ಬುಧವಾರ, 13 ಆಗಸ್ಟ್ 2025
×
ADVERTISEMENT
ಆಳ–ಅಗಲ | ಭಾರತದ ಪೌರತ್ವ: ಕಾಯ್ದೆ ಹೇಳುವುದೇನು?
ಆಳ–ಅಗಲ | ಭಾರತದ ಪೌರತ್ವ: ಕಾಯ್ದೆ ಹೇಳುವುದೇನು?
ಫಾಲೋ ಮಾಡಿ
Published 12 ಆಗಸ್ಟ್ 2025, 23:30 IST
Last Updated 12 ಆಗಸ್ಟ್ 2025, 23:30 IST
Comments
ಆಧಾರ್, ಪಾನ್ ಅಥವಾ ಮತದಾರರ ಗುರುತಿನ ಚೀಟಿಗಳನ್ನು ಹೊಂದಿದ್ದರೆ ದೇಶದ ಪೌರತ್ವ ಪಡೆದಂತೆ ಅಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಇದು ದೇಶದ ಪೌರತ್ವವನ್ನು ನಿರೂಪಿಸುವ ವಿಧಾನ ಮತ್ತು ದಾಖಲೆಗಳ ಬಗ್ಗೆ ನ್ಯಾಯಾಲಯದ ಮಹತ್ವದ ಹೇಳಿಕೆಯಾಗಿದೆ. ಭಾರತದ ಪೌರರು ಅನ್ನಿಸಿಕೊಳ್ಳಲು ಯಾವ ಅರ್ಹತೆ ಹೊಂದಿರಬೇಕು ಮತ್ತು ಯಾವ ಮಾನದಂಡಗಳನ್ನು ಪೂರೈಸಬೇಕು ಎನ್ನುವುದನ್ನು ಪೌರತ್ವ ಕಾಯ್ದೆ–1955ರಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಕಾಲದಿಂದ ಕಾಲಕ್ಕೆ ಅದಕ್ಕೆ ಹಲವು ತಿದ್ದುಪಡಿಗಳನ್ನು ತರಲಾಗಿದ್ದು, ಕೆಲವು ತಿದ್ದುಪಡಿಗಳು ಕೋರ್ಟ್‌ ಮೆಟ್ಟಿಲನ್ನೂ ಏರಿವೆ. ಕೆಲವು ತಿದ್ದುಪಡಿಗಳಿಗೆ ವಿರೋಧವೂ ವ್ಯಕ್ತವಾಗಿದೆ. ಆದರೆ, ಪೌರತ್ವ ಕಾಯ್ದೆ–1955ರ ಮೂಲ ಅಂಶಗಳು ಹಾಗೆಯೇ ಉಳಿದಿವೆ
ಸಂವಿಧಾನದಲ್ಲಿ...
ಭಾರತದ ಸಂವಿಧಾನದ ಎರಡನೇ ಭಾಗವು ಪೌರತ್ವದ ಕುರಿತಾಗಿದ್ದು, 5ರಿಂದ 11ರವರೆಗಿನ ವಿಧಿಗಳು ಈ ಬಗ್ಗೆ ವಿವರಿಸುತ್ತವೆ. ದೇಶದ ಸಂವಿಧಾನವು ಒಂದೇ ಪೌರತ್ವವನ್ನು ಪ್ರತಿಪಾದಿಸುತ್ತದೆ. ಅದರ ಪ್ರಕಾರ, ಯಾವುದೇ ವ್ಯಕ್ತಿ ಸಂವಿಧಾನ ಜಾರಿಯಾದ (1950ರ ಜನವರಿ 26) ಸಂದರ್ಭದಲ್ಲಿ ಮತ್ತು ನಂತರದಲ್ಲಿ ಭಾರತದಲ್ಲಿ ಜನಿಸಿರಬೇಕು. ಇಲ್ಲವೇ ಅವರ ತಂದೆ ತಾಯಿಯಲ್ಲಿ ಒಬ್ಬರು ಭಾರತದಲ್ಲಿ ಜನಿಸಿರಬೇಕು ಅಥವಾ ಕನಿಷ್ಠ ಐದು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಸಮಯದಿಂದ ಭಾರತದ ನಿವಾಸಿಯಾಗಿದ್ದರೆ, ಅಂಥವರು ದೇಶದ ಪೌರರಾಗುತ್ತಾರೆ.
ಪಾಸ್‌ಪೋರ್ಟ್‌, ಜನನ ಪ್ರಮಾಣಪತ್ರ ದಾಖಲೆ
ಬಾಂಬೆ ಹೈಕೋರ್ಟ್‌ ತನ್ನ ಆದೇಶದಲ್ಲಿ ಪಾನ್‌ ಕಾರ್ಡ್‌ ಅಥವಾ ಆಧಾರ್‌ ಕಾರ್ಡ್‌ ಅಥವಾ ಮತದಾರರ ಗುರುತಿನ ಚೀಟಿಯು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಬೇಕಾದ ದಾಖಲೆಗಳಷ್ಟೆ ಎಂದು ಹೇಳಿದೆ. ಇದಕ್ಕೆ ಪೂರಕವೆಂಬಂತೆ, 1955ರ ಪೌರತ್ವ ಕಾಯ್ದೆ, 2009ರಲ್ಲಿ ಸರ್ಕಾರ ರೂಪಿಸಿರುವ ಪೌರತ್ವದ ನಿಯಮಾವಳಿಗಳಲ್ಲಿ ಎಲ್ಲೂ ಈ ದಾಖಲೆಗಳ ಪ್ರಸ್ತಾಪ ಬರುವುದಿಲ್ಲ. ಭಾರತದ ಪಾಸ್‌ಪೋರ್ಟ್‌ ಅಥವಾ ಜನನ ಪ್ರಮಾಣಪತ್ರಗಳನ್ನಷ್ಟೇ ದಾಖಲೆಗಳನ್ನಾಗಿ ಪರಿಗಣಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT