ಬುಧವಾರ, ಜೂನ್ 29, 2022
24 °C

ಬನ್ನೇರುಘಟ್ಟ: ಕರುಳಿನ ತೊಂದರೆಯಿಂದ ಬಳಲುತ್ತಿದ್ದ ಕಾಡೆಮ್ಮೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದ ಸಸ್ಯಾಹಾರಿ ಸಫಾರಿಯಲ್ಲಿನ ಕಾಡೆಮ್ಮೆ ಕುಮ್ಟಾ(11) ಮೃತಪಟ್ಟಿದೆ.

ಕುಮ್ಟಾಳನ್ನು 2012ರಲ್ಲಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಿಂದ ತರಲಾಗಿತ್ತು. ಈ ಕಾಡೆಮ್ಮೆಯು ಬನ್ನೇರುಘಟ್ಟ ಉದ್ಯಾನಕ್ಕೆ ಬಂದ ನಂತರ ಎರಡು ಗಂಡು ಮತ್ತು ಎರಡು ಹೆಣ್ಣು ಮರಿಗಳಿಗೆ ಜನ್ಮ ನೀಡಿದೆ. ಜೈವಿಕ ಉದ್ಯಾನದ ಸಸ್ಯಾಹಾರಿ ಸಫಾರಿಯಲ್ಲಿ 10 ಕಾಡೆಮ್ಮೆಗಳಿದ್ದವು. ಕುಮ್ಟಾ ನಿಧನದಿಂದ ಕಾಡೆಮ್ಮೆಗಳ ಸಂಖ್ಯೆ ಇದೀಗ 9ಕ್ಕೆ ಇಳಿದಿದೆ ಎಂದು ಉದ್ಯಾನವನ ತಿಳಿಸಿದೆ.

ಈ ಕಾಡೆಮ್ಮೆ ಕರುಳಿನ ತೊಂದರೆಯಿಂದ ಬಳಲುತ್ತಿತ್ತು ಎನ್ನಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಅಂಗಾಂಗಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಉದ್ಯಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು