ಶುಕ್ರವಾರ, ನವೆಂಬರ್ 22, 2019
23 °C

ಜೀ ಕುಟುಂಬ ಅವಾರ್ಡ್ಸ್‌ 2019 ಮಿಂಚು ಹರಿಸಿದ ಜೀ ಕನ್ನಡ ತಾರೆಯರು

Published:
Updated:
Prajavani

ಜೀ ಕನ್ನಡ ವಾಹಿನಿ ತನ್ನ 13ನೇ ವಸಂತದ ಸಂಭ್ರಮ ಆಚರಿಸಲು ‘ಜೀ ಕುಟುಂಬ ಅವಾರ್ಡ್ಸ್‌ 2019’ ಕಾರ್ಯಕ್ರಮವನ್ನು ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿತ್ತು. ಹೆಸರಾಂತ ಸಂಗೀತ ನಿರ್ದೇಶಕ ಹಂಸಲೇಖ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜೀ ಕುಟುಂಬದ ನಿರೂಪಕರಾದ ಅನುಶ್ರೀ, ಮಾಸ್ಚರ್ ಆನಂದ್ ಹಾಗೂ ವಿಜಯ ರಾಘವೇಂದ್ರ ನಿರೂಪಣೆ ಜೊತೆಗೆ ಕಮಲಿ ಧಾರಾವಾಹಿಯ ಕಮಲಿ, ರಿಶಿ ಹಾಗೂ ಗಟ್ಟಿಮೇಳ ಧಾರಾವಾಹಿಯ ವೇದಾಂತ್ ಮತ್ತು ಅಮೂಲ್ಯ ಜೋಡಿಯೂ ಕಾರ್ಯಕ್ರಮ ನಿರೂಪಿಸಿದ್ದು ವಿಶೇಷವಾಗಿತ್ತು.

ತಾರೆಯರ ಸಮಾಗಮ ವೇದಿಕೆಯಲ್ಲಿ ಜೀ ಕನ್ನಡದ ಕಲಾವಿದರು ಮತ್ತು ತಂತ್ರಜ್ಞರ ಬಳಗ ಸೇರಿದಂತೆ ಕನ್ನಡ ಚಿತ್ರರಂಗದ ಹಲವು ತಾರೆಯರು ಸಹ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಚಲನಚಿತ್ರ ತಾರೆ ಹಾಗೂ ಜೀ ಕುಟುಂಬದ ತೀರ್ಪುಗಾರರೂ ಆಗಿರುವ ನವರಸನಾಯಕ ಜಗ್ಗೇಶ್, ರಮೇಶ್ ಅರವಿಂದ್, ರಕ್ಷಿತಾ ಪ್ರೇಮ್, ರಾಜೇಶ್ ಕೃಷ್ಣನ್, ರೋರಿಂಗ್ ಸ್ಟಾರ್ ಶ್ರೀ ಮುರಳಿ, ಡಾಲಿ ಧನಂಜಯ,

ವಸಿಷ್ಠ ಸಿಂಹ, ನೀನಾಸಂ ಸತೀಶ್ ಜೊತೆಗೆ ಪ್ರಣಯ ರಾಜ ಶ್ರೀನಾಥ್, ಶ್ರೀನಿವಾಸ ಮೂರ್ತಿ ಸೇರಿದಂತೆ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರು ಜೀ ಕುಟುಂಬ ಅವಾರ್ಡ್ಸ್ 2019ರ ಸಂಭ್ರಮದಲ್ಲಿ ಮಿಂದೆದ್ದರು.

44 ವಿಭಾಗಗಳಿಗೆ ಪ್ರಶಸ್ತಿ ಪ್ರಧಾನ: ಜೀ ಕುಟುಂಬದ ಫಿಕ್ಷನ್ ಮತ್ತು ನಾನ್ ಫಿಕ್ಷನ್ ವಿಭಾಗ ಸೇರಿ ಒಟ್ಟು 44 ವಿಭಾಗಗಳಿಗೆ ಪ್ರಶಸ್ತಿಯನ್ನು ನೀಡಲಾಯಿತು. ಕೆಲವರು ಎರಡನೇ ಬಾರಿ ಪ್ರಶಸ್ತಿ ಸ್ವೀಕರಿಸಿದರೆ ಮತ್ತೆ ಕೆಲವರು ಚೊಚ್ಚಲ ಪ್ರಶಸ್ತಿಯನ್ನು ಪಡೆದ ಸಂಭ್ರಮದಲ್ಲಿದ್ದರು.

ಸೂಪರ್ ಡ್ಯಾನ್ಸ್ ಧಮಾಕಾ ಕಾರ್ಯಕ್ರಮದಲ್ಲಿ ಮೇಘನಾ ರಾಜ್, ಮೇಘನಾ ಗಾಂವ್ಕರ್, ಕಿಸ್ ಖ್ಯಾತಿಯ ವಿರಾಟ್, ಶ್ರೀಲೀಲಾ ಸೇರಿದಂತೆ ಚಿತ್ರರಂಗದ ಹಲವಾರು ಕಲಾವಿದರು ಬೊಂಬಾಟ್ ಡ್ಯಾನ್ಸ್ ಕಾರ್ಯಕ್ರಮ ನೀಡಿದರು.

ಜೀ ಕುಟುಂಬದ ತಾರೆಯರ ಮಿಂಚು ಜೀ ಕುಟುಂಬ ಅವಾರ್ಡ್ಸ್‌ನಲ್ಲಿ ಜೀ ಕನ್ನಡದ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳ ತಾರಾಮಣಿಗಳು ತಮ್ಮ ಅದ್ಭುತ ನೃತ್ಯಪ್ರದರ್ಶನದ ಮೂಲಕ ಕಾರ್ಯಕ್ರಮಕ್ಕೆ ರಂಗು ತುಂಬಿದರು.

ಅಕ್ಟೋಬರ್ 19 ಮತ್ತು 20ರಂದು ಶನಿವಾರ ಮತ್ತು ಭಾನುವಾರ ಸಂಜೆ 7ಗಂಟೆಯಿಂದ ಜೀ ಕುಟುಂಬ ಅವಾರ್ಡ್ಸ್‌ 2019 ಕಾರ್ಯಕ್ರಮ ಪ್ರಸಾರವಾಗಲಿದೆ.

v

ಪ್ರತಿಕ್ರಿಯಿಸಿ (+)