ಗುರುವಾರ , ಸೆಪ್ಟೆಂಬರ್ 23, 2021
24 °C

ಫ್ಯಾಕ್ಟ್‌ಚೆಕ್ | ಅಫ್ಗಾನಿಸ್ತಾನದಿಂದ ವಾಯುಪಡೆಯ ವಿಮಾನದಿಂದ 800 ಭಾರತೀಯರ ತೆರವು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಅಫ್ಗಾನಿಸ್ತಾನದಿಂದ ಮಂಗಳವಾರ 800 ಭಾರತೀಯರನ್ನು ವಾಯುಪಡೆಯ ಸಿ-17 ಗ್ಲೋಬ್ ಮಾಸ್ಟರ್ ವಿಮಾನದ ಮೂಲಕ ತೆರವು ಮಾಡಲಾಗಿದೆ. 670 ಜನರನ್ನು ಈ ಹಿಂದೆ ಒಂದೇ ಬಾರಿ ತೆರವು ಮಾಡಿದ್ದು, ದಾಖಲೆಯಾಗಿತ್ತು. ಈಗ 800 ಮಂದಿಯನ್ನು ಒಮ್ಮೆಲೇ ತೆರವು ಮಾಡುವ ಮೂಲಕ ವಾಯುಪಡೆ ಹೊಸ ದಾಖಲೆ ನಿರ್ಮಿಸಿದೆ’ ಎಂಬ ವಿವರ ಇರುವ ಸಂದೇಶ, ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸರಕುಸಾಗಣೆ ವಿಮಾನವೊಂದರಲ್ಲಿ ನೂರಾರು ಜನರು ಕುಳಿತಿರುವ ಚಿತ್ರವೂ ಈ ಪೋಸ್ಟರ್‌ಗಳ ಜತೆ ವೈರಲ್ ಆಗಿದೆ.

ಇದು ಸುಳ್ಳು ಸುದ್ದಿ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ‘ವೈರಲ್ ಆಗಿರುವ ಚಿತ್ರಕ್ಕೂ, ಅದರಲ್ಲಿ ಹಂಚಿಕೊಳ್ಳಲಾಗಿರುವ ವಿವರಕ್ಕೂ ಸಂಬಂಧವಿಲ್ಲ. 2013ರಲ್ಲಿ ಪಿಲಿಫ್ಫೀನ್ಸ್‌ನಲ್ಲಿ ಪ್ರವಾಹ ಸಂತ್ರಸ್ತರನ್ನು ಅಮೆರಿಕದ ವಾಯುಪಡೆ ತನ್ನ ವಿಮಾನದಲ್ಲಿ ತೆರವು ಮಾಡಿತ್ತು. ಆ ಕಾರ್ಯಾಚರಣೆಯಲ್ಲಿ 670 ಜನರನ್ನು ತೆರವು ಮಾಡಲಾಗಿತ್ತು. ಭಾರತವು ಕಾಬೂಲ್‌ನಿಂದ ಈವರೆಗೆ ಎರಡು ಬಾರಿ ಭಾರತೀಯರನ್ನು ತೆರವು ಮಾಡಿದೆ. ಎರಡೂ ಬಾರಿ ಸಿ-17 ಗ್ಲೋಬ್ ಮಾಸ್ಟರ್ ವಿಮಾನ ಬಳಸಲಾಗಿದೆ. ಒಮ್ಮೆ 46 ಮತ್ತು ಎರಡನೇ ಬಾರಿ 120 ಜನರನ್ನು ಕರೆತರಲಾಗಿದೆ. 2013ರ ಚಿತ್ರವನ್ನು ಈಗ ತಪ್ಪಾಗಿ ಬಳಸಿಕೊಂಡು ಸುಳ್ಳು ಸುದ್ದಿ ಸೃಷ್ಟಿಸಲಾಗಿದೆ’ ಎಂದು ದಿ ಲಾಜಿಕಲ್ ಇಂಡಿಯನ್ ವಿವರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು