ಗುರುವಾರ , ಜನವರಿ 27, 2022
21 °C

ಭಗವದ್ಗೀತೆ ಹಿಡಿದು ನಾನು ಜಾವೇದ್​ ಅಖ್ತರ್​ ಮೊಮ್ಮಗಳಲ್ಲ ಎಂದ ಮುಸ್ಲಿಂ ನಟಿ ಉರ್ಫಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿಂದಿ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ನಟಿ ಉರ್ಫಿ ಜಾವೇದ್‌ ವಿಚಿತ್ರದವಾದ ಬಟ್ಟೆಗಳನ್ನು ತೊಡುವ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುತ್ತಾರೆ.

ಹಿಂದಿ ಧಾರಾವಾಹಿಗಳಲ್ಲಿ ಸಕ್ರಿಯರಾಗಿರುವ ಉರ್ಫಿ, ಬಿಗ್‌ಬಾಸ್‌ನಲ್ಲಿ ಭಾಗವಹಿಸಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. 

ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ನಟಿ, ಕೈಯಲ್ಲಿ ಭಗವದ್ಗೀತೆ ಹಿಡಿದಿದ್ದರು. ಹಾಗೇ ತಾವು ಧರಿಸಿದ್ದ ಟಿ-ಶರ್ಟ್​ ಮೇಲೆ ‘ನಾನು ಜಾವೇದ್​ ಅಖ್ತರ್​ ಮೊಮ್ಮಗಳಲ್ಲ’ ಎಂದು ಬರೆಯಲಾಗಿತ್ತು. ಈ ಎರಡು ವಿಚಾರಗಳಿಂದ ನೆಟ್ಟಿಗರ ಗಮನ ಸೆಳೆದಿದ್ದಾರೆ.

ಟಿ–ಶರ್ಟ್‌ ಬಗ್ಗೆ ಹೇಳಿಕೊಂಡಿರುವ ಅವರು ನಾನು ಎಲ್ಲಿಗೆ ಹೋದರು ಜನ ನನ್ನ ನೀವು ಜಾವೇದ್‌ ಅಖ್ತರ್‌ ಅವರ ಮೊಮ್ಮಗಳಾ? ಎಂದು ಕೇಳುತ್ತಾರೆ. ನಾನು ಅವರ ಮೊಮ್ಮಗಳು ಅಲ್ಲ ಎನ್ನುವುದು ಇಡೀ ಪ್ರಪಂಚಕ್ಕೆ ಗೊತ್ತಾಗಲಿ ಎಂದು ಅವರು ಈ ಟಿ–ಶರ್ಟ್‌ ಧರಿಸಿರುವೆ ಎಂದು ಹೇಳಿದ್ದಾರೆ. 

ಬಾಲಿವುಡ್‌ ಚಿತ್ರ ಚಿತ್ರಸಾಹಿತಿ ಜಾವೇದ್ ಅಖ್ತರ್​ ಮತ್ತು ಉರ್ಫಿ ಜಾವೇದ್​ ಅವರಿಗೂ ಯಾವುದೇ ಸಂಬಂಧ ಇಲ್ಲ. ಹೆಸರಿನಲ್ಲಿ ‘ಜಾವೇದ್​’ ಇರುವ ಕಾರಣಕ್ಕೆ ಉರ್ಫಿಯನ್ನು ಜಾವೇದ್​ ಅಖ್ತರ್​ ಅವರ ಮೊಮ್ಮಗಳು ಎಂದು ಅನೇಕರು ಭಾವಿಸಿದ್ದಾರೆ. 

ನಾನು ಮುಸ್ಲಿಂ ಧರ್ಮಕ್ಕೆ ಸೇರಿದ್ದರೂ ಆ ಧರ್ಮದ ಮೇಲೆ ನಂಬಿಕೆ ಇಲ್ಲ ಎಂದು ಹೇಳಿಕೆ ನೀಡಿದ್ದರು. ತಾವು ಭಗವದ್ಗೀತೆ ಓದುತ್ತಿರುವುದಾಗಿಯೂ ಹೇಳಿದ್ದರು. ಇದೀಗ ಅವರು ಭಗವದ್ಗೀತೆ ಹಿಡಿದುಕೊಂಡು ಓಡಾಡುತ್ತಿರುವ ವಿಡಿಯೊ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. 

ಬಿಗ್‌ಬಾಸ್‌ನಲ್ಲಿ ಭಾಗವಹಿಸಿದ ಬಳಿಕ ಅವರಿಗೆ ಧಾರವಾಹಿ ಹಾಗೂ ವೆಬ್‌ಸಿರೀಸ್‌ಗಳಲ್ಲಿ ಅವಕಾಶಗಳು ಸಿಕ್ಕಿವೆ. ಸದ್ಯ ಅವರು ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು