ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾರಿ ಡಿಕ್ಕಿ ಹೊಡೆದು ಬಂಗಾಳಿ ಕಿರುತೆರೆ ನಟಿ ಸುಚಂದ್ರಾ ದಾಸ್‌ಗುಪ್ತ ದುರ್ಮರಣ

Published 21 ಮೇ 2023, 10:15 IST
Last Updated 21 ಮೇ 2023, 10:15 IST
ಅಕ್ಷರ ಗಾತ್ರ

ಕೋಲ್ಕತ್ತ: ಬಂಗಾಳಿಯ ಜನಪ್ರಿಯ ಕಿರುತೆರೆ ನಟಿ ಸುಚಂದ್ರಾ ದಾಸ್‌ಗುಪ್ತ ಅವರು ಶನಿವಾರ ರಾತ್ರಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಶೂಟಿಂಗ್ ಮುಗಿಸಿಕೊಂಡು ದ್ವಿಚಕ್ರವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ, ಕೋಲ್ಕತ್ತದ ಹೊರವಲಯದ ಬಾರಾನಗರದಲ್ಲಿ ವೇಗವಾಗಿ ಬಂದ ಟ್ರಕ್ ಆಕೆಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಸುಚಂದ್ರಾ ದಾಸ್‌ಗುಪ್ತ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಅಪಘಾತ ನಡೆದ ಮಾರ್ಗದಲ್ಲಿ ಟ್ರಕ್‌ ಚಾಲಕರ ವೇಗದ ಚಾಲನೆಯನ್ನು ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಜನಪ್ರಿಯ ಬಂಗಾಳಿ ಧಾರಾವಾಹಿ ‘ಗೌರಿ ಎಲೋ’ನಲ್ಲಿನ ಅಭಿನಯಕ್ಕಾಗಿ ಸುಚಂದ್ರಾ ದಾಸ್‌ಗುಪ್ತ ಸಾಕಷ್ಟು ಜನಪ್ರಿಯರಾಗಿದ್ದರು. ಸುಚಂದ್ರಾ ಸಾವಿನಿಂದಾಗಿ ಬಂಗಾಳಿ ಕಿರುತೆರೆ ಲೋಕ ಆಘಾತಕ್ಕೀಡಾಗಿದೆ.

ನಟಿಯಾಗಿ ಜನಪ್ರಿಯರಾಗಿದ್ದ ಸುಚಂದ್ರಾ, ಎಲ್ಲರೊಂದಿಗೆ ಬೆರೆಯುವ ತಮ್ಮ ನಡವಳಿಕೆಯಿಂದ ಜನರ ಪ್ರೀತಿಗೆ ಪಾತ್ರರಾಗಿದ್ದರು.

ಟ್ರಕ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT