆದರೆ, ಒಟಿಟಿ ಆವೃತ್ತಿ 42 ದಿನಕ್ಕೆ ಕೊನೆಗೊಳ್ಳಲಿದೆ. ಒಟಿಟಿ ಆವೃತ್ತಿಯಲ್ಲಿ ಅಂತಿಮ ಸುತ್ತಿಗೆ ಬರುವ ಸ್ಪರ್ಧಿಗಳು 100 ದಿನಗಳ ಟಿ.ವಿ ಆವೃತ್ತಿಗೆ ನೇರ ಪ್ರವೇಶ ಪಡೆಯುತ್ತಾರೆ.

ಒಟಿಟಿ ಆವೃತ್ತಿಯಲ್ಲಿ ಮನರಂಜನೆಗೆ ಕೊರತೆಯಿಲ್ಲ. ಅಲ್ಲಿರುವಂತೆ(ಟಿ.ವಿ ಆವೃತ್ತಿ) ಟಾಸ್ಕ್‌ಗಳು, ಗದ್ದಲ, ಹೊಟ್ಟೆಕಿಚ್ಚು, ಮಾತಿನ ಸಮರ, ಸಂಗೀತ, ಕವನ, ಬಿಗ್‌ಬಾಸ್ ಸೂಚನೆಗಳು, ಹಗಲಲ್ಲಿ ಮಲಗಿದರೆ ಮಂಜುನಾಥನ ಕಾಟ, ನಿಯಮ ತಪ್ಪಿದರೆ ಶಿಕ್ಷೆ ಎಲ್ಲವೂ ಇರುತ್ತದೆ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT