ಭಾನುವಾರ, ಜುಲೈ 3, 2022
23 °C

ನನ್ನ ಬ್ರಾ ಸೈಜಿನ ಅಳತೆಯನ್ನು ದೇವರು ತೆಗೆದುಕೊಳ್ಳುತ್ತಾನೆ: ನಟಿ ಶ್ವೇತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿಂದಿಯ ಜನಪ್ರಿಯ ಕಿರುತೆರೆ ನಟಿ ಶ್ವೇತಾ ತಿವಾರಿ ದೇವರ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ.

ಅವರ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು ನೆಟ್ಟಿಗರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಘಟನೆ ಕುರಿತಂತೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ತನಿಖೆಗೆ ಆದೇಶ ಮಾಡಿದ್ದು 24 ಗಂಟೆಗಳ ಒಳಗಾಗಿ ವರದಿ ನೀಡುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ

ಶ್ವೇತಾ ತಿವಾರಿ ಭೋಪಾಲ್‌ಗೆ ಬಂದಾಗ ಈ ರೀತಿಯ ಹೇಳಿಕೆ ನೀಡಿದ್ದಾರೆ. ಅವರು  ‘ಶೋ ಸ್ಟಾಪರ್’ ವೆಬ್‌ ಸರಣಿಯ ಪ್ರಚಾರ ಸಂದರ್ಭದಲ್ಲಿ ದೇವರ ಕುರಿತಾಗಿ ಮಾತನಾಡಿದ್ದಾರೆ. ‘ಶೋ ಸ್ಟಾಪರ್’ ವೆಬ್‌ ಸರಣಿಯಲ್ಲಿ ಶ್ವೇತಾ ತಿವಾರಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಫ್ಯಾಶನ್‌ ವಲಯಕ್ಕೆ ಸಂಬಂಧಿಸಿದ ವೆಬ್‌ಸರಣಿಯಾಗಿದೆ. 

ಕಾರ್ಯಕ್ರಮದಲ್ಲಿ ಅವರು ತಮ್ಮ ಒಳ ಉಡುಪುಗಳ ಬಗ್ಗೆ ಮಾತನಾಡುವಾಗ ’ನನ್ನ ಬ್ರಾ ಸೈಜಿನ ಅಳತೆಯನ್ನು ದೇವರು ತೆಗೆದುಕೊಳ್ಳುತ್ತಾನೆ’ (ಮೇರಿ ಬ್ರಾ ಕಾ ಸೈಜ್ ಭಗವಾನ್ ಲೇ ರಹೇ ಹೈ) ಎಂದು ಹೇಳಿದ್ದಾರೆ.  

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ದೇವರ ಬಗ್ಗೆ ಈ ರೀತಿ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಶ್ವೇತಾ ತಿವಾರಿ ಅವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. 

ಶ್ವೇತಾ ಹೇಳಿಕೆ ಕುರಿತಂತೆ ಈಗಾಗಲೇ ತನಿಖೆಗೆ ಆದೇಶ ಮಾಡಲಾಗಿದೆ. ಕಾನೂನು ತಜ್ಞರ ಜೊತೆ ಸಮಾಲೋಚಿಸಿ ಯಾವ ರೀತಿಯ ಕ್ರಮಕೈಗೊಳ್ಳಬಹುದು ಎಂಬುದನ್ನು ವಿಚಾರಿಸಿ ಹೇಳುತ್ತೇನೆ ಎಂದು ನರೋತ್ತಮ್ ಮಿಶ್ರಾ ಹೇಳಿದ್ದಾರೆ.

ಇದನ್ನೂ ಓದಿ: 

ಕಿರುತೆರೆಯಲ್ಲಿ ‘ಕಸೌತಿ ಜಿಂದಗಿ ಕೇ’ ಕಾರ್ಯಕ್ರಮ ಅವರಿಗೆ ಜನಪ್ರಿಯತೆ ತಂದುಕೊಟ್ಟಿದೆ. ’ಖತ್ರೋನ್ ಕೆ ಖಿಲಾಡಿ’ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಖ್ಯಾತಿ ಪಡೆದಿದ್ದರು. ಹಲವು ವಿಡಿಯೊ ಸಾಂಗ್ ಹಾಗೂ ವೆಬ್‌ಸರಣಿಗಳಲ್ಲಿ ಶ್ವೇತಾ ಕಾಣಿಸಿಕೊಂಡಿದ್ದಾರೆ. 

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು