ಭಾನುವಾರ, ಜೂನ್ 13, 2021
28 °C
ಫ್ಯಾಕ್ಟ್‌ಚೆಕ್‌

ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳು ಕೇಂದ್ರದೊಂದಿಗೆ ಕೈ ಜೋಡಿಸುತ್ತಿಲ್ಲವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕೋವಿಡ್‌ ವಿರುದ್ಧ ಹೋರಾಡಲು ನರೇಂದ್ರ ಮೋದಿ ಅವರ ಸರ್ಕಾರ ಶತಾಯಗತಾಯ ಹೋರಾಡುತ್ತಿದೆ. ದೆಹಲಿಗೆ 8 ಪಿಎಸ್‌ಎ ಆಮ್ಲಜನಕ ತಯಾರಿಕಾ ಘಟಕಗಳನ್ನು ಮಂಜೂರು ಮಾಡಲಾಗಿದೆ. ಆದರೆ, ಅದರಲ್ಲಿ ಎರಡನ್ನು ಮಾತ್ರ ದೆಹಲಿ ಸರ್ಕಾರ ಸ್ಥಾಪನೆ ಮಾಡಿದೆ. ಮಹಾರಾಷ್ಟ್ರಕ್ಕೆ 10 ಘಟಕಗಳನ್ನು ಮಂಜೂರು ಮಾಡಿದ್ದು, ರಾಜ್ಯ ಸರ್ಕಾರ 1 ಘಟಕವನ್ನು ಮಾತ್ರ ಸ್ಥಾಪನೆ ಮಾಡಿದೆ. ಆದರೆ ಗುಜರಾತ್‌ಗೆ 11 ಘಟಕಗಳನ್ನು ಹಂಚಿಕೆ ಮಾಡಿದ್ದು, ಇದರಲ್ಲಿ 11 ಘಟಕಗಳೂ ಕಾರ್ಯಾರಂಭ ಮಾಡಿವೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ (ಸಂಘಟನಾ) ಕಾರ್ಯದರ್ಶಿ ಬಿ.ಎಲ್‌.ಸಂತೋಷ್ ಅವರು ಟ್ವೀಟ್ ಮಾಡಿದ್ದಾರೆ. ಇದನ್ನು ದೇಶದಾದ್ಯಂತ ಹಲವರು ಸಾವಿರಾರು ಬಾರಿ ರಿಟ್ವೀಟ್ ಮಾಡಿದ್ದಾರೆ.

 

ಆದರೆ ಈ ಟ್ವೀಟ್‌ನಲ್ಲಿ ಇರುವ ಮಾಹಿತಿ ತಪ್ಪಾಗಿದೆ. ಈ ಘಟಕಗಳನ್ನು ಸ್ಥಾಪನೆ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲ. ಗುತ್ತಿಗೆ ಪಡೆಯುವ ಕಂಪನಿಯೇ ಈ ಘಟಕಗಳನ್ನು ಸ್ಥಾಪಿಸಲಿದೆ ಎಂದು ಟೆಂಡರ್‌ನಲ್ಲಿ ಉಲ್ಲೇಖಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಕೇಂದ್ರೀಯ ಮೆಡಿಕಲ್ ಸೇವಾ ಸೊಸೈಟಿಯ ಮೇಲ್ವಿಚಾರಣೆಯಲ್ಲಿ ಈ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ದೆಹಲಿ ಹೈಕೋರ್ಟ್‌ಗೆ ಆರೋಗ್ಯ ಸಚಿವಾಲಯವು ಸಲ್ಲಿಸಿರುವ ಪ್ರಮಾಣ ಪತ್ರದ ಪ್ರಕಾರ ದೆಹಲಿಯಲ್ಲಿ ಒಂದು ಘಟಕ ಮತ್ತು ಗುಜರಾತ್‌ನಲ್ಲಿ ಮೂರು ಘಟಕ ಸ್ಥಾಪನೆಯಾಗಿದೆ. ಬಿ.ಎಲ್.ಸಂತೋಷ್ ತಪ್ಪು ಮಾಹಿತಿ ಹಂಚಿಕೊಂಡಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು