ಹತ್ತು ವರ್ಷಗಳ ಹಿಂದೆ ಝೀ ಟೀವಿಯ `ಸಾರೆಗಮ~ ಸ್ಪರ್ಧೆಯಲ್ಲಿಭಾಗವಹಿಸಿದ್ದ ಗಾಯಕ ವಿಜಯ್ ಪ್ರಕಾಶ್ಗೆ ಇಂದು `ಸರಿಗಮಪ ಲಿಟ್ಲ್ ಚಾಂಪ್ಸ್~ನ ತೀರ್ಪುಗಾರನಾದ ಸಂತಸ. ಅವರಿಗೆ ಸಾಥ್ ನೀಡುತ್ತಿರುವವರು ಮಕ್ಕಳ ಮನಸ್ಸನ್ನು ನೋಯಿಸದಂತೆ ತೀರ್ಪು ನೀಡಬೇಕೆಂಬ ಕಾಳಜಿ ಇರುವ ಗಾಯಕಿ ಸೌಮ್ಯಾ ರಾವ್.
ಇದೀಗ ಮತ್ತೆ ಝೀ ಕನ್ನಡ ವಾಹಿನಿ `ಸರಿಗಮಪ ಲಿಟ್ಲ್ ಚಾಂಪ್ಸ್~ ರಿಯಾಲಿಟಿ ಶೋ ಆರಂಭಿಸುತ್ತಿದೆ. ಇದು `ಸರಿಗಮಪ~ದ ಒಂಬತ್ತನೇ ಸರಣಿ.

ಹಿನ್ನೆಲೆ ಗಾಯಕರಾದ ವಿಜಯ್ ಪ್ರಕಾಶ್ ಮತ್ತು ಸೌಮ್ಯಾ ರಾವ್ ಈ ಬಾರಿಯ ತೀರ್ಪುಗಾರರು. ಕಾರ್ಯಕ್ರಮದ ವಿವರ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ವಿಜಯ್ ಪ್ರಕಾಶ್ ತಾವು ಸಾರೆಗಮ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನೆನಪನ್ನು ಹಂಚಿಕೊಂಡರು.

`ನಾನೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದರಿಂದ ಸೋಲು-ಗೆಲುವಿನ ಅನುಭವ ಸಿಕ್ಕಿತು. ಒಬ್ಬ ಕಲಾವಿದನಿಗೆ ಅವಕಾಶ ದೊರೆಯುವುದು ಬಹಳ ಮುಖ್ಯ. ಅಂಥ ವೇದಿಕೆಯನ್ನು ಝೀ ವಾಹಿನಿ ಮಾಡಿಕೊಡುತ್ತಿದೆ. ಈ ಹಿಂದೆ ಗೃಹಿಣಿಯರಿಗಾಗಿ ನಡೆದ `ಸರಿಗಮಪ~ ಕಾರ್ಯಕ್ರಮದ ನಿರೂಪಕನಾಗಿದ್ದೆ. ಇದೀಗ ಮಕ್ಕಳ ಶೋಗೆ ತೀರ್ಪುಗಾರನಾಗುವ ಅವಕಾಶ ಸಿಕ್ಕಿದೆ. ನಾನು ಮುಂಬೈನಲ್ಲಿ ನೆಲೆಸಿದ್ದರೂ, ಮಕ್ಕಳೊಂದಿಗಿನ ಒಡನಾಟ ತಪ್ಪಿಸಿಕೊಳ್ಳಬಾರದೆಂದು ಕಾರ್ಯಕ್ರಮಕ್ಕೆ ಒಪ್ಪಿಕೊಂಡೆ. ಆಯ್ಕೆಯಾಗಿರುವ ಎಲ್ಲಾ ಸ್ಪರ್ಧಿಗಳು ಅದ್ಭುತವಾಗಿ ಹಾಡುತ್ತಾರೆ. ಕಾರ್ಯಕ್ರಮದ ಬಗ್ಗೆ ಅಪಾರ ಭರವಸೆ ಇದೆ~ ಎಂದರು.

ಸೌಮ್ಯಾ ರಾವ್ ಅವರಿಗೆ `ಸರಿಗಮಪ~ ಶೋಗೆ ಅದರದೇ ಆದ ಒಂದು ಘನತೆ ಇದೆ ಎನಿಸಿದೆ. ಅದರೊಂದಿಗೆ ವಿಜಯ್ ಪ್ರಕಾಶ್ ಅವರು ಸಹ ತೀರ್ಪುಗಾರರಾಗಿರುವುದು ಸೌಮ್ಯಾ ತೀರ್ಪುಗಾರರಾಗಿ ಒಪ್ಪಿಕೊಳ್ಳಲು ಕಾರಣ. `ಮಕ್ಕಳ ಶೋಗಳಲ್ಲಿ ತೀರ್ಪು ಕೊಡುವುದು ತುಂಬಾ ಕಷ್ಟ. ನಾನು ಮತ್ತು ವಿಜಯ್ ಸಮಾನ ಮನಸ್ಕರು. ಅದರಿಂದ ಅವರೊಂದಿಗೆ ಕೆಲಸ ಮಾಡಲು ಸಮ್ಮತಿಸಿದೆ. ಇಲ್ಲಿ ಎಲಿಮಿನೇಟ್ ಮಾಡುವಂಥ ಮಕ್ಕಳೇ ಇಲ್ಲ. ಅದರಿಂದ ಇಕ್ಕಟ್ಟಿನಲ್ಲಿ ಸಿಲುಕಿದಂತಾಗಿದೆ. ಒಟ್ಟಾರೆ ನಾನು ಕಾರ್ಯಕ್ರಮವನ್ನು ಎಂಜಾಯ್ ಮಾಡುತ್ತಿರುವೆ~ ಎಂದರು.

`8 ರಿಂದ 14 ವರ್ಷ ವಯಸ್ಸಿನ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಈಗಾಗಲೇ ಆರು ನಗರಗಳಲ್ಲಿ ಆಡಿಶನ್ ನಡೆಸಿ 17 ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ. ಇದೀಗ ಅವರ ನಡುವೆ 32 ಕಂತುಗಳಲ್ಲಿ ಸ್ಪರ್ಧೆ ನಡೆದು ಅಂತಿಮ ವಿಜೇತರ ಆಯ್ಕೆ ನಡೆಯಲಿದೆ~ ಎಂದು ತಂಡ ವಿವರಣೆ ನೀಡಿತು.

ಮಕ್ಕಳ ಕೊರತೆಗಳನ್ನು ಹೈಲೈಟ್ ಮಾಡದೆ, ಸೂಕ್ಷ್ಮವಾಗಿ ಅವರನ್ನು ತ್ದ್ದಿದಿತೀಡುವ ಹಿನ್ನೆಲೆ ಗಾಯಕರನ್ನು ತೀರ್ಪುಗಾರರಾಗಿ ಆಯ್ಕೆ ಮಾಡಿರುವುದಾಗಿ ಝೀ ವಾಹಿನಿಯ ಪರಮೇಶ್ವರ ಗುಂಡ್ಕಲ್ ಹೇಳಿದರು. ಅವರೊಂದಿಗೆ ಝೀ ವಾಹಿನಿಯ ಬಾಲು, ಕಾರ್ಯಕ್ರಮದ ನಿರ್ದೇಶಕ ಸಂಜೀವ್ ಹಾಜರಿದ್ದರು. ಜು.14ರಿಂದ `ಸರಿಗಮಪ~ದ ಒಂಬತ್ತನೇ ಸರಣಿ ಆರಂಭವಾಗುತ್ತಿದೆ. ಪ್ರತೀ ಶನಿವಾರ ಮತ್ತು ಭಾನುವಾರ ಪ್ರಸಾರ ಕಾಣುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.