ಮಂಡ್ಯದಂತೆಯೇ ಕುತೂಹಲಕ್ಕೆ ಕಾರಣವಾಗಿರುವ ಕ್ಷೇತ್ರಗಳೆಂದರೆ ಅದು ಹಾಸನ, ಬೆಂಗಳೂರು ದಕ್ಷಿಣ ಮತ್ತು ಚಿಕ್ಕಬಳ್ಳಾಪುರ. ದೇವೇಗೌಡರ ಮೊಮ್ಮಗ ಪ್ರಜ್ವಲ್ ಸ್ಪರ್ಧೆ ಕಾರಣಕ್ಕೆ ಹಾಸನ, ಬಿಜೆಪಿ ಹಿರಿಯ ನಾಯಕರಾಗಿದ್ದ ದಿವಂಗತ ಅನಂತ್ಕುಮಾರ ಅವರ ಅನುಪಸ್ಥಿತಿಯಲ್ಲಿ ಯುವ ನಾಯಕ ತೇಜಸ್ವಿ ಸೂರ್ಯ ಸ್ಪರ್ಧಿಸುತ್ತಿರುವ ಕಾರಣಕ್ಕೆ ಬೆಂಗಳೂರು ದಕ್ಷಿಣ, ಮೊಯ್ಲಿ–ಬಚ್ಚೇಗೌಡ ನಡುವೆ ನೇರ ಪೈಪೋಟಿ ಎದುರಾಗಿರುವ ಕಾರಣಕ್ಕೆ ಚಿಕ್ಕಬಳ್ಳಾಪುರ ಹೆಚ್ಚು ಸದ್ದು ಮಾಡುತ್ತಿವೆ. ಈ ಕ್ಷೇತ್ರಗಳ ಕಣ ಚಿತ್ರಣ ಹೇಗಿದೆ ಎಂಬುದರ ಕುರಿತು ಪ್ರಜಾವಾಣಿ ಕ್ಷೇತ್ರ ನೋಟ ಕಟ್ಟಿಕೊಟ್ಟಿದೆ.

‘ತೆನೆ’ ಮೇಲೆ ಸಿಟ್ಟಿನ ಗಂಟು; ಅಭಿಮಾನವೂ ಉಂಟು

ರಾಜಕೀಯವನ್ನೇ ಉಂಡು, ಹೊದ್ದು ಮಲಗುವ ಹಾಸನ ಜಿಲ್ಲೆಯಲ್ಲೀಗ ಚುನಾವಣಾ ಕಣ ರಂಗೇರಿದೆ. ಆದರೆ, ಇದುವರೆಗಿನ ಚುನಾವಣೆಗಳಲ್ಲಿ ಬದ್ಧ ವೈರಿಗಳಾಗಿ ಕಾದಾಡಿದ್ದ ಕಾಂಗ್ರೆಸ್–ಜೆಡಿಎಸ್ ಈ ಬಾರಿ ಮಿತ್ರರಾಗಿ ಕಣಕ್ಕಿಳಿದಿರುವುದನ್ನು ಎರಡೂ ಪಕ್ಷಗಳ ಕಾರ್ಯಕರ್ತರಿಗೇ ಅರಗಿಸಿಕೊಳ್ಳಲು ಆಗುತ್ತಿಲ್ಲ.

‘ಅನಂತ’ ಛಾಯೆ ಮಧ್ಯೆ ಕೈ– ಕಮಲ ಫೈಟ್
1991ರಲ್ಲಿ ಬಿಜೆಪಿಯಿಂದ ವೆಂಕಟಗಿರಿ ಗೌಡ ಮೊದಲ ಬಾರಿಗೆ ಬೆಂಗಳೂರು ದಕ್ಷಿಣದಿಂದ ಆರಿಸಿ ಬಂದಿದ್ದರು. ಅಲ್ಲಿಂದೀಚೆಗೆ ಈ ಕ್ಷೇತ್ರ ಕಮಲ ಪಕ್ಷದ ಭದ್ರಕೋಟೆಯಾಗಿ ಬದಲಾಗಿದೆ. 1996ರಿಂದ ಅನಂತಕುಮಾರ್ ಅವರನ್ನು ನಿರಂತರ ಗೆಲ್ಲಿಸುತ್ತಲೇ ಬಂದಿದ್ದ ಮತದಾರರಿಗೆ, ಈ ಬಾರಿ ಅವರ ಅನುಪಸ್ಥಿತಿ ಕಾಡುತ್ತಿದೆ. ಅಷ್ಟರಮಟ್ಟಿಗೆ ಇಲ್ಲಿ ‘ಅನಂತ’ ಪ್ರಭಾವವಿದೆ.

‘ಕೈ’ ಕೋಟೆಯಲ್ಲಿ ‘ಕಮಲ’ ಅರಳಿಸುವ ತವಕ

ಹುಟ್ಟಿದಾರಭ್ಯ ಕಾಂಗ್ರೆಸ್ ಭದ್ರಕೋಟೆ ಎನಿಸಿಕೊಂಡಿರುವ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸತತ ಗೆಲುವಿನಿಂದ ಬೀಗಿರುವ ‘ಕೈ’ ಪಾಳೆಯಕ್ಕೆ ಈ ಬಾರಿಯ ಚುನಾವಣೆ ನುಂಗಲಾರದ ಬಿಸಿತುಪ್ಪದಂತಾಗಿದೆ. ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ವರ್ಚಸ್ಸು ವೃದ್ಧಿಸಿಕೊಂಡಿರುವ ಬಿಜೆಪಿ ಪ್ರಸ್ತುತ ಕಾಂಗ್ರೆಸ್ಗೆ ಕಠಿಣ ಸವಾಲು ಒಡ್ಡಿದೆ.

ಸಂದರ್ಶನಗಳು

ವಿರೋಧಿಗಳ ವೈಫಲ್ಯವೇ ನನ್ನ ಗೆಲುವು

ಕಳೆದ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು, ರೋಚಕ ಪೈಪೋಟಿ ನಡೆಸಿ ಪರಾಭವಗೊಂಡಿದ್ದ ಬಿ.ಎನ್.ಬಚ್ಚೇಗೌಡರು ಈ ಬಾರಿಯೂ ಸ್ಪರ್ಧೆ ಮಾಡಿದ್ದಾರೆ. ‘ಮೋದಿ ಜನಪ್ರಿಯತೆ, ಮೊಯಿಲಿ ವೈಫಲ್ಯಗಳು, ಅನುಕಂಪ ಈ ಬಾರಿ ಗೆಲುವಿನ ದಡ ಸೇರಿಸಲಿದೆ’ ಎನ್ನುತ್ತಾರೆ ಬಚ್ಚೇಗೌಡ.

‘ಇದು ಸಿದ್ಧಾಂತಗಳ ಹೋರಾಟ’

ಜೈಪುರ ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕ್ರೀಡಾಪಟು ರಾಜ್ಯವರ್ಧನ್ ರಾಥೋಡ್ ಅವರ ವಿರುದ್ಧ ಕಾಂಗ್ರೆಸ್ ಪಕ್ಷವು ಇನ್ನೊಬ್ಬ ಕ್ರೀಡಾಪಟು ಕೃಷ್ಣಾ ಪೂನಿಯಾ ಅವರನ್ನು ಕಣಕ್ಕಿಳಿಸಿದೆ. ಒಲಿಂಪಿಕ್ಸ್ನಲ್ಲಿ ಮೂರು ಬಾರಿ ಭಾರತವನ್ನು ಪ್ರತಿನಿಧಿಸಿರುವ ಪೂನಿಯಾ ಅವರನ್ನು ಪ್ರಜಾವಾಣಿ ಸಂದರ್ಶಿಸಿದೆ.

‘ಬಿಜೆಪಿ ಏನು ಮಾಡಿದೆ ಎಂಬುದು ಪ್ರಶ್ನೆ’

ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಭಾರಿ ಹೋರಾಟ ಏರ್ಪಟ್ಟಿದೆ. ಕಾಂಗ್ರೆಸ್ನಿಂದ ಮಾಜಿ ಸಿಎಂ ಸುಶೀಲ್ಕುಮಾರ್ ಶಿಂಧೆ, ಬಿಜೆಪಿಯಿಂದ ಲಿಂಗಾಯತ ಸ್ವಾಮೀಜಿ ಡಾ.ಜೈಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿ, ವಂಚಿತ ಬಹುಜನ ಅಘಾಡಿಯಿಂದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಕಣಕ್ಕಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಸುಶೀಲ್ ಕುಮಾರ್ ಶಿಂಧೆ ಅವರೊಂದಿಗೆ ನಡೆಸಿದ ಸಂದರ್ಶನದ ಸಾರಾಂಶವಿದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.