ಬುಧವಾರ, ಮೇ 27, 2020
27 °C

ರಾಮಾಯಣ, ಮಹಾಭಾರತದ ಬಳಿಕ ಬರಲಿದೆ ಶಕ್ತಿಮಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Shaktiman

ನವದೆಹಲಿ: ದೇಶವ್ಯಾಪಿ ಲಾಕ್‍ಡೌನ್ ಆಗಿರುವ ಈ ಹೊತ್ತಲ್ಲಿ 80 ಮತ್ತು 90ರ ದಶಕಗಳಲ್ಲಿ ದೂರದರ್ಶನದ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರವಾಹಿ ರಾಮಾಯಣ, ಮಹಾಭಾರತ, ಬ್ಯೋಮ್‌ಕೇಶ್ ಬಕ್ಷಿ ಮತ್ತು ಸರ್ಕಸ್ ಮತ್ತೊಮ್ಮೆ ಪ್ರಸಾರವಾಗುತ್ತಿದೆ.

ಜನಪ್ರಿಯ ಧಾರವಾಹಿಗಳನ್ನು ಮತ್ತೊಮ್ಮೆ ಪ್ರಸಾರ ಮಾಡಬೇಕು ಎಂಬ ಜನರ ಬೇಡಿಕೆಯ ಪಟ್ಟಿಯಲ್ಲಿ ಶಕ್ತಿಮಾನ್ ಧಾರವಾಹಿಯೂ ಇತ್ತು. ಜನರ ಬೇಡಿಕೆಯಂತೆ ಮುಕೇಶ್ ಖನ್ನಾ ಅವರ ಶಕ್ತಿಮಾನ್ ಮತ್ತೆ ಪ್ರಸಾರವಾಗಲಿದೆ. ಈ ಧಾರವಾಹಿಯ ಮುಂದುವರಿದ ಭಾಗದ ಕೆಲಸಗಳು ನಡೆಯುತ್ತಿವೆ ಎಂದು ನಟ ಮುಕೇಶ ಖನ್ನಾ ಹೇಳಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶಕ್ತಿಮಾನ್ ಸೀಕ್ವೆಲ್ ಬಗ್ಗೆ ಮುಕೇಶ್ ಖನ್ನಾ ಮಾತನಾಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಶಕ್ತಿಮಾನ್ ಧಾರವಾಹಿಯ ಎರಡನೇ ಸಂಚಿಕೆಯ ಕೆಲಸ ಮಾಡುತ್ತಾ ಬಂದಿದ್ದೇವೆ. ಇದು ಸಮಕಾಲೀನ ವಿಷಯಾಧಾರಿತವಾಗಿದ್ದು, ನಮ್ಮ ಮೌಲ್ಯಗಳಿಗೂ ಒತ್ತು ನೀಡುತ್ತದೆ. ಮುಂದೇನಾಗುತ್ತದೆ ಎಂಬ ಕುತೂಹಲ ಜನರಲ್ಲಿರುವುದರಿಂದ ನಾವು ಮುಂದುವರಿದ ಭಾಗವನ್ನು ಕಿರುತೆರೆಯ ಮೇಲೆ ತರುತ್ತಿದ್ದೇವೆ ಎಂದು ಖನ್ನಾ ಹೇಳಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು