ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBK 10 | ಸಂಗೀತಾ ವಿರುದ್ಧ ಅಸಮಾಧಾನಗೊಂಡ ಮನೆಯ ಸದಸ್ಯರು

Published 18 ಡಿಸೆಂಬರ್ 2023, 13:44 IST
Last Updated 18 ಡಿಸೆಂಬರ್ 2023, 13:44 IST
ಅಕ್ಷರ ಗಾತ್ರ

ಬೆಂಗಳೂರು: ಬಿಗ್‌ಬಾಸ್‌ ಮನೆಯಲ್ಲಿ ದಿನ ಕಳೆದಂತೆ ಆಟದ ಶೈಲಿಯೂ ಬದಲಾಗುತ್ತಿದೆ. ಮನೆಯ ಸ್ಪರ್ಧಿಗಳು ದಿನಸಿ ಸಾಮಗ್ರಿಗಳನ್ನು ಖರೀದಿಸುವ ಚಟುವಟಿಕೆಯ ಲೆಕ್ಕಾಚಾರದಲ್ಲಿ ಮನೆಮಂದಿ ಎಡವಿದ್ದಾರೆ.

ಮನೆಯ ಸ್ಪರ್ಧಿಗಳು ವಾರವಿಡೀ ಆಟವಾಡಿ ಗಳಿಸಿದ ಲಕ್ಜುರಿ ಪಾಯಿಂಟ್‌ ಮೂಲಕವೇ ದಿನಸಿ ಸಾಮಗ್ರಿಗಳನ್ನು ಖರೀಸಬೇಕು. ಈ ವಾರದ ದಿನಸಿ ಖರೀದಿಸುವ ಚಟುವಟಿಕೆಯಲ್ಲಿ ಮನೆಯ ಸದಸ್ಯರ ಲೆಕ್ಕಾಚಾರದಲ್ಲಿ ಗೊಂದಲ ಉಂಟಾಗಿದೆ.

ಈ ನಡುವೆ ಸಂಗೀತಾ ಅವರ ಮೇಲೆ ಮನೆ ಸದಸ್ಯರು ಅಸಮಾಧಾನಗೊಂಡಿರುವ ವಿಡಿಯೊವನ್ನು ಜಿಯೊ ಸಿನಿಮಾ ಬಿಡುಗಡೆ ಮಾಡಿದೆ. ‘ವಿನಯ್‌ ಅವರು ಇಡೀ ವಾರ ಅಗತ್ಯವಾದ ದಿನಸಿ ಸಾಮಗ್ರಿ ಇಲ್ಲದೆ ಏನು ಮಾಡಬೇಕು ಎಂದು ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. ಈ ನಡುವೆ ತುಕಾಲಿ ಸಂತೋಷ್‌ ಸಹ ವಾರವಿಡೀ ಹೊಟ್ಟೆ ಹಸಿವನ್ನು ನಿಯಂತ್ರಣದಲ್ಲಿಟ್ಟುಕೊಳ್ಳೋಣ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಾರ ಪವಿ ಪೂವಪ್ಪ ಎಲಿಮಿನೇಟ್‌ ಆದ ಬಳಿಕ ಮನೆಯಲ್ಲಿ ಕೊಂಚ ಬದಲಾವಣೆಯ ಗಾಳಿ ಬೀಸಿದ್ದು, ಸ್ಪರ್ಧಿಗಳು ಆಟದತ್ತ ಹೆಚ್ಚು ಗಮನಹರಿಸುತ್ತಾರಾ? ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT