ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಮೇ 3ರ ವರೆಗೂ ದೇಶದಾದ್ಯಂತ ಲಾಕ್‌ಡೌನ್‌ ಮುಂದುವರಿಕೆ, 7 ವಿಚಾರಗಳಲ್ಲಿ ನಿಮ್ಮ ಸಹಕಾರ ಅಗತ್ಯ: ಪ್ರಧಾನಿ ಮೋದಿ
LIVE

ಎರಡನೇ ಹಂತದ ಲಾಕ್‌ಡೌನ್‌ (2.0) ಹೇಗಿರುತ್ತದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿವರಿಸಿದ್ದಾರೆ. ಈಗಾಗಲೇ ಜಾರಿಯಲ್ಲಿರುವ 21 ದಿನಗಳ ದಿಗ್ಬಂಧನ ಮಂಗಳವಾರಕ್ಕೆ ಕೊನೆಯಾಗಲಿದ್ದು, ಮೇ 3ರ ವರೆಗೂ ಲಾಕ್‌ಡೌನ್‌ ವಿಸ್ತರಿಸುತ್ತಿರುವುದಾಗಿ ಘೋಷಿಸಿದ್ದಾರೆ. ರೈತರು ಹಾಗೂ ಕೂಲಿ ಕಾರ್ಮಿಕರಿಗೆ ಅಗತ್ಯವಾದ ಕೆಲವು ಸಡಿಕೆಗಳನ್ನು ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಲಿದೆ. ಸುಧಾರಣೆ ಕಂಡುಬಂದ ಕಡೆಗಳಲ್ಲಿ ಏ.20ರಿಂದ ಹಂತ ಹಂತವಾಗಿ ಲಾಕ್‌ಡೌನ್ ತೆರವುಗೊಳ್ಳಲಿದೆ.
Published : 14 ಏಪ್ರಿಲ್ 2020, 3:52 IST
ಫಾಲೋ ಮಾಡಿ
05:5114 Apr 2020

ಸುಧಾರಿಸಿದ ಕಡೆಗಳಲ್ಲಿ ಹಂತ ಹಂತವಾಗಿ ಲಾಕ್‌ಡೌನ್‌ ತೆರವು

05:1214 Apr 2020

ಮೋದಿ ಹೇಳಿದ ಸಪ್ತ ಪದಿ: ಈ ವಿಚಾರಗಳಲ್ಲಿ ನಿಮ್ಮ ಸಹಕಾರ ಇರಲಿ

05:0214 Apr 2020

ಸುಧಾರಣೆ ಕಂಡುಬಂದ ಕಡೆಗಳಲ್ಲಿ ಏ.20ರಿಂದ ಹಂತ ಹಂತವಾಗಿ ಲಾಕ್‌ಡೌನ್ ತೆರವು

04:5414 Apr 2020

ಏಳು ವಿಚಾರಗಳಲ್ಲಿ ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ

04:5314 Apr 2020

ಈಗಾಗಲೇ ಇರುವ 600ಕ್ಕೂ ಹೆಚ್ಚು ಕೋವಿಡ್ ಆಸ್ಪತ್ರೆಗಳ ಸೌಕರ್ಯವನ್ನು ಮತ್ತಷ್ಟು ವಿಸ್ತರಿಸಲಾಗುತ್ತದೆ.

04:5114 Apr 2020

ದಿನಗೂಲಿ ನೌಕರರು, ಬಡವರಿಗೆ ಆದ್ಯತೆ ನೀಡಿ, ಅವರ ಜೀವನ ಸುಧಾರಿಸಲು ಕ್ರಮ. ರಾವಿ ಬೆಳೆಯ ಈ ಋತುವಿನ ಸಂದರ್ಭದಲ್ಲಿ ರೈತರಿಗೆ ಸಂಕಷ್ಟ ಕಡಿಮೆಯಾಗಲು ಕ್ರಮವಹಿಸಾಲಿದೆ. ಆ ಕುರಿತು ಮಾರ್ಗದರ್ಶಿ ಸೂತ್ರದಲ್ಲಿ ವಿವರಣೆ ನೀಡಲಾಗುತ್ತದೆ.

04:5014 Apr 2020

ನಾಳೆ (ಏಪ್ರಿಲ್‌ 15) ಸರ್ಕಾರವು ವಿಸ್ತೃತ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಲಿದೆ

04:4714 Apr 2020

ಏಪ್ರಿಲ್‌ 20ರ ವರೆಗೆ ಎಲ್ಲ ರಾಜ್ಯ, ಊರುಗಳಲ್ಲಿ ಕಟ್ಟು ನಿಟ್ಟಿನ ಗಮನವಹಿಸಬೇಕು. ಈ ಅಗ್ನಿ ಪರೀಕ್ಷೆಯಲ್ಲಿ ಸಫಲವಾಗುವ ಹಾಟ್‌ಸ್ಪಾಟ್‌ಗಳಿಗೆ ಕೊಂಚ ಸಡಿಲಿಕೆ ನೀಡಲಾಗುತ್ತದೆ. ಅತ್ಯಗತ್ಯ ವಿಷಯಗಳಿಗೆ ಮಾತ್ರ ಅನುಮತಿ ದೊರೆಯಲಿದೆ. ಆದರೆ, ಅದು ಕಟ್ಟುನಿಟ್ಟಾಗಿರುತ್ತದೆ.

04:4614 Apr 2020

ಕೊರೊನಾ ಹಾಟ್‌ಸ್ಪಾಟ್‌ ಆಗಿ ಪರಿಣಮಿಸುವ ಪ್ರದೇಶಗಳನ್ನೂ ಗುರುತಿಸಿ ಕಠೋರ ಕ್ರಮವಹಿಸಬೇಕಿದೆ

04:4414 Apr 2020

ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಾಟ್‌ಸ್ಪಾಟ್‌ಗಳಲ್ಲಿ ಹಿಂದಿಗಿಂತಲು ಹೆಚ್ಚಿನ ಗಮನ, ಕಟ್ಟುನಿಟ್ಟಾಗಬೇಕು.

ADVERTISEMENT
ADVERTISEMENT