ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಮಿತಾ ಶೆಟ್ಟಿಗೆ ’ಆಂಟಿ’ ಎಂದ ತೇಜಸ್ವಿ: ಬಿಗ್ ಬಾಸ್‌ ವಿನ್ನರ್‌  ಹೇಳಿದ್ದು ಏನು?

Last Updated 10 ಫೆಬ್ರುವರಿ 2022, 8:01 IST
ಅಕ್ಷರ ಗಾತ್ರ

ಕಿರುತೆರೆಯಲ್ಲಿ ಜನಪ್ರಿಯವಾಗಿರುವ ಹಿಂದಿಯ ಬಿಗ್‌ ಬಾಸ್‌–15 (Bigg Boss 15)ರಿಯಾಲಿಟಿ ಶೋ ಕಾರ್ಯಕ್ರದಲ್ಲಿ ಈ ಸಲ ಕಿರುತೆರೆ ನಟಿ ತೇಜಸ್ವಿ ಪ್ರಕಾಶ್‌ (Tejasswi Prakash) ಗೆಲುವಿನ ನಗೆ ಬೀರಿದ್ದಾರೆ.ಬಿಗ್‌ ಬಾಸ್‌ ಟ್ರೋಫಿಗೆದ್ದ15ನೇ ವಿನ್ನರ್‌ ಇವರಾಗಿದ್ದಾರೆ.

ತೇಜಸ್ವಿಯ ಸಮೀಪದ ಸ್ಪರ್ದಿ ಶಮಿತಾ ಶೆಟ್ಟಿ(Shamita Shetty) ಈ ಸಲ ವಿನ್ನರ್‌ ಆಗುತ್ತಾರೆ ಎಂದು ಹೇಳಲಾಗುತ್ತಿತ್ತು. ಅಂತಿಮವಾಗಿ ತೇಜಸ್ವಿ ಗೆದ್ದಿದ್ದಾರೆ. ಬಿಗ್‌ ಬಾಸ್‌ ಮನೆಯ ಕುರಿತಂತೆ ಮಾಧ್ಯಮಗಳು ತೇಜಸ್ವಿ ಅವರ ಸಂದರ್ಶನ ಮಾಡುತ್ತಿದ್ದು ಸದ್ಯ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್‌ ಆಗಿದ್ದಾರೆ.

ನ್ಯೂಸ್‌ 18 ಜಾಲತಾಣಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ’ಆಂಟಿ’ ಎಂಬ ಪದದ ಬಗ್ಗೆ ಮಾತನಾಡಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ನಾನು ’ಆಂಟಿ’ ಎಂಬ ಪದವನ್ನು ಬೈಗುಳವಾಗಿ ಬಳಸಿದ್ದೆ, ಆ ರೀತಿ ಮಾತನಾಡಬಾರದಿದ್ದು ಎಂದು ಎಂದಿದ್ದಾರೆ.

ಟಾಸ್ಕ್‌ವೊಂದರಲ್ಲಿ ಶಮಿತಾ ಶೆಟ್ಟಿ ಅವರನ್ನು ’ಆಂಟಿ’ ಎಂದು ಕರೆದಿದ್ದೆ, ಆ ಪದವನ್ನು ನಾನುಬೈಗುಳವಾಗಿ ಬಳಸಿದ್ದೆ, ಅದಕ್ಕಾಗಿ ನಾನು ವಿಷಾದಿಸಿತ್ತೇನೆ ಎಂದು ತೇಜಸ್ವಿ ಹೇಳಿದ್ದಾರೆ.

28ರ ಹರೆಯದ ತೇಜಸ್ವಿ ಅವರು 42 ವರ್ಷದ ಶಮಿತಾ ಶೆಟ್ಟಿಯನ್ನು ’ಆಂಟಿ’ ಎಂದು ಕರೆದಿದ್ದಕ್ಕೆನೆಟ್ಟಿಗರು ತೇಜಸ್ವಿ ವಿರುದ್ಧ ಗರಂ ಆಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದರು.

ಬಿಗ್​ ಬಾಸ್​ ಫೈನಲ್‌ನಲ್ಲಿ ರಶ್ಮಿ ದೇಸಾಯಿ, ಪ್ರತೀಕ್​ ಸೆಹಜ್ಪಾಲ್​, ತೇಜಸ್ವಿ ಪ್ರಕಾಶ್​, ಶಮಿತಾ ಶೆಟ್ಟಿ, ಕರಣ್​ ಕುಂದ್ರಾ ಮತ್ತು ನಿಶಾಂತ್​ ಭಟ್​ ನಡುವೆ ಪ್ರಬಲ ಪೈಪೋಟಿ ನಡೆದಿತ್ತು. ಅಂತಿಮವಾಗಿ ತೇಜಸ್ವಿ ಪ್ರಕಾಶ್ ಅವರುಟ್ರೋಫಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT