ಕೃತಕ ಬುದ್ಧಿಮತ್ತೆಯ ನೆರವಿನಿಂದ ಸೃಷ್ಟಿಸಲಾದ ವಿಷಯಗಳಿಗೆ (ಕಂಟೆಂಟ್) ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಾಹಿತಿ ತಂತ್ರಜ್ಞಾನ ಕಾಯ್ದೆಯ (2021) ಅಡಿಯಲ್ಲಿ ಬರುವ ನಿಯಮಗಳಿಗೆ ತಿದ್ದುಪಡಿ ಮಾಡಿ, ಹೊಸ ನಿಯಮಗಳನ್ನು ರೂಪಿಸಿದೆ. ಇದೇ 20ರಿಂದ ಜಾರಿಗೆ ಬರಲಿದೆ. ವಿಷಯದ ವರ್ಗೀಕರಣವು ಕಡ್ಡಾಯವಾಗಿದ್ದು, ಆಕ್ಷೇಪಾರ್ಹ ವಿಡಿಯೊ, ಆಡಿಯೊ, ಗ್ರಾಫಿಕ್ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಲು ಇದ್ದ ಸಮಯದ ಮಿತಿಯನ್ನು ಕಡಿತಗೊಳಿಸಲಾಗಿದೆ. ಎಐ ದುರ್ಬಳಕೆಯನ್ನು ತಡೆಯಲು ಹೊಸ ನಿಯಮಗಳನ್ನು ರೂಪಿಸಿದ್ದಾಗಿ ಕೇಂದ್ರ ಸರ್ಕಾರ ಹೇಳಿದೆ. ಆದರೆ, ಇದು ಆನ್‌ಲೈನ್ ಸೆನ್ಸಾರ್‌ಶಿಪ್‌ನ ಕ್ರಮವಾಗಿದೆ ಎಂಬ ಆಕ್ಷೇಪವೂ ವ್ಯಕ್ತವಾಗಿದೆ