ವಿಮಾನ, ಹೆಲಿಕಾಪ್ಟರ್ ಪತನ: ನಿಲ್ಲದ ಸರಣಿ

*ಕಳೆದ ಜುಲೈನಲ್ಲಿ ರಾಜಸ್ಥಾನದ ಬಾಡ್‌ಮೇರ್‌ನಲ್ಲಿ ಮಿಗ್–21 ತರಬೇತಿ ವಿಮಾನ ಪತನವಾಗಿ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದರು
*ಸೇನಾಪಡೆಯ ಸುಧಾರಿತ ಲಘು ಹೆಲಿಕಾಪ್ಟರ್ (ಎಎಲ್‌ಎಚ್) ಅರುಣಾಚಲ ಪ್ರದೇಶದ ಟುಟಿಂಗ್ ಎಂಬಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಪತನವಾಗಿತ್ತು
*2021ರ ಡಿ.8ರಂದು ತಮಿಳುನಾಡಿನಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಅಂದಿನ ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಸೇರಿ ಹಲವು ಸೇನಾ ಸಿಬ್ಬಂದಿ ಮೃತಪಟ್ಟಿದ್ದರು
*2021ರ ಆ.3ರಂದು ಪಠಾಣ್‌ಕೋಟ್‌ನ ರಂಜಿತ್ ಸಾಗರ್ ಜಲಾಶಯದಲ್ಲಿ ಸುಧಾರಿತ ಲಘು ಹೆಲಿಕಾಪ್ಟರ್ ಪತನವಾಗಿತ್ತು
*2019ರ ಅಕ್ಟೋಬರ್‌ನಲ್ಲಿ, ಉತ್ತರ ಕಮಾಂಡ್‌ನ ಅಂದಿನ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಹಾಗೂ ಹಿರಿಯ ಅಧಿಕಾರಿಗಳು ಸಂಚರಿಸುತ್ತಿದ್ದ ಧ್ರುವ್ ಹೆಲಿಕಾಪ್ಟರ್ ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ತುರ್ತು ಭೂಸ್ಪರ್ಶದ ವೇಳೆ ಅಪಘಾತಕ್ಕೀಡಾಗಿತ್ತು
*2017ರಿಂದ 2021ರ ಅವಧಿಯಲ್ಲಿ 15 ಸೇನಾ ಹೆಲಿಕಾಪ್ಟರ್‌ಗಳು ಪತನವಾಗಿ 31 ಮಂದಿ ಮೃಪಟ್ಟಿದ್ದಾರೆ. ನಾಲ್ಕು ಎಎಲ್‌ಎಚ್, ನಾಲ್ಕು ಚೀತಾ, ಎರಡು ಎಎಲ್ಎಚ್ (ಡಬ್ಲ್ಯೂಎಸ್‌ಐ), ಮೂರು ಮಿಗ್–17ವಿ5, ಒಂದು ಎಂಐ–17 ಹಾಗೂ ಒಂದು ಚೇತಕ್ ಹೆಲಿಕಾಪ್ಟರ್ ಪತನವಾಗಿವೆ
*ಕಳೆದ ಐದು ವರ್ಷಗಳಲ್ಲಿ ಹೆಲಿಕಾಪ್ಟರ್ ಮತ್ತು ವಿಮಾನ ಅವಘಡಗಳಲ್ಲಿ 42 ರಕ್ಷಣಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಅವರು ರಾಜ್ಯಸಭೆಗೆ ಕಳೆದ ಮಾರ್ಚ್‌ನಲ್ಲಿ ಮಾಹಿತಿ ನೀಡಿದ್ದರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.