ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಿತ ಶಿಲೆಗಳ ಆಗರ ಗೋಬಿ ಮರುಭೂಮಿ

Last Updated 7 ಜುಲೈ 2019, 19:30 IST
ಅಕ್ಷರ ಗಾತ್ರ

ಮರುಭೂಮಿ : ಗೋಬಿ ಉದ್ದ 1,600 ಕಿ.ಮೀ.. ಗೋಬಿ ಮರುಭೂಮಿ ಮಧ್ಯ ಏಷ್ಯಾದಲ್ಲಿದೆ. ಗೋಬಿ ಎಂದರೆ ಮಂಗೋಲಿಯನ್‌ ಭಾಷೆಯಲ್ಲಿ ನೀರಿಲ್ಲದ ಪ್ರದೇಶವೆಂದೇ ಅರ್ಥ. ಚೀನಾ ಮತ್ತು ಮಂಗೋಲಿಯದ ಪ್ರದೇಶಗಳನ್ನು ಒಳಗೊಳ್ಳುತ್ತದೆ. ಮರಳಿಗಿಂತಲೂ ಬೋಳು ಶಿಲೆಗಳನ್ನೇ ಹೆಚ್ಚಾಗಿ ಕಾಣಬಹುದು. ಇದರ ಉತ್ತರಕ್ಕೆ ಅಟ್ಲಾಯ್‌ ಮತ್ತು ಹಂಗಾಯನ್‌ ಶಿಖರ ಶ್ರೇಣಿಗಳಿವೆ. ಪೂರ್ವಕ್ಕೆ ಹಿಗನ್‌, ದಕ್ಷಿಣಕ್ಕೆ ಬೇ ಶಿಖರಗಳು ಇವೆ. ಇದರ ಬಗ್ಗೆ ಇನ್ನಷ್ಟು ತಿಳಿಯೋಣ.

ಸ್ವಾರಸ್ಯಕರ ಸಂಗತಿಗಳು:

*ಈ ಮರುಭೂಮಿಯು ಸೀಮೆಸುಣ್ಣ ಮತ್ತು ಸಂಚಿತಶಿಲೆಗಳಿಂದ ಕೂಡಿದ್ದು, ಮರಳಿಗಿಂತಲೂ ಇದನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು.

*ಸಾವಿರಾರು ವರ್ಷಗಳ ಹಿಂದೆ ಮಧ್ಯ ಗೋಬಿಯಲ್ಲಿ ದೈತ್ಯಹಲ್ಲಿಗಳು (ಡೈನಾಸಾರ್ಸ್‌) ಇದ್ದಿದ್ದಕ್ಕೆ ಪುರಾವೆಗಳಿವೆ.

* ಬೇಸಿಗೆಯಲ್ಲಿ ಬಿರು ಬೇಸಿಗೆಯಿದ್ದರೆ, ಚಳಿಗಾಲದಲ್ಲಿ ವಿಪರೀತ ಚಳಿಯಿರುತ್ತದೆ. ವರ್ಷಕ್ಕೆ 55 ಮಿ.ಮೀ ಮಳೆಯಾದರೆ ಹೆಚ್ಚು. ಚಳಿ ಮತ್ತು ಬೇಸಿಗೆ ಕಾಲದಲ್ಲಿ ವಿಪರೀತ ಬಿರುಗಾಳಿ ಬೀಸುತ್ತದೆ.

* ಈ ಮರುಭೂಮಿಯಲ್ಲಿರುವ ಸರೋವರಗಳು, ಕೆರೆಗಳು ಬೇಸಿಗೆಯಲ್ಲಿ ಮಾತ್ರ ಸಣ್ಣಕ್ಕೆ ಹರಿಯುತ್ತವೆ. ನಂತರ ನಿಧಾನಕ್ಕೆ ಒಣಗಿ ಹೋಗುತ್ತವೆ.

* ಇಲ್ಲಿನ ಮರಳು ಮತ್ತು ಮಣ್ಣು ಬೂದು ಮಿಶ್ರಿತ ಕಂದುಬಣ್ಣದಲ್ಲಿದ್ದು, ಕಾರ್ಬನ್‌, ಜಿಪ್ಸಂ, ಜಲ್ಲಿಯ ಅಂಶ ಹೆಚ್ಚಿರುತ್ತದೆ. ಜಿಪ್ಸಂ ಖನಿಜ ಹೆಚ್ಚಿರುವುದರಿಂದ ಮಣ್ಣು ಈ ಸ್ವರೂಪದಲ್ಲಿದೆ.

* ವಿಶೇಷವಾದ ಸಸ್ಯ ಪ್ರಬೇಧಗಳಿದ್ದು, ಒಣಹವೆಯಲ್ಲಿ ಹುಲ್ಲುಗಾವಲು ಇದ್ದರೆ, ಕುರುಚಲು ಗಿಡಗಳು, ಪೊದೆಗಳನ್ನು ಅಲ್ಲಲ್ಲಿ ಕಾಣಬಹುದು.

* ಮಂಗೋಲಿಯನ್‌ ಈರುಳ್ಳಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಪ್ರಪಂಚದ ಹಲವೆಡೆ ಈ ಈರುಳ್ಳಿಗೆ ಉತ್ತಮ ಬೇಡಿಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT