ಪ್ರಜಾವಾಣಿ ಕಾಳಜಿಗೆ ಅಭಿನಂದನೆ

ಗುರುವಾರ , ಮೇ 23, 2019
28 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

Metro toilet-Reaction

ಪ್ರಜಾವಾಣಿ ಕಾಳಜಿಗೆ ಅಭಿನಂದನೆ

Published:
Updated:

‘ಮೆಟ್ರೊ’ಪುರವಣಿಯಲ್ಲಿ ಪ್ರಕಟವಾದ ‘ನಮ್ಮ ಮೆಟ್ರೊ’ದಲ್ಲಿ ಶೌಚಾಲಯವ ಹುಡುಕುತ್ತಾ... (ಏ.19) ಲೇಖನ ವಾಸ್ತವ ನೋಟದ ಸಕಾಲಿಕ ಲೇಖನ. ಪ್ರಜಾವಾಣಿಯ ಮಹಿಳಾ ಕಾಳಜಿಗೆ ಸಂತೋಷ ಮತ್ತು ಸಮಾಧಾನವಾಯ್ತು. ಪತ್ರಿಕೆಯ ಕಾಳಜಿಗೆ ಅಭಿನಂದನೆಗಳು.

ಲೇಖನದಲ್ಲಿನ ಹೆಣ್ಣುಮಕ್ಕಳ ಅನುಭವ ನನ್ನದೂ ಕೂಡಾ. ಅದೊಂದು ದಿನ ವಿಧಾನಸೌಧದಲ್ಲಿ ಸಭೆಯೊಂದನ್ನು ಮುಗಿಸಿ ಬರುತ್ತಿದ್ದೆ. ವಿಧಾನಸೌಧದ ಎದುರಿನ ಮೆಟ್ರೋ ಸ್ಟೇಷನ್ ನಲ್ಲಿ ಮೂತ್ರವಿಸರ್ಜನೆಗಾಗಿ ಶೌಚಾಲಯ ಹುಡುಕಿ ಹೊರಟೆ. ನಾನು ಟಿಕೆಟ್ ಪಡೆದು ಒಳ ಆವರಣ ಪ್ರವೇಶಿಸುವ ಮುನ್ನವೇ ಶೌಚಾಲಯದ ನಾಮಫಲಕಕ್ಕಾಗಿ ಹುಡುಕಾಡಿದೆ. ಕಾಣಲಿಲ್ಲ. ಒಳಗೇ ಇರಬಹುದು ಎಂದು ಟಿಕೆಟ್ ಆವರಣ ಪ್ರವೇಶಿಸಿದೆ ಅಲ್ಲಿಯೂ ಕಾಣದಾದಾಗ ಅಲ್ಲಿಯ ಸಿಬ್ಬಂದಿಗೆ ಕೇಳಿದೆ. ಈ ಕಡೆ ಇಲ್ಲ ಆಚೆ ಕಡೆ ಇದೆ ಎಂದರು. ಆ ತುದಿಯಿಂದ ಈ ತುದಿಗೆ ನಿರುಪಾಯಳಾಗಿ ಬಂದೆ. ಅಲ್ಲಿ ಕೇಳಿದರೆ ದುರಸ್ತಿಯಲ್ಲಿದೆ ಎಂದು ಉತ್ತರ ಬಂತು.

ಒತ್ತರಿಸಿದ ಸ್ಥಿತಿಯಲ್ಲಿದ್ದ ನನ್ನ ಧ್ವನಿ ಸ್ವಲ್ಪ ಗಡುಸಾಯಿತು. ಮೇಡಂ ಅಲ್ಲಿ ಸಿಬ್ಬಂದಿಯ ಶೌಚಾಲಯವಿದೆ ಅಲ್ಲಿಗೆ ಹೋಗಬಹುದು ಎಂದರು. ಆದರೆ ಅದಕ್ಕೆ ಮತ್ತೆ ಹೊರಹೋಗಬೇಕಾಗಿತ್ತು. ನನ್ನ ಧ್ವನಿ ಇನ್ನಷ್ಟು ಗಡುಸಾಯಿತು. ಆಗ ಸಿಬ್ಬಂದಿಯೊಬ್ಬರು ಬಂದು ತಮ್ಮ ನೌಕರ ಬಿಲ್ಲೆಯ ಮೂಲಕ ಒಳಗೆ ಬಿಟ್ಟರು. ಒಳಗೆ ಎಂದರೆ ಹೋಗುತ್ತಲೇ ಇದ್ದೆ. ಅದೆಷ್ಟು ದೂರ, ಜೊತೆಗೆ ಸುರಕ್ಷಿತ ಜಾಗ ಎಂದೆನಿಸದ ವಾತಾವರಣ. ಹೊರಗೆ ಬಂದವಳೇ ದೂರು ಕೊಡಲು ಸ್ಥಳ ಹುಡುಕಿದೆ. ಅದಕ್ಕೆ ಮತ್ತೆ ಅಲೆದಾಡಬೇಕಾಯಿತು. ಕೊನೆಗೂ ಮೇಲ್ವಿಚಾರಕರ ಬಳಿ ಹೋಗಿ ದೂರು ದಾಖಲಿಸಿದೆ. ನಿಖರವಾಗಿ ಎರಡೇ ದಿನದಲ್ಲಿ ಕ್ಷಮೆ ಕೇಳಿ ಶೀಘ್ರದಲ್ಲಿಯೇ ದುರಸ್ತಿ ಮಾಡುವ ಪ್ರತ್ಯುತ್ತರ ಬಂತು. ಅದೊಂದೇ ಸಮಾಧಾನದ ಸಂಗತಿ.

ಮೆಟ್ರೋ ಸ್ಟೇಷನ್‌ಗಳಲ್ಲಿ ನೀವು ಎಲ್ಲಿ ಹೋದರೂ ಸುಲಭವಾಗಿ, ಅಂಜಿಕೆಯಿಲ್ಲದೇ ನಿರಾಳವಾಗಿ ಶೌಚಾಲಯಕ್ಕೆ ಹೋಗುವ ಪರಿಸ್ಥಿತಿ ಯಾವ ನಿಲ್ದಾಣದಲ್ಲಿಯೂ ಇಲ್ಲ. ಕೆ.ಆರ್.ಪುರಂ ಗೆ ಹೋಗಿ ಮೆಟ್ಟಿಲು ಹತ್ತಿ, ಸಿಬ್ಬಂದಿಗಳಿರುವ ಹಲವು ಕೋಣೆಗಳ ಕಾರಿಡಾರ್ ದಾಟಿ ಹೋಗಬೇಕು. ಅಕಸ್ಮಾತ್ ಸಂಜೆಯ, ಮಬ್ಬುಗತ್ತಲಿನ ವೇಳೆಗಳಲ್ಲಿ ಯಾರೂ ಹಿಂಬಾಲಿಸಿ ಬಂದು ಮೇಲೆ ಬೀಳಬಹುದು.
ಸ್ಟೇಷನ್‌ಗಳಲ್ಲಿ ಸಾಕಷ್ಟು ಜಾಗವಿದ್ದು ಅಲ್ಲಿಯೇ ಸಾರ್ವಜನಿಕ ಸೌಲಭ್ಯಗಳಿಗೆ ವ್ಯವಸ್ಥೆ ಮಾಡದ ಆಡಳಿತ, ಸರಕಾರಕ್ಕೆ ಹೆಣ್ಣಿನ ಕಣ್ಣಿಲ್ಲವೆಂಬುದು ಮತ್ತೊಮ್ಮೆ ಸಾಬೀತಾಗಿದೆ.
ಹೆಣ್ಣಿನ ಕಣ್ಣಿನಲ್ಲಿ ವ್ಯವಸ್ಥೆಗಳನ್ನು ನೋಡಿ, ಎಚ್ಚರಿಸಿದ ಪ್ರಜಾವಾಣಿಗೆ ಧನ್ಯವಾದಗಳು

–ವಿಮಲಾ ಕೆ.ಎಸ್, ಬೆಂಗಳೂರು.

ಪ್ರಯಾಣಿಕ ಪರ ಕಾಳಜಿಗೆ ವಂದನೆಗಳು.

ಮೆಟ್ರೊ ಸ್ಟೇಷನ್‌ಗಳಲ್ಲಿ ದುಬಾರಿ ಬೆಲೆಬಾಳುವ ಗ್ರಾನೈಟ್ ಕಲ್ಲುಗಳಿಗೆ ಹಣ ವಿನಿಯೋಗಿಸಲಾಗುತ್ತಿದೆ. ಆದರೆ, ಶೌಚಾಲಯಗಳು ಸ್ವಚ್ಛವಾಗಿರಬೇಕು, ಅನುಕೂಲಕರವಾಗಿರಬೇಕು ಎಂದು ಯೋಚಿಸದಿರುವುದು ಆಶ್ಚರ್ಯ ಮೂಡಿಸುತ್ತದೆ. ಮೆಟ್ರೊ ಆಡಳಿತ ವರ್ಗ ಸುರಕ್ಷಿತವಾಗಿ, ಸಮಯಕ್ಕೆ ಸರಿಯಾಗಿ ಮೆಟ್ರೊ ನಡೆಸುವಷ್ಟೇ ಮುಖ್ಯವಾಗಿ ಸ್ವಚ್ಛ, ಅನುಕೂಲಕರ ಶೌಚಾಲಯಗಳ ಬಗ್ಗೆ ಚಿಂತಿಸಲು ಸಾಧ್ಯವಾದರೆ ಮಾತ್ರ ಈ ಸಮಸ್ಯೆಗೆ ಪರಿಹಾರ ಸಾಧ್ಯ.

ಅಧಿಕಾರಿಗಳು ಶೌಚಾಲಯಗಳಿಗೆ ಅನಿರೀಕ್ಷಿತ ಭೇಟಿ ನೀಡುವ ಕ್ರಮ ಪ್ರಾರಂಭಿಸಿದರೆ ಇಂತಹ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರೆಯಬಹುದು. ಪ್ರಯಾಣಿಕ ಪರ ಕಾಳಜಿ ಪ್ರಕಟಿಸಿದ ಪ್ರಜಾವಾಣಿಗೆ ವಂದನೆಗಳು.

–ಎಸ್.ಆರ್. ವಿಜಯಶಂಕರ, ಮಲ್ಲೇಶ್ವರಂ

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !