ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕಪ್ ರಿಯಾಲಿಟಿ ಶೋ ಗೆದ್ದ ಹಾಸ್ಯ ಕಲಾವಿದ ಮುನಾವರ್ ಫಾರೂಕಿ

ಅಕ್ಷರ ಗಾತ್ರ

ಮುಂಬೈ: ‘ಆಲ್ಟ್ ಬಾಲಾಜಿ’ ಹಾಗೂ ‘ಎಂಎಕ್ಸ್‌ ಪ್ಲೇಯರ್‌’ನಲ್ಲಿ ಪ್ರಸಾರವಾಗುತ್ತಿದ್ದ ಲಾಕಪ್ ರಿಯಾಲಿಟಿ ಶೋನಲ್ಲಿ ಹಾಸ್ಯ ಕಲಾವಿದ ಮುನಾವರ್ ಫಾರೂಕಿ ಅವರು ಜಯಶಾಲಿಯಾಗಿದ್ದಾರೆ. ಈ ಮೂಲಕ ಅವರು ₹25 ಲಕ್ಷ ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.

ನಿನ್ನೆ ಸಂಜೆ ನಡೆದ ಫೈನಲ್‌ನಲ್ಲಿ ಶೋ ನಿರೂಪಕಿ ಕಂಗನಾ ರನೌಟ್ ಅವರು ವಿಜಯಶಾಲಿ ಹೆಸರು ಘೋಷಿಸಿದರು. ಫಾರೂಕಿ ಜೊತೆ ನಟಿ ಪಾಯಲ್ ರೋಹಟಗಿ ಅವರು ರನ್ನರ್ ಅಪ್ ಆಗಿದ್ದಾರೆ.

70 ದಿನ ನಡೆದ ಈ ಶೋ ನಲ್ಲಿ 20 ಸ್ಪರ್ಧಿಗಳು ಭಾಗವಹಿಸಿದ್ದರು. ಹೊಸತನದ ಟಾಸ್ಕ್‌ಗಳಿದ್ದಿದ್ದರಿಂದ ಈ ಶೋ ಸಾಕಷ್ಟು ಜನರ ಗಮನ ಸೆಳೆದಿತ್ತು. ಅಲ್ಲದೇ ಸ್ಪರ್ಧಿಗಳು ತಮ್ಮ ಜೀವನದ ಸತ್ಯ ಘಟನೆಗಳನ್ನು ಪ್ರೇಕ್ಷಕರ ಮುಂದೆ ಮುಕ್ತವಾಗಿ ಹೇಳಿಯೂ ಸುದ್ದಿಯಾಗಿದ್ದರು.

ನಟಿ ಕಂಗನಾ ಕೂಡ ಈ ಶೋನಲ್ಲಿ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಮುಕ್ತವಾಗಿ ಹೇಳಿಕೊಂಡು ಗಮನ ಸೆಳೆದಿದ್ದರು.

ಸ್ಪರ್ಧಿಗಳು ವಿವಿಧ ಆರೋಪಗಳ ಮೇಲೆ ಜೈಲು ಸೇರಿ (ಕಾಲ್ಪನಿಕ) ಜೈಲು ಹಕ್ಕಿಗಳಾಗಿ ಹೇಗೆ ಹೊರ ಜಗತ್ತಿನ ಮನ ಗೆಲ್ಲುತ್ತಾರೆ ಎಂಬುದು ಲಾಕಪ್ ಶೋ ತಿರುಳಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT