ಶುಕ್ರವಾರ, ಸೆಪ್ಟೆಂಬರ್ 17, 2021
22 °C

ನಾವು ಮತ್ತೆ ಭೇಟಿಯಾಗೋಣ: ಅಗಲಿದ ಗೆಳೆಯನಿಗೆ ಶೆಫಾಲಿ ಭಾವನಾತ್ಮಕ ಪತ್ರ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Shefali Jariwala Instagram Post Screengrab

ಬೆಂಗಳೂರು: ಬಿಗ್ ಬಾಸ್ ಹಿಂದಿ ಸೀಸನ್ 13ರ ವಿಜೇತ ಹಾಗೂ ಧಾರಾವಾಹಿ ನಟ ಸಿದ್ಧಾರ್ಥ್ ಶುಕ್ಲಾ ಅವರು ಹೃದಯಾಘಾತಕ್ಕೆ ಒಳಗಾಗಿ ಗುರುವಾರ ನಿಧನರಾಗಿದ್ದಾರೆ. 

ಸಿದ್ಧಾರ್ಥ್ ಅವರ ನಿಧನಕ್ಕೆ ಬಾಲಿವುಡ್ ಮಂದಿ ಮತ್ತು ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದರು.

ಬಿಗ್ ಬಾಸ್‌ನಲ್ಲಿ ಅವರ ಜತೆಗಿದ್ದ ಗೆಳತಿ ಶೆಫಾಲಿ ಜರಿವಾಲಾ, ಗೆಳೆಯನ ನೆನಪಿನಲ್ಲಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದು, ‘ನೀನು ಒಳ್ಳೆಯ ತಾಣದಲ್ಲಿ ಇದ್ದೀಯ, ಮುಂದೊಂದು ದಿನ ನಾವು ಮತ್ತೆ ಭೇಟಿಯಾಗೋಣ’ ಎಂದು ಒಡೆದ ಹೃದಯದ ಎಮೋಜಿ ಬಳಸಿ, ಸಿದ್ಧಾರ್ಥ ಅವರನ್ನು ಅಪ್ಪಿಕೊಂಡಿರುವ ಫೋಟೊ ಒಂದನ್ನು ಹಂಚಿಕೊಂಡಿದ್ದಾರೆ.

ಸಿದ್ಧಾರ್ಥ್ ಅವರ ನಿಧನದ ಸುದ್ದಿ ಕೇಳಿದ ಕೂಡಲೇ ಮುಂಬೈನ ಅವರ ಮನೆಗೆ ಶೆಫಾಲಿ ತೆರಳಿದ್ದರು. ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದರು.

2019ರಲ್ಲಿ ಬಿಗ್ ಬಾಸ್ ಸೀಸನ್ ಹಿಂದಿ ಸೀಸನ್ 13ರಲ್ಲಿ ಶೆಫಾಲಿ ಮತ್ತು ಸಿದ್ಧಾರ್ಥ್ ಅವರ ಮಧ್ಯೆ ಗೆಳೆತನ ಉಂಟಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು