ಶತಮಾನಗಳಿಂದ ಸಹಬಾಳ್ವೆಯ ಪ್ರತೀಕವಾಗಿದ್ದ ತಮಿಳುನಾಡಿನ ತಿರುಪರನ್‌ಕುಂದ್ರಂ ಈಗ ವಿವಾದದ ಕೇಂದ್ರಬಿಂದುವಾಗಿದೆ. ಜೈನ, ಬೌದ್ಧ, ಮುಸ್ಲಿಂ ಮತ್ತು ಹಿಂದೂಗಳ ಶ್ರದ್ಧಾಕೇಂದ್ರವಾಗಿದ್ದ ಈ ಸ್ಥಳವು ಈಗ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದೆ. ಬೆಟ್ಟಕ್ಕೆ ಮರುನಾಮಕರಣ ಮಾಡುವುದಕ್ಕೆ ಮತ್ತು ಕಾರ್ತಿಕ ದೀಪ ಹಚ್ಚುವುದಕ್ಕೆ ಸಂಬಂಧಿಸಿದ ವಿವಾದದಿಂದ ನೂರಾರು ವರ್ಷಗಳ ಸೌಹಾರ್ದಕ್ಕೆ ಭಂಗ ಉಂಟಾಗುವ ಆತಂಕ ಎದುರಾಗಿದೆ. ಒಂದು ಬೆಟ್ಟ, ಅದರ ಬುಡದಲ್ಲಿರುವ ಮುರುಗನ ದೇವಾಲಯ ಮತ್ತು ಬೆಟ್ಟದ ಮೇಲಿರುವ ದರ್ಗಾಗೆ ಸಂಬಂಧಿಸಿದ ವಿಚಾರವು ರಾಜಕೀಯ ಪ್ರವೇಶದಿಂದ ದೊಡ್ಡ ವಿವಾದವೆಂಬಂತೆ ಬಿಂಬಿತವಾಗುತ್ತಿದೆ
ಬೆಟ್ಟದ ದಾರಿ ಮಧ್ಯೆಯಲ್ಲಿರುವ ಗಣೇಶ ದೇವಾಲಯದ ಬಳಿ ಇರುವ ದೀಪ ಮಂಟಪದಲ್ಲಿ ಕಾರ್ತಿಕ ಉತ್ಸವದ ಸಮಯದಲ್ಲಿ ದೀಪ ಬೆಳಗಿಸುವ ಸಂಪ್ರದಾಯ ಚಾಲ್ತಿಯಲ್ಲಿದೆ –ಪಿಟಿಐ ಸಂಗ್ರಹ ಚಿತ್ರ