ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಒಲವಿನ ನಿಲ್ದಾಣ’ದ ಪಯಣ ಶುರು

Last Updated 6 ಜುಲೈ 2022, 8:59 IST
ಅಕ್ಷರ ಗಾತ್ರ

ಮದುವೆಯ ಕುರಿತು ಇಂದಿನ ಹುಡುಗ ಹುಡುಗಿಯರ ಆಲೋಚನೆಗಳೇ ಬೇರೆ. ಅದರ ಸುತ್ತ ಬೆಳೆಯುವ ಕಥಾವಸ್ತುವನ್ನು ಹೊಂದಿದ ‘ಒಲವಿನ ನಿಲ್ದಾಣ’ ಧಾರಾವಾಹಿ ಜುಲೈ 11ರ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 6ಗಂಟೆಗೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಮಂಡ್ಯ ರಮೇಶ್‌, ಅಶೋಕ್ ಈ ಧಾರಾವಾಹಿಯ ಪ್ರಮುಖ ಪಾತ್ರಗಳಲ್ಲಿದ್ದಾರೆ. ಯುವ ಜೋಡಿಯಾಗಿ ಅಮಿತಾ ಕುಲಾಲ್ ಹಾಗೂ ಅಕ್ಷಯ್ ನಾಯಕ್ ಅಭಿನಯಿಸಿದ್ದಾರೆ.

ಶಿವಮೊಗ್ಗ, ಚಿಕ್ಕಮಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಪಶ್ಚಿಮ ಘಟ್ಟದ ಹಸಿರನ್ನು ‘ಒಲವಿನ ನಿಲ್ದಾಣ’ ಹೊದ್ದುಕೊಂಡಿದೆ. ಹಾಗಾಗಿ ಮನಸ್ಸಿಗೂ ಕಣ್ಣಿಗೂ ಈ ಧಾರಾವಾಹಿ ಮುದ ನೀಡಲಿದೆ. ಶ್ರುತಿ ನಾಯ್ಡು ನಿರ್ಮಿಸಿರುವ ಈ ಧಾರಾವಾಹಿಯನ್ನು ರಮೇಶ್ ಇಂದಿರಾ ನಿರ್ದೇಶಿಸಿದ್ದಾರೆ.

ಪ್ರೀಮಿಯರ್‌ ಶೋ: ಇದೇ ಮೊದಲ ಬಾರಿಗೆ ಧಾರಾವಾಹಿಯೊಂದರ ಪ್ರಿಮಿಯರ್ ಶೋ ನಡೆಯುತ್ತಿದೆ. ಜುಲೈ 10ರಂದು ಮೈಸೂರು, ಶಿವಮೊಗ್ಗ ಹಾಗೂ ದಾವಣಗೆರೆಗಳಲ್ಲಿ ‘ಒಲವಿನ ನಿಲ್ದಾಣ’ದ ಪ್ರಿಮಿಯರ್ ಶೋವನ್ನು ಕಲರ್ಸ್ ಕನ್ನಡ ಆಯೋಜಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT