ಶುಕ್ರವಾರ, 27 ಫೆಬ್ರುವರಿ 2026
×
ADVERTISEMENT

ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಕರ್ಣ ಧಾರಾವಾಹಿ ನಟಿ ಭವ್ಯಾ ಗೌಡ

Published : 27 ಫೆಬ್ರುವರಿ 2026, 6:53 IST
Last Updated : 27 ಫೆಬ್ರುವರಿ 2026, 6:53 IST
ADVERTISEMENT
ಫಾಲೋ ಮಾಡಿ
Comments
ಕನ್ನಡ ಕಿರುತೆರೆ ನಟಿ  ಭವ್ಯಾ ಗೌಡ ಅವರು ನಿನ್ನೆ (ಫೆ.26) ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.

ಚಿತ್ರ: candids_by_umesh

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಗೀತಾ’ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟರು ಭವ್ಯಾ ಗೌಡ. ಅಲ್ಲಿಂದ ಅವರ ಹೊಸ ಪಯಣ ಶುರುವಾಯಿತು.

ಭವ್ಯಾ ಗೌಡ ಅವರು ಗೀತಾ ಧಾರಾವಾಹಿ ಮೂಲಕವೇ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡರು. ಈ ಮೂಲಕವೇ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್ 11ಕ್ಕೆ ಸ್ಪರ್ಧಿಯಾಗಿ ಕಾಲಿಟ್ಟು ಟಾಪ್ 5 ಫೈನಲಿಸ್ಟ್‌ಗಳಲ್ಲಿ ಒಬ್ಬರು ಆಗಿದ್ದರು.

ಇದಾದ ನಂತರ ನಟಿ ಭವ್ಯಾ ಗೌಡ ಅವರು ಪ್ರಸ್ತುತವಾಗಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಕರ್ಣ’ ಧಾರಾವಾಹಿಯಲ್ಲಿ ನಿಧಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಕರ್ಣನ ಹುಡುಗಿ, ನಿತ್ಯಳ ಮುದ್ದು ತಂಗಿಯಾಗಿ ನಟಿಸುತ್ತಿರುವ ಭವ್ಯಾ ಗೌಡ ಅವರ ಅಭಿನಯಕ್ಕೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅದರ ಜೊತೆಗೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋನಲ್ಲಿ ಭರ್ಜರಿಯಾಗಿ ನೃತ್ಯ ಮಾಡುತ್ತಿದ್ದಾರೆ.

ಭವ್ಯಾ ಗೌಡ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ನಿನ್ನೆ ಅವರ ಹುಟ್ಟುಹಬ್ಬವನ್ನು ಕುಟುಂಬಸ್ಥರು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ಈ ಹುಟ್ಟುಹಬ್ಬದ ಸಂಭ್ರಮದಲ್ಲಿ ಕುಟುಂಬಸ್ಥರು, ಸ್ನೇಹಿತರು ಹಾಗೂ ಕಿರುತೆರೆ ಕಲಾವಿದರು ಭಾಗಿಯಾಗಿದ್ದರು.

ಅದರಲ್ಲೂ ವಿಶೇಷವಾಗಿ ಗೀತಾ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದ ವಿಜಯ್‌ ಅಂದರೆ ಬಿಗ್‌ಬಾಸ್‌ ಸ್ಪರ್ಧಿ ಧನುಷ್ ಗೌಡ ಕೂಡ ಭ್ಯವಾ ಗೌಡ ಅವರ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದರು.

ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿಗಳಾದ ಕಾವ್ಯ ಗೌಡ, ಸ್ಪ‍ಂದನಾ ಸೋಮಣ್ಣ, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ, ನಮ್ರತಾ ಗೌಡ ಸೇರಿದಂತೆ ಹಲವಾರು ಮಂದಿ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT