ನೇಪಾಳದ ತರುವಾಯ ಫ್ರಾನ್ಸ್‌ನಲ್ಲೂ ರಾಜಕೀಯ ಸ್ಥಿತ್ಯಂತರ ನಡೆದಿದೆ. ಫ್ರಾನ್ಸ್‌ನ ಪ್ರಧಾನಿಯಾಗಿದ್ದ ಫ್ರಾಂಕೋಯಿಸ್ ಬೈರೂ ಅವರ ಅಧಿಕಾರಾವಧಿ ಒಂಬತ್ತು ತಿಂಗಳಿಗೇ ಕೊನೆಗೊಂಡಿದೆ. ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರನ್ ಅವರು ತಮ್ಮ ಆಪ್ತ ಸೆಬಾಸ್ಟಿಯನ್ ಲೆಕೋರ್ನು ಅವರನ್ನು ಪ್ರಧಾನಿಯನ್ನಾಗಿ ಮಾಡಿದ್ದಾರೆ. ಅವರು ಅಧ್ಯಕ್ಷರಾದ ಎರಡು ವರ್ಷಗಳಲ್ಲಿ ಐದನೇ ಪ್ರಧಾನಿ ಅಧಿಕಾರಕ್ಕೆ ಬಂದಿದ್ದು, ಯಾರೇ ಪ್ರಧಾನಿಯಾದರೂ ಆಡಳಿತ ಸುಸೂತ್ರ ಅಲ್ಲ ಎನ್ನುವಂತಾಗಿದೆ. ಜನ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು, ಯಾವುದೇ ಕ್ಷಣದಲ್ಲಿ ಅವು ವಿಕೋಪಕ್ಕೆ ಹೋಗಬಹುದಾದ ಸಾಧ್ಯತೆ ಇದೆ. ಫ್ರಾನ್ಸ್, ರಾಜಕೀಯ ಅಸ್ಥಿರತೆ ಮತ್ತು ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿದೆ