ಬೆಂಗಳೂರಿನ ಪ್ರತಿ ಠಾಣೆಯಲ್ಲಿ ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯ ಸಂಖ್ಯೆ 15ಕ್ಕಿಂತ ಕಡಿಮೆಯಿದೆ. ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಬೇಕು. ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಕೆಲವು ಕೃತ್ಯಗಳನ್ನು ತಡೆಯುವುದು ಪೊಲೀಸರಿಗೂ ಕಷ್ಟ. ಆದರೆ, ಆರೋಪಿಗಳನ್ನು ಬಂಧಿಸಿದ ಮೇಲೆ ಅವರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಪ್ರಬಲ ಸಾಕ್ಷ್ಯಾಧಾರ ಕಲೆ ಹಾಕಿ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಬೇಕು.
-ಎಸ್.ಕೆ.ಉಮೇಶ್, ನಿವೃತ್ತ ಪೊಲೀಸ್ ಅಧಿಕಾರಿ
ಎಸ್.ಕೆ.ಉಮೇಶ್ಬೆಂಗಳೂರಿನಲ್ಲಿರುವ ವಲಸೆ ಕಾರ್ಮಿಕರು ಅಪರಾಧ ಕೃತ್ಯಗಳಲ್ಲಿ ಭಾಗಿ ಆಗುತ್ತಿದ್ದಾರೆ ಎಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ. ಕಾರ್ಮಿಕ ಇಲಾಖೆಯ ಜತೆಗೆ ಶೀಘ್ರದಲ್ಲೇ ಸಭೆ ನಡೆಸಲಾಗುವುದು
-ಜಿ.ಪರಮೇಶ್ವರ, ಗೃಹ ಸಚಿವ
112ಕ್ಕೆ ಕರೆ ಮಾಡಿ ; ಮಹಿಳೆಯರ ತುರ್ತು ಸ್ಪಂದನೆಗಾಗಿ ‘ಸೇಫ್ ಸಿಟಿ’ ಯೋಜನೆ ಅಡಿ ಸುರಕ್ಷತಾ ಕೇಂದ್ರ ಸ್ಥಾಪಿಸಲಾಗಿದೆ. 250 ಹೊಯ್ಸಳ ವಾಹನಗಳು 24X7 ತಾಸು ಗಸ್ತು ತಿರುಗುತ್ತಿವೆ. ಅಪಾಯಕ್ಕೆ ಸಿಲುಕಿದವರು ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು. ತಕ್ಷಣವೇ ಸಿಬ್ಬಂದಿ ಸ್ಪಂದಿಸಲಿದ್ದಾರೆ