ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮಹಾಭಾರತ'ದ ಭೀಮ ಪ್ರವೀಣ್ ಕುಮಾರ್ ಸೋಬ್ತಿ ನಿಧನ

Last Updated 8 ಫೆಬ್ರುವರಿ 2022, 7:27 IST
ಅಕ್ಷರ ಗಾತ್ರ

ನವದೆಹಲಿ: ಟಿವಿ ಸರಣಿ ಮಹಾಭಾರತದಲ್ಲಿ ಭೀಮನ ಪಾತ್ರದ ಮೂಲಕ ಮನೆಮಾತಾಗಿದ್ದ ನಟ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಕ್ರೀಡಾಪಟು ಪ್ರವೀಣ್ ಕುಮಾರ್ ಸೋಬ್ತಿ ಸೋಮವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.

ಇಲ್ಲಿನ ಅಶೋಕ ವಿಹಾರದ ನಿವಾಸದಲ್ಲಿ ನಟ ಕೊನೆಯುಸಿರೆಳೆದಿದ್ದಾರೆ.

‘ಅವರಿಗೆ ದೀರ್ಘಕಾಲದ ಎದೆಯ ಸೋಂಕಿನ ಸಮಸ್ಯೆ ಇತ್ತು. ರಾತ್ರಿ, ಅವರು ಅಸ್ವಸ್ಥರಾಗಿದ್ದರಿಂದ ನಾವು ವೈದ್ಯರನ್ನು ಮನೆಗೆ ಕರೆಸಿದ್ದೆವು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹೃದಯ ಸ್ತಂಭನದಿಂದ ರಾತ್ರಿ 10 ರಿಂದ 10.30 ರ ನಡುವೆ ನಿಧನರಾದರು’ಎಂದು ಪ್ರವೀಣ್ ಅವರ ಸಂಬಂಧಿಯೊಬ್ಬರು ಪಿಟಿಐಗೆ ತಿಳಿಸಿದರು.

ಪ್ರವೀಣ್ ಅವರು ಹ್ಯಾಮರ್ ಮತ್ತು ಡಿಸ್ಕಸ್ ಥ್ರೋನಲ್ಲಿ ಹಲವು ಕ್ರೀಡಾಕೂಟಗಳಲ್ಲಿ ದೇಶವನ್ನು ಪ್ರತಿನಿಧಿಸಿದರು. 1966 ಮತ್ತು 1970 ರಲ್ಲಿ ಎರಡು ಚಿನ್ನದ ಪದಕಗಳನ್ನು ಒಳಗೊಂಡಂತೆ ಏಷ್ಯನ್ ಗೇಮ್ಸ್‌ನಲ್ಲಿ ನಾಲ್ಕು ಪದಕಗಳನ್ನು ಅವರು ಗೆದ್ದಿದ್ದಾರೆ.

ಅವರು 1966 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಹ್ಯಾಮರ್ ಥ್ರೋನಲ್ಲಿ ಬೆಳ್ಳಿ ಪದಕವನ್ನು ಗೆದ್ದರು.

1988 ರಲ್ಲಿ ಬಿ.ಆರ್‌. ಚೋಪ್ರಾ ಅವರ ಮಹಾಭಾರತ ಟಿವಿಸರಣಿಯಲ್ಲಿ ಭೀಮನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ನಟನಾ ವೃತ್ತಿ ಆರಂಭಿಸಿದರು.. ಈ ಪಾತ್ರವು ಅವರಿಗೆ ಅಭೂತಪೂರ್ವ ಜನಪ್ರಿಯತೆಯನ್ನು ತಂದುಕೊಟ್ಟಿತು.

ಅವರು ಪತ್ನಿ, ಪುತ್ರಿ, ಇಬ್ಬರು ತಮ್ಮಂದಿರನ್ನುಅಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT