ತೆಲುಗು ಖ್ಯಾತ ನಟ ನಾಗಾರ್ಜುನ ಅಕ್ಕಿನೇನಿ ನಡೆಸಿಕೊಡುವ‘ಬಿಗ್ ಬಾಸ್ ತೆಲುಗು ಸೀಸನ್ 4’ ರಿಯಾಲಿಟಿ ಶೋಶೂಟಿಂಗ್ ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಪ್ರಾರಂಭವಾಗಿದೆ.ಈ ಶೋ ಇದೇ 30ರಿಂದ ಪ್ರಸಾರವಾಗುವ ನಿರೀಕ್ಷೆ ಇದೆ.

ತೆಲುಗು ಕಿರುತೆರೆ ಪ್ರೇಕ್ಷಕರ ಕುತೂಹಲ ಕೆರಳಿಸಿರುವ ಈ ರಿಯಾಲಿಟಿ ಶೋ ನಾಗಾರ್ಜುನ ಅವರ ನಿರೂಪಣೆಯಿಂದ ಮತ್ತಷ್ಟು ಆಕರ್ಷಣೆಯನ್ನು ಹಚ್ಚಿಸಿಕೊಂಡಿದೆ. ಜನಪ್ರಿಯ ರಿಯಾಲಿಟಿ ಶೋ ಮೂಲಕ ಟಿ.ವಿ ಕಾರ್ಯಕ್ರಮದಲ್ಲೂ ಕಾಣಿಸಿಕೊಳ್ಳಲಿರುವ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಶೋನ ಪ್ರೊಮೊ ಚಿತ್ರೀಕರಣದಲ್ಲಿ ನಾಗಾರ್ಜುನ ಪಾಲ್ಗೊಂಡಿದ್ದು, ಸದ್ಯದಲ್ಲೇ ಹೊಸ ಪ್ರೊಮೊ ಬಿಡುಗಡೆ ಮಾಡಲು ಆಯೋಜಕರು ಸಜ್ಜಾಗಿದ್ದಾರಂತೆ.

ಕೊರೊನಾ ಲಾಕ್‌ಡೌನ್‌ನಿಂದಾಗಿ ನೆನೆಗುದಿಗೆ ಬಿದ್ದಿದ್ದ ಈ ರಿಯಾಲಿಟಿ ಶೋ ಚಿತ್ರೀಕರಣ ಈಗ ಲಾಕ್‌ಡೌನ್ ಸಡಿಲಿಕೆಯ ನಂತರ ಅಗತ್ಯ ಮುನ್ನೆಚ್ಚರಿಕೆಯೊಂದಿಗೆ ಶುರುವಾಗಿದೆಯಂತೆ. ಶೋನ ಮೊದಲ ಕಂತು ಆಗಸ್ಟ್ 30ರಿಂದ ಶುರುವಾಗುವ ಸಾಧ್ಯತೆ ಇದ್ದು, ಸದ್ಯದಲ್ಲೇ ಸಂಘಟಕರು ಅಧಿಕೃತವಾಗಿ ಪ್ರಕಟಿಸುವನಿರೀಕ್ಷೆ ಇದೆ.

‘ಬಿಗ್ ಬಾಸ್ ತೆಲುಗು ಸೀಸನ್ 4’ರಲ್ಲಿ ಭಾಗವಹಿಸುವ ಸ್ಪರ್ಧಿಗಳ ಆಯ್ಕೆಯನ್ನು ಸಂಘಟಕರುಅಂತಿಮಗೊಳಿಸುವ ಪ್ರಕ್ರಿಯೆ ಕೈಗೆತ್ತಿಕೊಂಡಿದ್ದು, ಅತೀ ಶೀಘ್ರದಲ್ಲೇ ಸ್ಪರ್ಧಿಗಳ ಪಟ್ಟಿಯನ್ನು ಪ್ರಕಟಿಸಲಿದ್ದಾರೆ. ತರುಣ್, ಶ್ರದ್ಧಾ ದಾಸ್ ಸೇರಿ ಹಲವು ಸೆಲೆಬ್ರಿಟಿಗಳು ಈ ರಿಯಾಲಿಟಿ ಶೋ ಭಾಗವಾಗಲಿದ್ದಾರೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ಕೇಳಿ ಬಂದಿತ್ತು. ಆದರೆ, ಇದನ್ನು ತರುಣ್ ಮತ್ತು ಶ್ರದ್ಧಾ ದಾಸ್ ತಳ್ಳಿಹಾಕಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.