ಶನಿವಾರ, ಫೆಬ್ರವರಿ 27, 2021
23 °C

ಕುಳಿತು ಸೈಕಲ್‌ ಓಡಿಸುವುದೇ ಅಪ್‌ರೈಟ್‌ ಬೈಕ್‌ ವ್ಯಾಯಾಮ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಟ್ಟೆ ಬೊಜ್ಜು ಮತ್ತು ಬೆನ್ನು ನೋವು ಇವೆರಡು ಕುಳಿತು ಕೆಲಸ ಮಾಡುವವರು ಎದುರಿಸುವ ಪ್ರಮುಖ ಸಮಸ್ಯೆಗಳು. ಈ ಸಮಸ್ಯೆಗಳ ಪರಿಹಾರಕ್ಕೆ ಹಲವು ವ್ಯಾಯಾಮಗಳು, ಸಾಧನಗಳು ಇವೆ. ಅವುಗಳಲ್ಲಿ ಅಪ್‌ರೈಟ್‌ ಬೈಕ್‌ (Upright Bike) ಸಾಧನ ಸಹ ಒಂದಾಗಿದೆ.

ಮನೆಯಲ್ಲಿ ಈ ಸಾಧನವನ್ನು ಬಳಸಬಹುದು. ಇವುಗಳಲ್ಲಿ ಬಹುತೇಕ ಬೈಕ್‌ಗಳು ಮಡಚಿಡುವ ವ್ಯವಸ್ಥೆ ಹೊಂದಿದೆ. ಇದು ದೇಹದ ವಿವಿಧ ಸಮಸ್ಯೆಗಳಿಗೆ ‍ಪರಿಹಾರ ನೀಡುತ್ತದೆ. 

ಸುಧಾರಿತ ಜೀವನ ಮತ್ತು ಕೊಬ್ಬು ಕರಗಿಸಲು ಸಹಕಾರಿ: ಈ ಸಾಧನ ಕುಳಿತು ಸೈಕಲ್‌ ಓಡಿಸುವಂತೆಯೇ ಇದ್ದು, ಸೈಕಲ್‌ ತುಳಿಯುವಾಗ ದೇಹದ ವಿವಿಧ ಅಂಗಗಳಿಗೆ ಸಹಾಯವಾಗುತ್ತದೆಯೋ ಹಾಗೆ ಈ ಸಾಧನದಿಂದ ಅನುಕೂಲವಾಗಿದೆ. ಬೆನ್ನು ಮೂಳೆಯ ಸಧೃಡತೆಗೂ ಇದು ಸಹಾಯಕವಾಗಿದೆ.  

ಮೊಣಕಾಲು ಮತ್ತು ಸ್ನಾಯುಗಳು ಮತ್ತು ಕಾಲಿನ ಪಾದಗಳಿಗೆ ವ್ಯಾಯಾಮವಾಗುವುದರೊಂದಿಗೆ (ಸಾಧನವನ್ನು ಸರಿಯಾಗಿ ಅಳವಡಿಸಿಕೊಳ್ಳಬೇಕು) ಆರಾಮು ಸಹ ಸಿಗಲಿದೆ. ಹೃದಯನಾಳಗಳಲ್ಲಿ ರಕ್ತ ಸಂಚಾರ ಮತ್ತು ದೇಹದ ಸ್ನಾಯುಗಳಿಗೂ ಇದು ಸಹಾಯಕವಾಗಿದೆ. ಈ ಸಾಧನವನ್ನು ಬಳಸಿ ವ್ಯಾಯಾಮ ಮಾಡುವುದರಿಂದ ಹೊಟ್ಟೆಯ (ನಿರ್ದಿಷ್ಟ ಭಾಗವಲ್ಲ) ಬೊಜ್ಜನ್ನೂ ಸಹ ಕಡಿಮೆ ಮಾಡಿಕೊಳ್ಳಬಹುದಾಗಿದೆ. ಜೊತೆಗೆ ಶ್ವಾಸನಾಳ, ಜಠರ, ಹೃದಯನಾಳ ಮತ್ತು ದೇಹದ ಸ್ನಾಯುಗಳಿಗೂ ಸಹಾಯಕವಾಗಲಿದೆ.  

ಎಷ್ಟು ಸಮಯ ವ್ಯಾಯಾಮ ಮಾಡಬಹುದು? 
ಈ ‌ಹಿಂದೆ ಬೇರೆ ಯಾವುದಾದರು ವ್ಯಾಯಾಮವನ್ನು ಮಾಡಿದ ಅಭ್ಯಾಸವಿರುವವರು 30 ರಿಂದ 60 ನಿಮಿಷ ಈ ಸಾಧನವನ್ನು ಬಳಸಿ ವ್ಯಾಯಾಮ ಮಾಡಬಹುದು. ಮೊದಲ ಬಾರಿ ಬಳಸುವವರು ಇದನ್ನು ಒಂದು ವಾರ 15 ರಿಂದ 20 ನಿಮಿಷ ಬಳಸಿ, ನಂತರದಲ್ಲಿ ಮುಂದೆ ವೇಗವನ್ನು ಹೆಚ್ಚಿಸಿಕೊಳ್ಳಬಹುದು. 

ಸಾಧನವನ್ನು ಬಳಸುವ ಬಗ್ಗೆ ಎಚ್ಚರವಿರಲಿ

ಯಾವುದೇ ವ್ಯಾಯಾಮವಿರಲಿ ಅಥವಾ ಸಾಧನವಿರಲಿ ಅದರ ಅನುಕೂಲ ಪರಿಣಾಮಕಾರಿಯಾಗಬೇಕಾದರೆ, ಅದನ್ನು ಬಳಸುವ ವಿಧಾನವನ್ನು ಅಚ್ಚು ಕಟ್ಟಾಗಿ ಪಾಲಿಸುವುದು ಮುಖ್ಯ. ಈ ಸಾಧನವನ್ನು ಬಳಸುವುದಕ್ಕೂ ಕೆಲವು ನಿಯಮಗಳಿವೆ. 

1.  ಅಪ್‌ರೈಟ್‌ ಬೈಕ್‌ನ ಮೇಲೆ ಕುಳಿತುಕೊಂಡಾಗ ಮೊಣಕಾಲು ಮತ್ತು ಪಾದಗಳ ನಡುವೆ 90° ರೀತಿಯಲ್ಲಿರಲಿ. ಈ ಹಂತದಲ್ಲಿ ಪಾದಗಳು ಸಮತಟ್ಟಾಗಿರಲಿ.
2. ಸಾಧನದ ಹಿಡಿಕೆಯನ್ನು ಭುಜಕ್ಕೆ ನೇರವಾಗಿ ಹೊಂದಿಸಿಕೊಳ್ಳಿ.
3. ಸೀಟ್‌ಅನ್ನು ಮುಂದಕ್ಕೆ (ಕಾರ್‌ ಸೀಟ್‌ ಅಥವಾ ಕುರ್ಚಿಯನ್ನು ಸರಿ ಹೊಂದಿಸಿಕೊಳ್ಳುವಂತೆ) ಹೊಂದಿಸಿಕೊಂಡಿರಿ.
4. ಈ ಸಾಧನವನ್ನು ಬಳಸುವಾಗ ಮುಖ್ಯವಾಗಿ ಬೆನ್ನಿನ ಭಾಗ ನೇರವಾಗಿರಲಿ. ಬೆನ್ನು ಬಗ್ಗಿಸಿದರೆ ಬೆನ್ನಿನ ನೋವು ಸುಧಾರಣೆಯಾಗುವುದಕ್ಕಿಂತ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
5. ಪಾದಗಳು ಸಾಧನಕ್ಕೆ ಸರಿ ಹೊಂದಿಸಿಕೊಂಡ ಮೇಲೆ 25° ರಿಂದ 30° (ಅಂದಾಜು) ಅಂತರವಿರಲಿ. 

ಸುಧಾರಿತ ಸಾಧನ: ಅಪ್‌ರೈಟ್‌ ಬೈಕ್‌ಗಳಲ್ಲಿ ಅತ್ಯಂತ ಸುಧಾರಿತ ಸಾಧನಗಳಿವೆ. ಎಷ್ಟು ಸಮಯ ವ್ಯಾಯಾಮ ಮಾಡಿದ್ದೀರ? ದೇಹದಲ್ಲಿ ಎಷ್ಟು ಕೊಬ್ಬಿನಾಂಶ (ಕ್ಯಾಲೋರಿಸ್ ಬರ್ನ್‌) ಕರಗಿದೆ ಎನ್ನುವುದನ್ನೂ ಈ ಸಾಧನದ ಮೇಲ್ಭಾಗದಲ್ಲಿ ಅಳವಡಿಸಿರುವ ಎಲ್‌ಇಡಿ ಪರದೆ ತೋರಿಸುತ್ತಿರುತ್ತದೆ. ನಿಮ್ಮ ಸಾಮರ್ಥ್ಯ ಮತ್ತು ಅವಶ್ಯಕತೆಗೆ ಅನುಗುಣವಾಗಿ ಇದನ್ನು ಹೊಂದಿಸಿಕೊಳ್ಳಬಹುದು.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.