ಭಾನುವಾರ, ಜುಲೈ 25, 2021
27 °C

ಸಹಜ ಸುಂದರಿ ನಿಯಾ ಶರ್ಮಾ ಮೇಕಪ್ ಇಲ್ಲದ‌ ಫೋಟೊ ವೈರಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿಂದಿ ಕಿರುತೆರೆ ನಟಿ ನಿಯಾ ಶರ್ಮಾ ಮೇಕಪ್‌ ಇಲ್ಲದ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಸಹಜ ಸುಂದರಿಯಾಗಿರುವ ನಟಿ ಮೇಕಪ್ ಇಲ್ಲದೆಯೂ ಸುಂದರವಾಗಿ ಕಾಣುತ್ತಾರೆ. 

ಲಾಕ್‌ಡೌನ್‌ ಸಮಯದಲ್ಲಿ ಮೊಬೈಲ್‌ ಕೆಮೆರಾದಲ್ಲಿ ಸೆರೆ ಹಿಡಿದ ಮತ್ತು ಸೆಲ್ಫಿ ಚಿತ್ರಗಳನ್ನು ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಮೇಕಪ್‌ ಇಲ್ಲದೆ ನಾನು ಹೇಗೆ ಕಾಣುತ್ತೇನೆ’ ಎಂದು ಆಕೆ ಪ್ರಶ್ನಿಸಿದ್ದಾರೆ. ‘ಮೇಕಪ್‌ ಇಲ್ಲದೆ ನೈಜವಾಗಿ ಮತ್ತು ಸುಂದರವಾಗಿ ಕಾಣುವುದು ನನಗೆ ಇಷ್ಟ’ ಎಂದು ಹೇಳಿದ್ದಾರೆ. 

‘ಮೇಕಪ್ ಇಲ್ಲದೆಯೂ ನೀವು ಸುಂದರವಾಗಿ ಕಾಣುತ್ತೀರಿ. ನೀವೊಬ್ಬ ಸಹಜ ಸುಂದರಿ’ ಎಂದು ಬಹಳಷ್ಟು ಜನರು ಬೆನ್ನು ತಟ್ಟಿದ್ದಾರೆ.

‘ಹೌದಲ್ಲ, ಮೇಕಪ್‌ ಇಲ್ಲದೆಯೂ ಚೆನ್ನಾಗಿ ಕಾಣುತ್ತೀರಿ. ಮೇಕಪ್‌ ಇಲ್ಲದೆ ಹಿರಿತೆರೆ ಮತ್ತು ಕಿರುತೆರೆ ನಟಿಯರನ್ನು ಗುರುತಿಸುವುದು ಕಷ್ಟ. ಮೇಕಪ್‌ ಇಲ್ಲದಿದ್ದರೆ ಹೆಚ್ಚಿನವರನ್ನು ನೋಡಲು ಆಗದು. ಆದರೆ, ನೀವು ಹಾಗಲ್ಲ. ಒಂದೇ ರೀತಿ ಕಾಣುತ್ತೀರಿ’ ಎಂದು ಹಲವರು ಶಹಬ್ಬಾಸ್‌ಗಿರಿ ಕೊಟ್ಟಿದ್ದಾರೆ.

ಕಿರುತೆರೆಯಲ್ಲಿ ಪ್ರಸಾರವಾದ ‘ಕಾಲಿ’ ಮತ್ತು ‘ಏಕ್‌ ಹಜಾರೋ ಮೇ ಮೇರಿ ಬೆಹ್ನಾ ಹೈ’ ಧಾರಾವಾಹಿಗಳಿಂದ ನಿಯಾ ಶರ್ಮಾ ಮನೆಮಾತಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು