ದೆಹಲಿ ಫಲಿತಾಂಶ | 55 ಕ್ಷೇತ್ರಗಳಲ್ಲಿ ಆಪ್, 7 ರಲ್ಲಿ ಬಿಜೆಪಿ ಗೆಲುವು, ಖಾತೆ ತೆರೆಯದ ಕಾಂಗ್ರೆಸ್
LIVE
ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಫೆ.8ರಂದು ಮತದಾನದ ನಂತರ ಪ್ರಕಟವಾಗಿದ್ದ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಆಪ್) ಮುನ್ನಡೆಯನ್ನು ಖಚಿತಪಡಿಸಿ, ಕೇಜ್ರಿವಾಲ್ ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದು ಖಚಿತ ಎಂಬ ಅಭಿಪ್ರಾಯ ನೀಡಿದ್ದವು. ಅದರಂತೆಯೇ ಆಪ್ 70 ಕ್ಷೇತ್ರಗಳಲ್ಲಿ 55 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದ್ದು, 7ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು 1 ರಲ್ಲಿ ಮುನ್ನಡೆಯಲ್ಲಿದೆ. ಕಾಂಗ್ರೆಸ್ ಖಾತೆಯನ್ನೇ ತೆರಿದಿಲ್ಲ. ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ತಾಜಾ ಅಪ್‌ಡೇಟ್ಸ್ ಇಲ್ಲಿ ಲಭ್ಯ.
ಎಸ್ಸಿ ಮೀಸಲು ಕ್ಷೇತ್ರದ ಎಲ್ಲಾ 12 ಸ್ಥಾನಗಳು ಎಎಪಿ ಪಾಲಿಗೆ
11:5311 Feb 2020
ಇತ್ತೀಚಿನ ವರದಿ ಬಂದಾಗ ಆಪ್ 28, ಬಿಜೆಪಿ 2 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು 35 ಸ್ಥಾನಗಳಲ್ಲಿ ಆಪ್, 5ರಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.
10:5311 Feb 2020
ಜನರ ತೀರ್ಪಿಗೆ ತಲೆ ಬಾಗುತ್ತೇವೆ...
भाजपा इस जनादेश को स्वीकारते हुए रचनात्मक विपक्ष की भूमिका निभाएगी और प्रदेश के विकास से जुड़े हर मुद्दे को प्रमुखता से उठाएगी।इस विश्वास के साथ की आम आदमी पार्टी की सरकार दिल्ली का विकास करेगी, मैं श्री @ArvindKejriwal और उनकी पार्टी को बधाई देता हूँ।