ಮತದಾನ ಜಾಗೃತಿಗೆ ಅನುದಾನವಿಲ್ಲ
ಭಾರತದಲ್ಲಿ ಮತದಾರರ ಜಾಗೃತಿ ಸಂಬಂಧಿ ಕಾರ್ಯಕ್ರಮಕ್ಕೆ 2021ರಿಂದ 2024ರ ಅವಧಿಯಲ್ಲಿ ಯುಎಸ್‌ಏಡ್ ಯಾವುದೇ ಸಹಾಯಾನುದಾನ ಒದಗಿಸಿಲ್ಲ ಎಂದು ಆ ಇಲಾಖೆಯ ದಾಖಲೆಗಳು ಮತ್ತು ದತ್ತಾಂಶಗಳು ಹೇಳುತ್ತವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿರುವಂತೆ 2008ರಲ್ಲಾಗಲೀ, 2022ರಲ್ಲಾಗಲೀ ಮತದಾರರ ಜಾಗೃತಿಗೆ ಯುಎಸ್‌ಏಡ್‌ನಿಂದ ಭಾರತಕ್ಕೆ ಯಾವುದೇ ನೆರವು ಸಿಕ್ಕಿಲ್ಲ. ಬೇರೆ ದೇಶಗಳಲ್ಲಿ ಮತದಾರರ ಜಾಗೃತಿಗೆ ಯುಎಸ್‌ಏಡ್ ಸಹಾಯಾನುದಾನ ನೀಡುತ್ತದೆಯಾದರೂ ಭಾರತದಲ್ಲಿ ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಅಭಿವೃದ್ಧಿ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿನ ಕಾರ್ಯಕ್ರಮಗಳಿಗಷ್ಟೇ ನೆರವು ನೀಡುತ್ತದೆ. ಟಿಬೆಟ್‌ನ ಬೌದ್ಧ ನಿರಾಶ್ರಿತರ ಪುನರ್ವಸತಿಗೆ ಯುಎಸ್‌ಏಡ್ 70ರ ದಶಕದಿಂದಲೂ ನೆರವು ನೀಡುತ್ತಾ ಬಂದಿದೆ. ಅಮೆರಿಕದ ವಿದೇಶಾಂಗ ಸಚಿವಾಲಯ ಕೈಗೊಳ್ಳುವ ಹಲವು ಕಾರ್ಯಕ್ರಮಗಳನ್ನು ಯುಎಸ್‌ಏಡ್ ಇಲಾಖೆಯೇ ಭಾರತದಲ್ಲಿ ನೇರವಾಗಿ ಅನುಷ್ಠಾನಕ್ಕೆ ತರುತ್ತದೆ. ಅದು ಅಮೆರಿಕ ಮತ್ತು ಭಾರತ ಸರ್ಕಾರದ ನಡುವಣ ಪಾಲುದಾರಿಕೆಯ ಕಾರ್ಯಕ್ರಮಗಳಾಗಿವೆ.