ಭಾನುವಾರ, ಸೆಪ್ಟೆಂಬರ್ 20, 2020
23 °C

‘ಪತಿ ನಿರ್ಮಾಣದ ಸಿನಿಮಾದಲ್ಲಿ ನಟನೆ ಮಾಡಲ್ಲ’ವಿದ್ಯಾಬಾಲನ್‌ ಹಾಸ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಪತಿ ಸಿದ್ಧಾರ್ಥ್‌ ರಾಯ್‌ ಕಪೂರ್‌ ಜೊತೆ ಹಣದ ವಿಚಾರದಲ್ಲಿ ಮಾತುಕತೆ, ಚರ್ಚೆ ನಡೆಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಾನು /ಅವರ ಸಿನಿಮಾಗಳಲ್ಲಿ ಕೆಲಸ ಮಾಡಿಲ್ಲ’ ಎಂದು ನಟಿ ವಿದ್ಯಾ ಬಾಲನ್‌ ಹಾಸ್ಯ ಚಟಾಕಿ ಹಾರಿಸಿದ್ದಾರೆ. 

ಬಾಲಿವುಡ್‌ನಲ್ಲಿ ಅನೇಕ ದಂಪತಿಗಳು ಒಂದೇ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ನಟಿ ವಿದ್ಯಾ ಬಾಲನ್‌ ಅವರ ಪತಿ ಸಿದ್ಧಾರ್ಥ್‌ ರಾಯ್‌ ಕಪೂರ್‌ ಸಿನಿಮಾ ನಿರ್ಮಾಪಕ. ಆದರೆ ಅವರಿಬ್ಬರೂ ತಮ್ಮ ವೃತ್ತಿ ಹಾಗೂ ವೈಯಕ್ತಿಕ ಜೀವನವನ್ನು ದೂರವೇ ಇಟ್ಟಿದ್ದಾರೆ. 

ಈಚೆಗೆ ಸಂದರ್ಶನವೊಂದರಲ್ಲಿ ಪತಿ ಸಿದ್ದಾರ್ಥ್‌ ರಾಯ್‌ ಕಪೂರ್‌ ಸಿನಿಮಾದಲ್ಲಿ ತಾನು ನಟಿಸಿಲ್ಲವೇಕೆ ಎಂಬ ಸಂಗತಿಯನ್ನು ಅವರು ಬಹಿರಂಗ ಮಾಡಿದ್ದಾರೆ. ‘ಸಿನಿಮಾಗಳಲ್ಲಿ ನನಗೆ ನಿರ್ದೇಶಕ ಹಾಗೂ ನಿರ್ಮಾಪಕರ ಜೊತೆ ಏನಾದರೂ ಸಮಸ್ಯೆಗಳಾದಾಗ ನಾನು ಅವರ ಜೊತೆ ವಾದ ಮಾಡುತ್ತೇನೆ. ಆದರೆ ಜಗಳ ಮಾಡುವುದಿಲ್ಲ. ಕಾರಣ ವಿವರಿಸುತ್ತೇನೆ. ಆದರೆ ಸಿದ್ಧಾರ್ಥ್‌ ಜೊತೆ ಅದು ಸಾಧ್ಯವಿಲ್ಲ. ವಾದ ಮಾಡಿದರೆ ಅದು ಜಗಳಕ್ಕೆ ತಿರುಗಬಹುದು. ಬಳಿಕ ಜಗಳದಲ್ಲಿ ಕೊನೆಯಾಗುತ್ತದೆ’ ಎಂದಿದ್ದಾರೆ. 

‘ಸಂಭಾವನೆ ವಿಚಾರದಲ್ಲೂ ನಾನು ಅವರ ಜೊತೆ ಮಾತುಕತೆ ನಡೆಸಲಾಗುವುದಿಲ್ಲ. ಅವರು ಒಂದು ಮೊತ್ತ ನಿಗದಿಪಡಿಸದಾಗ, ಅದರ ಹತ್ತರಷ್ಟು ಸಂಭಾವನೆ ನಾನು ಕೇಳುತ್ತೇನೆ. ಅದಲ್ಲದೇ ನನ್ನ ಸಂಭಾವನೆ ಅಷ್ಟೇನಾ?. ನನ್ನನ್ನು ಕೀಳಾಗಿ ಕಾಣುತ್ತೀಯಾ ಎಂದು ನಾನು ಜಗಳ ಮಾಡಬಹುದು. ನಮ್ಮಿಬ್ಬರ ನಡುವೆ ಅಂತಹ ಮನಸ್ತಾಪ ಬರಲು ನಾನು ಅವಕಾಶ ನೀಡುವುದಿಲ್ಲ’ ಎಂದು ವಿದ್ಯಾ ಹೇಳಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು