ಬುಧವಾರ, ಜೂನ್ 3, 2020
27 °C

‘ವೀಕೆಂಡ್ ವಿತ್ ರಮೇಶ್’ನಲ್ಲಿ ಡಾ. ವೀರೇಂದ್ರ ಹೆಗ್ಗಡೆ, ನಟ ಗಣೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಿ ಕನ್ನಡ ವಾಹಿನಿಯ ಪ್ರಸಿದ್ಧ ರಿಯಾಲಿಟಿ ಶೋ ‘ವೀಕೆಂಡ್ ವಿತ್ ರಮೇಶ್’ ಮರು ಪ್ರಸಾರವಾಗುತ್ತಿದ್ದು, ಇದೇ ಶನಿವಾರ ಮತ್ತು ಭಾನುವಾರ ಕ್ರಮವಾಗಿ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಗೋಲ್ಡನ್‌ ಸ್ಟಾರ್ ಗಣೇಶ್‌ ಅವರ ಸಂಚಿಕೆಗಳು ಪ್ರಸಾರವಾಗಲಿವೆ.

‘ವೀಕೆಂಡ್ ವಿತ್ ರಮೇಶ್’ನ ಮೊದಲ ಅತಿಥಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಆಗಮಿಸಿದ್ದರು. ಅವರ ಬದುಕಿನ ಸ್ಫೂರ್ತಿದಾಯಕ ಕಥೆ ಈ ಸಂಚಿಕೆಯಲ್ಲಿದೆ. ಅವರ ಮಗಳು ಶ್ರದ್ಧಾ ತನ್ನ ಅಪ್ಪನೊಂದಿಗಿನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ್ದರು. ‘ಅಪ್ಪ ಎಂದರೆ ನನಗೆ ಅವರು ಹೇಳುತ್ತಿದ್ದ ಕಥೆಗಳು ನೆನಪಾಗುತ್ತವೆ. ಅವರು ಕಲ್ಪಿಸಿಕೊಂಡು ಹೇಳುವ ಕಥೆಗಳು ಖುಷಿಕೊಡುತ್ತಿದ್ದವು. ಯಾಕಂದ್ರೆ ಅದರಲ್ಲಿ ನಾನೇ ಹೀರೋಯಿನ್!’ ಎಂದಿದ್ದರು ಶ್ರದ್ಧಾ.

‘ಕಾಮಿಡಿ ಟೈಮ್’ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಪಡೆದುಕೊಂಡ ನಟ ಗಣೇಶ್, ನಂತರ ಹೀರೊ ಆಗಿ, ‘ಗೋಲ್ಡನ್ ಸ್ಟಾರ್’ ಆಗಿ ಬೆಳೆದ ರೀತಿಯೇ ಅದ್ಭುತ. ಗಣೇಶ್ ಹೀರೊ ಆದ ರೋಮಾಂಚಕ ಕಥೆಯನ್ನು ಇದೇ ಭಾನುವಾರ ‘ವಿಕೆಂಡ್ ವಿತ್ ರಮೇಶ್’ ಶೋನ ಮರುಪ್ರಸಾರದಲ್ಲಿ ನೋಡಬಹುದು ಎಂದು ವಾಹಿನಿ ತಿಳಿಸಿದೆ.

ಮೇ 2, ಶನಿವಾರ ಮಧ್ಯಾಹ್ನ 1 ಗಂಟೆಗೆ ಡಾ. ಹೆಗ್ಗಡೆ ಅವರ ಸಂಚಿಕೆ, ಭಾನುವಾರ ಮಧ್ಯಾಹ್ನ 1 ಗಂಟೆಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಂಚಿಕೆ ಪ್ರಸಾರವಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು