ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉದಯ ವಾಹಿನಿಯಲ್ಲಿ ಹೊಸ ಧಾರಾವಾಹಿ: ‘ಪ್ರೀತಿಯ ಅರಸಿ’

Published 12 ಅಕ್ಟೋಬರ್ 2023, 22:30 IST
Last Updated 12 ಅಕ್ಟೋಬರ್ 2023, 22:30 IST
ಅಕ್ಷರ ಗಾತ್ರ

ರಮೇಶ್‌ ಇಂದಿರಾ ನಿರ್ದೇಶನದ ‘ಪ್ರೀತಿಯ ಅರಸಿ’ ಎಂಬ ಶೀರ್ಷಿಕೆಯ ಧಾರಾವಾಹಿಯೊಂದು ಉದಯ ವಾಹಿನಿಯಲ್ಲಿ ಅ.16ರಿಂದ ಆರಂಭವಾಗಲಿದೆ. ಪ್ರತಿ ದಿನ 9ಕ್ಕೆ ಇದು ಪ್ರಸಾರವಾಗಲಿದೆ. ಶೃತಿ ನಾಯ್ಡು ನಿರ್ಮಿಸಿ, ರಮೇಶ್‌ ಇಂದಿರಾ ನಿರ್ದೇಶಿಸುತ್ತಿರುವ ಈ ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿ ರಕ್ಷಾ ನಿಂಬರ್ಗಿ, ಪೃಥ್ವಿ ಶೆಟ್ಟಿ ನಟಿಸಿದ್ದಾರೆ.

‘ಅಂಜಲಿ’ ಎಂಬ ಪಾತ್ರದಲ್ಲಿ ರಕ್ಷಾ ನಟಿಸಿದ್ದು, ‘ರಾಕಿ’ಯಾಗಿ ಪೃಥ್ವಿ ಕಾಣಿಸಿಕೊಳ್ಳಲಿದ್ದಾರೆ. ಅಂಜಲಿ ಮತ್ತು ರಾಕಿ, ಇಬ್ಬರೂ ಸಾಮಾನ್ಯ ಜಗತ್ತಿನಲ್ಲಿ ಅಸಾಮಾನ್ಯ ಯೋಚನಾಲಹರಿ ಹೊಂದಿರುವವರು. ತನ್ನ ಉದ್ಯೋಗದಲ್ಲಿ ಅತ್ಯುನ್ನತ ಮಟ್ಟಕ್ಕೇರುವುದು ಅಂಜಲಿಯ ಕನಸು. ಕುಟುಂಬವೇ ಸರ್ವಸ್ವ, ಮನೆಯೇ ಎಲ್ಲಕ್ಕಿಂತ ಮುಖ್ಯ ಅನ್ನುವುದು ರಾಕಿಯ ನಿರ್ಧಾರ. ಇವರಿಬ್ಬರ ಅಪರೂಪದ ಪ್ರೇಮ ಕಥೆ ಪ್ರೀತಿಯ ಅರಸಿ ಎಂದಿದೆ ತಂಡ.   

ಮುಖ್ಯಪಾತ್ರಗಳಲ್ಲಿ ಜೈಜಗದೀಶ್‌, ಗಿರಿಜಾ ಲೋಕೇಶ್‌ ಮತ್ತು ಪದ್ಮಾ ವಾಸಂತಿ ಅಭಿನಯಿಸಿದ್ದಾರೆ. ಇವರೊಂದಿಗೆ ಮಿಥುನ್‌ ತೇಜಸ್ವಿ, ನಾಗೇಂದ್ರ ಅರಸ್‌ ಮತ್ತು ರಾಧಾ ಜೈರಾಮ್‌ ತಾರಾಬಳಗದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT