ಹಿರಿಯ ನಟಿ ವಿನಯಾ ಪ್ರಸಾದ್ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿಯನ್ನು ‘ಜೀ ಕನ್ನಡ’ ವಾಹಿನಿ ಹೊತ್ತು ತಂದಿದೆ. ‘ದೊಡ್ಡ ಮನೆತನದ ಕಥೆಯೊಂದನ್ನು ಪಾರು ಎಂಬ ಹೆಸರಿನ ಹೊಸ ಧಾರವಾಹಿ ವೀಕ್ಷಕರಿಗೆ ಹೇಳಲಿದೆ. ವಿನಯಾ ಪ್ರಸಾದ್ ಇದರಲ್ಲಿ ಪ್ರಮುಖ ಪಾತ್ರ ನಿಭಾಯಿಸಲಿದ್ದಾರೆ’ ಎಂದು ಹೇಳಿದೆ ವಾಹಿನಿ.

ದೊಡ್ಡ ಮನೆತನದ ಒಡತಿ ಅಖಿಲಾಂಡೇಶ್ವರಿ ಹಾಗೂ ಅದೇ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಪಾರು ನಡುವಿನ ಕಥೆಯನ್ನು ಈ ಧಾರಾವಾಹಿಯ ಮೂಲಕ ನಿರ್ದೇಶಕ ಗುರುಪ್ರಸಾದ್ ಮುಡೇನಹಳ್ಳಿ ನಿರೂಪಿಸುತ್ತಿದ್ದಾರೆ. ಡಿಸೆಂಬರ್ 3ರಿಂದ ಪ್ರತಿ ರಾತ್ರಿ 9.30ಕ್ಕೆ ಇದು ಪ್ರಸಾರವಾಗಲಿದೆ. ಈ ಧಾರಾವಾಹಿಯನ್ನು ನಟ - ನಿರ್ದೇಶಕ ದಿಲೀಪ್ ರಾಜ್ ನಿರ್ಮಾಣ ಮಾಡುತ್ತಿದ್ದಾರೆ.

ಹುಟ್ಟಿನಿಂದಲೇ ಶ್ರೀಮಂತಿಕೆಯನ್ನು ಹೊದ್ದುಕೊಂಡು ಬಂದ ಮಹಾರಾಣಿ ಅಖಿಲಾಂಡೇಶ್ವರಿಯ ಪಾತ್ರವನ್ನು ವಿನಯಾ ಪ್ರಸಾದ್ ನಿರ್ವಹಿಸುತ್ತಿದ್ದಾರೆ. ಶಿಸ್ತಿನ ಸಿಪಾಯಿಯಾಗಿರುವ ಅಖಿಲಾಂಡೇಶ್ವರಿ ಎಂದರೆ ಆ ಗ್ರಾಮದ ಜನರ ಪಾಲಿಗೆ ಸಿಂಹಿಣಿ ಇದ್ದಂತೆ. ಆಕೆ ಹೇಳಿದ್ದೇ ಅಲ್ಲಿ ವೇದ ವಾಕ್ಯ. ಅಖಿಲಾಂಡೇಶ್ವರಿಯ ಹಿರಿಯ ಮಗ ಆದಿತ್ಯ ದೊಡ್ಡ ಬಿಸಿನೆಸ್ ಐಕಾನ್.

ಇರುವುದರಲ್ಲೇ ಬದುಕು ಕಂಡುಕೊಳ್ಳಬೇಕು, ಬದುಕನ್ನು ಪ್ರೀತಿಸಬೇಕು ಎನ್ನವುದು ಪಾರು ಪಾತ್ರದ ನಿಲುವು. ‘ಈಗ ಪ್ರಸಾರವಾಗುತ್ತಿರುವ ಎಲ್ಲ ಧಾರಾವಾಹಿಗಳಿಗಿಂತ ಇದು ಭಿನ್ನ ನಿರೂಪಣೆಯ ಧಾರವಾಹಿಯಾಗಿದ್ದು ಪ್ರೇಕ್ಷಕರನ್ನು ರಂಜಿಸಲಿದೆ’ ಎನ್ನುತ್ತಾರೆ ಜೀ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.