ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಮದುವೆ ಮಂಟಪ...

Last Updated 23 ಮಾರ್ಚ್ 2022, 9:35 IST
ಅಕ್ಷರ ಗಾತ್ರ

ಮದುವೆ ಮಂಟಪ ಕಟ್ಟಿದೆ ಸ್ಟಾರ್‌ ಸುವರ್ಣ ವಾಹಿನಿ...

ಹೌದು ವಾಹಿನಿಯ ಎರಡು ಧಾರಾವಾಹಿಗಳು ಇತ್ತೀಚೆಗೆ ಹೆಚ್ಚು ಜನಪ್ರಿಯತೆಯ ಹಾದಿಯಲ್ಲಿವೆ. ‘ಮುದ್ದುಮಣಿಗಳು’ ಮತ್ತು ‘ಬೆಟ್ಟದ ಹೂ’ ಧಾರಾವಾಹಿಗಳು ಈ ವಾರ ಕುತೂಹಲಕಾರಿ ತಿರುವು ಪಡೆಯಲಿವೆಯಂತೆ.

ಈ ಎರಡೂ ಧಾರಾವಾಹಿಯ ಕತೆಗಳ ದಿಕ್ಕು ಮದುವೆ ಮಂಟಪದಲ್ಲಿ ಬದಲಾಗಲಿದೆ. ‘ಮುದ್ದುಮಣಿ’ಗಳು ಧಾರಾವಾಹಿಯಲ್ಲಿ ತನ್ನ ಜೊತೆ ಮದುವೆಯಾಗಬೇಕಿದ್ದ ಶ್ರವಣ್, ಭೂಮಿಯನ್ನು ಮದುವೆಯಾಗಿರುವುದನ್ನು ಕಂಡು ದೃಷ್ಟಿಗೆ ಗೊಂದಲ ಶುರುವಾಗಿದೆ. ದೃಷ್ಟಿಯ ಮುಂದಿನ ನಡೆಯೇನು? ಅವಳು ಶಿವನನ್ನು ಮದುವೆಯಾಗುತ್ತಾಳೋ ಇಲ್ಲವೋ ಎನ್ನುವ ಕುತೂಹಲ ವೀಕ್ಷಕನದ್ದು.

‘ಬೆಟ್ಟದ ಹೂ’ ಧಾರಾವಾಹಿಯಲ್ಲಿ, ರಾಹುಲ್ ಮತ್ತು ಮಾಲಿನಿ ಮದುವೆ ತಯಾರಿ ಸಂಭ್ರಮದಿಂದ ನಡೆಯುತ್ತಿದೆ. ಇದನ್ನು ಮೂಕ ಪ್ರೇಕ್ಷಕಿಯಾಗಿ ನೋಡುತ್ತಿರುವ ಹೂವಿ, ಎಲ್ಲರೆದುರು ರಾಹುಲ್ ತನ್ನನ್ನು ಮದುವೆಯಾಗಿರುವ ಸತ್ಯ ಹೇಳುತ್ತಾಳೆಯೇಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ ಎಂದಿದೆ ವಾಹಿನಿಯ ತಂಡ. ಈ ಧಾರಾವಾಹಿಗಳ ಈ ರೋಚಕ ಕಂತುಗಳನ್ನು ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7.30 ಮತ್ತು 8ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ವೀಕ್ಷಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT