ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer| ಓಮೈಕ್ರಾನ್‌ ವಿರುದ್ಧ ಬೂಸ್ಟರ್‌ ಸಮರ್ಥವೇ? ಹೆಚ್ಚುವರಿ ಲಸಿಕೆ ಬೇಕೆ?

Last Updated 18 ಡಿಸೆಂಬರ್ 2021, 11:35 IST
ಅಕ್ಷರ ಗಾತ್ರ

ಕೊರೊನಾ ವೈರಸ್‌ನ ರೂಪಾಂತರ ತಳಿಯಾದ ಓಮೈಕ್ರಾನ್‌ಗೆ ಸಂಬಂಧಿಸಿದ ಸೋಂಕು ಪ್ರಕರಣಗಳು ಜಗತ್ತಿನಾದ್ಯಂತ ದಿನೇ ದಿನೆ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿರುವ ಮಧ್ಯೆಯೇ ಕೋವಿಡ್‌ ಲಸಿಕೆಗಳ ಬೂಸ್ಟರ್‌ ಡೋಸ್‌ಗಳ ಅಗತ್ಯತೆ ಚರ್ಚೆಯು ಮುನ್ನೆಲೆಗೆ ಬಂದಿದೆ.

ಅಮೆರಿಕ, ಜರ್ಮನಿ, ಫ್ರಾನ್ಸ್‌, ಇಸ್ರೇಲ್‌, ಥೈಲೆಂಡ್‌ ಸೇರಿದಂತೆ 36 ದೇಶಗಳು ಬೂಸ್ಟರ್‌ ಲಸಿಕೆಗಳನ್ನು ಅಧಿಕೃತವಾಗಿ ನೀಡುತ್ತಿವೆ. ಎರಡೂ ಡೋಸ್‌ ಪಡೆದವರಿಗೂ ಓಮೈಕ್ರಾನ್‌ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಭಾರತದಲ್ಲಿಯೂ ಬೂಸ್ಟರ್‌ನ ಚರ್ಚೆ ಆರಂಭವಾಗಿದೆ. ಆದರೆ, ಸರ್ಕಾರ ಅದಕ್ಕೆ ಇನ್ನೂ ಸಮ್ಮತಿ ನೀಡಿಲ್ಲ.

ಹಾಗಾದರೆ, ಬೂಸ್ಟರ್‌ ಡೋಸ್‌ ಎಂದರೇನು? ಯಾವಾಗ ನೀಡಲಾಗುತ್ತದೆ? ಅದು ಅಗತ್ಯವೇ? ಬೂಸ್ಟರ್‌ ಲಸಿಕೆಗಳು ಓಮೈಕ್ರಾನ್‌ ಹರಡುವಿಕೆಯನ್ನು ತಡೆಯಬಲ್ಲವೇ? ಈ ಬಗ್ಗೆ ವಿವರಣೆ ಇಲ್ಲಿದೆ.

ಬೂಸ್ಟರ್‌ ಡೋಸ್‌ ಅಂದರೆ ಏನು?

ಸದ್ಯ ಬಳಕೆಯಲ್ಲಿರುವ ಹೆಚ್ಚಿನ ಕೋವಿಡ್ ಲಸಿಕೆಗಳನ್ನು ಎರಡು ಡೋಸ್‌ಗಳಲ್ಲಿ ನೀಡಲಾಗುತ್ತಿದೆ. ಕೆಲವನ್ನು ಒಂದೇ ಡೋಸ್‌ನಂತೆ ನೀಡಲಾಗುತ್ತದೆ. ಮೂಲ ಡೋಸ್‌ಗಳು (ಎರಡು ಡೋಸ್‌ಗಳು) ಒದಗಿಸಿದ ರಕ್ಷಣೆಯು ಕಾಲಾನಂತರದಲ್ಲಿ ಕಡಿಮೆಯಾಗಲು ಪ್ರಾರಂಭಿಸಿದ ನಂತರ ನೀಡಲಾಗುವ ಹೆಚ್ಚುವರಿ ಲಸಿಕೆಯನ್ನೇ ಬೂಸ್ಟರ್‌ ಡೋಸ್‌ ಎಂದು ಕರೆಯಲಾಗುತ್ತದೆ. ಇದರಿಂದಾಗಿ ಜನರು ತಮ್ಮ ಪ್ರತಿರಕ್ಷೆಯ ಮಟ್ಟವನ್ನು ಹೆಚ್ಚು ಕಾಲ ಕಾಪಾಡಿಕೊಳ್ಳಬಹುದು.

ಬೂಸ್ಟರ್ ಡೋಸ್‌ಗಳು ಯಾವುವು?

ಸದ್ಯ ಬಳಕೆಯಲ್ಲಿರುವ ಲಸಿಕೆಗಳ ಪೈಕಿ ಒಂದು ಲಸಿಕೆಯನ್ನು ಹೊರತುಪಡಿಸಿ, ಇನ್ನುಳಿದ ಎಲ್ಲಾ ಅನುಮೋದಿತ ಕೋವಿಡ್‌ ಲಸಿಕೆಗಳನ್ನು ಕೆಲವು ದಿನಗಳ ಅಂತರದಲ್ಲಿ ಎರಡು ಡೋಸ್‌ಗಳಾಗಿ ನೀಡಲಾಗುತ್ತಿದೆ.

ಜಾನ್ಸನ್ ಮತ್ತು ಜಾನ್ಸನ್‌ ಮಾತ್ರ ಲಭ್ಯವಿರುವ ಒಂದೇ ಡೋಸ್‌ನ ಲಸಿಕೆ.

ಸಂಪೂರ್ಣ ಡೋಸ್‌ ನಂತರವೂ ಹೆಚ್ಚುವರಿಯಾಗಿ ನೀಡುವ ಡೋಸ್‌ ಅನ್ನು ಬೂಸ್ಟರ್ ಡೋಸ್ ಎನ್ನಲಾಗುತ್ತದೆ.


ಏಕೆ ಬೇಕು ಬೂಸ್ಟರ್ ಡೋಸ್‌ಗಳು?

ಲಸಿಕೆಗಳಿಂದ ಸಿಗುವ ರೋಗನಿರೋಧಕ ಶಕ್ತಿ ಶಾಶ್ವತವಾದುದ್ದೇನಲ್ಲ. ಕೆಲ ದಿನಗಳ ನಂತರ ಆ ಪ್ರತಿರೋಧಕ ಶಕ್ತಿ ಅಳಿದು ಹೋಗುತ್ತದೆ. ಅಲ್ಲದೆ, ವ್ಯಕ್ತಿ ನಿರ್ದಿಷ್ಟ ಸೋಂಕಿಗೆ ಒಳಗಾಗುವ ಸಾಧ್ಯತೆಗಳು ಇರುತ್ತವೆ.

ಸದ್ಯ ಕೋವಿಡ್‌ ಲಸಿಕೆಗಳಿಂದ ಉತ್ಪತ್ತಿಯಾಗುವ ರೋಗನಿರೋಧಕ ಶಕ್ತಿ ಎಷ್ಟು ಸಮಯದವರೆಗೆ ಇರುತ್ತದೆ ಎಂಬುದು ಸ್ಪಷ್ಟವಾಗಿಲ್ಲ!

ಬೂಸ್ಟರ್ ಡೋಸ್‌ ಸಹಾಯದಿಂದ ರೋಗನಿರೋಧಕ ಶಕ್ತಿಯನ್ನು ದೀರ್ಘಕಾಲದವರೆಗೆ ವಿಸ್ತರಿಸಬಹುದು

ಓಮಿಕ್ರಾನ್ ವಿರುದ್ಧ ಬೂಸ್ಟರ್‌ ಲಸಿಕೆ ಉಪಯುಕ್ತವೇ?

ಲಸಿಕೆ ಹಾಕಿಸಿಕೊಂಡಿದ್ದರೂ, ಹಲವರು ಓಮಿಕ್ರಾನ್ ಸೋಂಕಿಗೆ ಒಳಗಾಗಿರುವ ಪ್ರಕರಣಗಳು ಜಗತ್ತಿನಾದ್ಯಂತ ವರದಿಯಾಗಿವೆ. ಲಸಿಕೆಗಳಿಂದ ಉತ್ಪತ್ತಿಯಾಗುವ ಪ್ರತಿರಕ್ಷೆಯನ್ನು ತಪ್ಪಿಸುವ ಲಕ್ಷಣಗಳನ್ನು ಓಮೈಕ್ರಾನ್‌ ತೋರಿದೆ.

ಬೂಸ್ಟರ್ ಡೋಸ್‌ಗಳು ಓಮೈಕ್ರಾನ್ ರೂಪಾಂತರದ ವಿರುದ್ಧ ರಕ್ಷಣೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತವೆ ಎಂದು ಹಲವಾರು ಅಧ್ಯಯನಗಳು ಸಾಬೀತು ಮಾಡಿವೆ.


ಬೂಸ್ಟರ್ ಡೋಸ್‌ಗಳು ಹೇಗೆ ಉತ್ತಮ ರಕ್ಷಣೆ ನೀಡಬಲ್ಲವು?

ರೋಗನಿರೋಧಕ ಶಕ್ತಿ ಎಂಬುದು ಜ್ಞಾಪಕಶಕ್ತಿಯಂತೆ ಕೆಲಸ ಮಾಡುತ್ತದೆ. ಪರಿಣಾಮಕಾರಿತ್ವ ಎಂಬುದು ಸಮಯ ಕಳೆದಂತೆ ಕಡಿಮೆಯಾಗುತ್ತಾ ಹೋಗುತ್ತದೆ. ಆದರೆ, ಸ್ಮರಣೆ ಶಕ್ತಿ ಕಡಿಮೆಯಾಗದು.

ಬೂಸ್ಟರ್ ಡೋಸ್‌ಗಳು ಪ್ರತಿರಕ್ಷೆಯ ಪರಿಣಾಮಕಾರಿತ್ವವನ್ನು ವಿಸ್ತರಿಸುತ್ತವೆ ಜೊತೆಗೆ ಗುಣಮಟ್ಟವನ್ನು ಸುಧಾರಿಸುತ್ತವೆ.

ಆದ್ದರಿಂದ, ಬೂಸ್ಟರ್ ಡೋಸ್ ನಂತರದ ರೋಗನಿರೋಧಕ ಶಕ್ತಿಯು ಎರಡು ಡೋಸ್‌ಗಳ ನಂತರದ ರೋಗನಿರೋಧಕ ಶಕ್ತಿಗಿಂತಲೂ ಉತ್ತಮವಾದದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT