ಕಳೆದ ಅವೃತ್ತಿಯ ಗಿಚ್ಚಿ-ಗಿಲಿಗಿಲಿ ಕಲಾವಿದರ ತಂಡವು ಪ್ರೇಕ್ಷಕರನ್ನು ರಂಜಿಸಿತ್ತು. ಈಗ ಗಿಚ್ಚಿ-ಗಿಲಿಗಿಲಿ ಜ್ಯೂನಿಯರ್ಸ್ ರಿಯಾಲಿಟಿ ಶೋ ಆರಂಭವಾಗಲಿದೆ. ಈ ಕಾರ್ಯಕ್ರಮಕ್ಕೆ ಮಾದೇಶ ಎಂಬ ಪುಟ್ಟ ಬಾಲಕ ಆಗಮಿಸಿದ್ದು, ಈ ಪುಟಾಣಿಯ ಅಭಿನಯನಕ್ಕೆ ತೀರ್ಪುಗಾರರಾದ ನಟಿ ಶ್ರುತಿ, ಸಾಧುಕೋಕಿಲ, ಸೃಜನ್ ಲೋಕೇಶ್ ಮನಸೋತಿದ್ದಾರೆ.

ಈ ಬಗ್ಗೆ ಕಲರ್ಸ್ ಕನ್ನಡ ಪ್ರೋಮೊ ಬಿಡುಗಡೆ ಮಾಡಿದ್ದು, ವೇದಿಕೆಯಲ್ಲಿ ಪುಟ್ಟ ಹುಡುಗ ಮಾದೇಶ ಪೌರಾಣಿಕ ವೇಷ ಧರಿಸಿ ಅಭಿನಯಿಸಿದ ದೃಶ್ಯವಿದೆ.

ಮಾದೇಶನ ಅಭಿನಯ ಕುರಿತು ಅಭಿಪ್ರಾಯ ಹಂಚಿಕೊಂಡ ನಟ ಸಾಧುಕೋಕಿಲ ಅವರು, ‘ಇಷ್ಟು ದೊಡ್ಡ ವೇದಿಕೆಗೆ ಇಂತ ಪ್ರತಿಭೆಗಳು ಆಯ್ಕೆಯಾಗಬೇಕು’ ಎಂದಿದ್ದಾರೆ.

ಸೃಜನ್ ಲೋಕೇಶ್ ಅವರು, ‘ಇಷ್ಟು ಚಿಕ್ಕ ವಯಸ್ಸಿನಲ್ಲಿ ಗದ್ದೆಯಲ್ಲಿ ಕೆಲಸ ಮಾಡುವುದರ ಜೊತೆಗೆ ಏನಾದರೂ ಸಾಧಿಸುವ ಹಂಬಲ ಈತನಲ್ಲಿದೆ' ಎಂದು ಮಾದೇಶನನ್ನು ಕೊಂಡಾಡಿದ್ದಾರೆ.

‘ಈ ಮಗು ವೇದಿಕೆಗೆ ಸ್ಪರ್ಧಿಯಾಗಿ ಬಂದಿಲ್ಲ. ಕರ್ನಾಟಕ ಪ್ರತಿಯೊಬ್ಬ ಮಗುವಿಗೆ ಸ್ಫೂರ್ತಿಯಾಗಿ ಬಂದಿದ್ದಾನೆ' ಎಂದು ನಟಿ ಶ್ರುತಿ ಹಳ್ಳಿ ಪ್ರತಿಭೆಯ ಬೆನ್ನು ತಟ್ಟಿದ್ದಾರೆ.

ಅನುಪಮಾ ಗೌಡ ನಿರೂಪಣೆಯ ಗಿಚ್ಚಿ-ಗಿಲಿಗಿಲಿ ಜ್ಯೂನಿಯರ್ಸ್ ಕಾರ್ಯಕ್ರಮವೂ ಇದೇ ಶನಿವಾರ ಭಾನುವಾರದಿಂದ ಆರಂಭಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.