ಬಜೆಟ್ 2020 | ಹೊಸ ತೆರಿಗೆ ನೀತಿ, ರೈತರಿಗಾಗಿ ಕಿಸಾನ್ ಎಕ್ಸ್‌ಪ್ರೆಸ್: ಇಲ್ಲಿದೆ ಬಜೆಟ್ ಸಮಗ್ರ ಮಾಹಿತಿ
LIVE
ರಾಷ್ಟ್ರ ಲಾಂಛನವಿರುವ ಕೆಂಪು ವಸ್ತ್ರದಲ್ಲಿ ಸುತ್ತಿದ ಬಜೆಟ್ ದಾಖಲೆಯನ್ನು ಕೈಲಿ ಹಿಡಿದ ನಿರ್ಮಲಾ ಸೀತಾರಾಮನ್‌ರ ಮುಗುಳ್ನಗೆ ಆತ್ಮವಿಶ್ವಾಸ ತುಳುಕಿಸುತ್ತಿದೆ. ವಿಶ್ವದಲ್ಲಿ ಕಂಡು ಬರುತ್ತಿರುವ ಆರ್ಥಿಕ ಹಿಂಜರಿತ ಮತ್ತು ದೇಶದಲ್ಲಿ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬಜೆಟ್ ಬಗ್ಗೆ ಜನರಲ್ಲಿ ಕುತೂಹಲ ಮನೆಮಾಡಿದೆ. ನಿನ್ನೆ (ಜ.31) ಸಂಸತ್ತಿನಲ್ಲಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ‘ವಿಶ್ವದ ಆರ್ಥಿಕ ಸ್ಥಿತಿಯನ್ನು ನಮ್ಮ ದೇಶಕ್ಕೆ ಪೂರಕವಾಗಿ ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ಯೋಚಿಸಿ’ ಎಂದು ಸಲಹೆ ಮಾಡಿದ್ದರು. ಆರ್ಥಿಕ ಸಮೀಕ್ಷೆಯಲ್ಲಿದ್ದ ಅಂಕಿಅಂಶಗಳು ಸಹ ಬಜೆಟ್ ಬಗ್ಗೆ ಆಶಾವಾದವನ್ನೂ, ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿರುವ ಮುನ್ಸೂಚನೆಯನ್ನೂ ನೀಡಿತ್ತು. 2025ರ ವೇಳೆಗೆ 5 ಶತಕೋಟಿ ಡಾಲರ್ ಆರ್ಥಿಕ ಶಕ್ತಿಯಾಗುವ ಕನಸು ಬಿತ್ತಿದ್ದ ಮೋದಿ ಸರ್ಕಾರದ 2ನೇ ಅವಧಿಯ 2ನೇ ಬಜೆಟ್‌ನ ಮುಖ್ಯಾಂಶಗಳು ಇಲ್ಲಿವೆ.