ಸ್ಮಶಾನ ಕಾರ್ಮಿಕರನ್ನು ನೇಮಿಸಿ, ಕನಿಷ್ಠ ವೇತನ ನೀಡುವುದರ ಜೊತೆಗೆ ಅಗತ್ಯ ಸೌಲಭ್ಯ ಹಾಗೂ ಗುಂಡಿ ತೋಡುವ ಪರಿಕರ ನೀಡಬೇಕು. ಸ್ಮಶಾನ ಹೊಂದಿರದ ಊರುಗಳಲ್ಲಿ ಅದಕ್ಕಾಗಿ ಜಾಗ ಮೀಸಲಿಡಬೇಕು ಎಂದು ಕೋರಿ ವರ್ಷಗಳಿಂದ ಹೋರಾಟ ನಡೆದಿದೆ. ಸ್ಪಂದನೆ ಸಿಕ್ಕಿಲ್ಲ.
ಯು.ಬಸವರಾಜ, ಸಂಚಾಲಕ, ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘ
ಸಾರ್ವಜನಿಕ ಸ್ಮಶಾನಗಳಲ್ಲಿ ಕಾರ್ಯ ನಿರ್ವಹಿಸಲು ಅಗತ್ಯ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು. ಸ್ಮಶಾನ ಸಮಸ್ಯೆ ಇರುವ ಕಡೆ ಸರ್ಕಾರದ ಖರಾಬು ಭೂಮಿ ನೀಡಬೇಕು ಎಂಬ ನಿಯಮವಿದೆ. ಆದರೆ, ಯಾವುದೂ ಅನುಷ್ಠಾನವಾಗಿಲ್ಲ. ಸಂಪೂರ್ಣ ನಿರ್ಲಕ್ಷ್ಯ ತೋರಲಾಗುತ್ತಿದೆ.